ಪಾಂಡವಪುರ: ತಾಲ್ಲೂಕಿನಲ್ಲಿ 99 ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಮತ್ತು 81 ಗ್ರಾಮಗಳಿಗೆ ಶುದ್ಧ ನೀರಿನ ಘಟಕಗಳು ಹಾಗೂ ಜಲಜೀವನ್ ಮಿಷನ್ ಯೋಜನೆಗಳಿದ್ದರೂ ವಿದ್ಯುತ್ ಸಮಸ್ಯೆ ಮತ್ತು ಸಮರ್ಪಕ ನೀರು ನಿರ್ವಹಣೆ ಕೊರತೆಯಿಂದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಕೆ.ಆರ್.ಎಸ್. ಹಿನ್ನೀರಿನ ಗ್ರಾಮಗಳು ಸೇರಿದಂತೆ ಅರಳಕುಪ್ಪೆ ಮತ್ತು 65 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ 2015–16ರಲ್ಲಿ ಅನುಷ್ಠಾನಗೊಂಡರೂ, ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ಕಾವೇರಿ ನದಿಯಿಂದ ನೀರು ಸರಬರಾಜು ಮಾಡಿಕೊಂಡು ನೀರನ್ನು ಶುದ್ಧೀಕರಿಸುವ ಘಟಕದ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದ್ದರೂ, ಪಂಚಾಯಿತಿ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದಾಗಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.

‘4–5 ದಿನಗಳಿಗೊಮ್ಮೆ ಮಾತ್ರ ನೀರು ದೊರೆಯುತ್ತಿದೆ. ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರು ಸಾಕಷ್ಟು ಸಿಗದೆ ಪರದಾಡುವಂತಾಗಿದೆ’ ಎಂದು ಕೆ.ಆರ್.ಎಸ್. ಹಿನ್ನೀರಿನ ಗ್ರಾಮಗಳಾದ ಮಲ್ಲಿಗೆರೆ ರಾಜೇಶ್, ಅಂತನಹಳ್ಳಿ ಎ.ಎಚ್. ಬಾಲಕೃಷ್ಣ, ಬನ್ನಂಗಾಡಿ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ತೊಣ್ಣೂರು ಕೆರೆಯಿಂದ ಮೇಲುಕೋಟೆ ಸೇರಿದಂತೆ ಸುತ್ತಮುತ್ತಲಿನ 34 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡಿದ್ದರೂ ನಿರ್ವಹಣೆ ಮತ್ತು ವಿದ್ಯುತ್ ಸಮಸ್ಯೆಯಿಂದ ನೀರಿನ ಕೊರತೆ ಉಂಟಾಗಿದೆ. ಮೇಲುಕೋಟೆಗೆ 4–5 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಲ್ಲೂಕಿನಲ್ಲಿ 177 ಹಳ್ಳಿಗಳಿಗೂ ₹65.28 ಕೋಟಿ ಅಂದಾಜು ವೆಚ್ಚದಲ್ಲಿ 2020ರಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ‘ಜಲಜೀವನ್ ಮಿಷನ್ (ಜೆಜೆಎಂ) ಅಥವಾ ‘ಮನೆ–ಮನೆಗೆ ಗಂಗೆ’ ಯೋಜನೆಯ ಕಾಮಗಾರಿ ತೆವಳುತ್ತಾ ಸಾಗಿದೆ. ಈಗ 177 ಗ್ರಾಮಗಳ ಪೈಕಿ 143 ಗ್ರಾಮಗಳಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಈ ಹಿಂದಿನ ನೀರು ಸರಬರಾಜು ವ್ಯವಸ್ಥೆಯನ್ನೇ ಬಳಸಿಕೊಂಡು ಮನೆ–ಮನೆಗೆ ಪೈಪ್ಲೈನ್ ಅಳವಡಿಸಿ ನಲ್ಲಿ ಹಾಕಲಾಗಿದೆ.

ನಲ್ಲಿಯಿಂದ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಬೇಸತ್ತ ಮಹಿಳೆಯರು ಮೀಟರ್ ಕಿತ್ತೆಸೆದು ಈ ಹಿಂದಿನ ನೀರಿನ ಸೌಲಭ್ಯವನ್ನೇ ಬಳಸಿಕೊಳ್ಳುತ್ತಿದ್ದಾರೆ. ಗ್ರಾಮಗಳಲ್ಲಿರುವ ಹಲವು ಮನೆಗಳಿಗೆ ನೀರು ಪೂರೈಕೆಯಾಗುತ್ತಿದ್ದರೆ, ಮತ್ತಷ್ಟು ಮನೆಗಳಿಗೆ ನೀರೇ ಬರುತ್ತಿಲ್ಲ.

‘ಜೆಜೆಎಂ ಯೋಜನೆಯನ್ನು ನಿರ್ವಹಣೆ ಮಾಡಲು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಜಲಜೀವನ್ ಮಿಷನ್ ಯೋಜನೆ ನಮ್ಮ ಕಾಲೊನಿಗೆ ತಲುಪಿಯೇ ಇಲ್ಲ’ ಎಂದು ಕೆ.ಬೆಟ್ಟಹಳ್ಳಿ ಪಂಚಾಯಿತಿಯ ಎಂ.ಬೆಟ್ಟಹಳ್ಳಿ ಗ್ರಾಮದ ಪರಿಶಿಷ್ಟರ ಕಾಲೋನಿಯ ಅಂಕಯ್ಯ, ಧರ್ಮ, ಎಂ.ಎಸ್.ಕೃಷ್ಣ, ಜ್ಯೋತಿ ಎಂದು ದೂರಿದರು.

‘2024 ಮಾರ್ಚ್ನಲ್ಲಿ ಪ್ರಾರಂಭವಾದ ಅಮೃತ ಯೋಜನೆಯ ಕಾಮಗಾರಿ ಶೇ 30ರಷ್ಟು ಬಾಕಿ ಇದೆ. ಅಮೃತ ಯೋಜನೆಯ ಮನೆ– ಮನೆಗೆ ನೀರು ಪೂರೈಕೆ ಕಾರ್ಯಕ್ರಮದ ಪೂರ್ಣ ಅನುಷ್ಠಾನವು ಇನ್ನು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಪಟ್ಟಣದ ಜನರಿಗೆ ಸಂಪೂರ್ಣವಾಗಿ ನೀರು ದೊರೆಯಲಿದೆ’ ಎನ್ನುತ್ತಾರೆ ಪುರಸಭೆ ಎಂಜಿನಿಯರ್ ಚೌಡಪ್ಪ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-40-911288882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.