ಪಾಂಡವಪುರ: ತಾಲ್ಲೂಕಿನ ಕುಂತಿಬೆಟ್ಟದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ 3 ಮಂದಿಯನ್ನು ಪೊಲೀಸರು ಕ್ಷೀಪ್ರ ದಾಳಿ ನಡೆಸಿ ಬಂಧಿಸಿದ್ದಾರೆ. 3 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಆರೋಪಿಗಳಿಂದ ಸುಮಾರು ₹10 ಲಕ್ಷ ಮೌಲ್ಯದ 20 ಕೆ.ಜಿ. 640 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಾಂಡವಪುರ ಪಟ್ಟಣದ ಶಾಂತಿ ನಗರದ ಸ್ವಾಮಿಗೌಡ ಅವರ ಪುತ್ರ ಶ್ರೇಯಸ್ ಗೌಡ (ಹಾಲಿ ವಾಸ ಹೆಬ್ಬಾಳ್ ಇಂಡಸ್ಟ್ರೀಯಲ್ ಏರಿಯಾ, ಮೈಸೂರು), ಮಾರಿಗುಡಿ ಬೀದಿಯ ಶ್ರೀನಿವಾಸ ಅವರ ಪುತ್ರ ಶಶಿಕುಮಾರ, ಪೆನ್ಸನ್ ಕಾಲೊನಿಯ ಮಾರಿಗುಡಿ ಬೀದಿಯ ರವಿ ಅವರ ಪುತ್ರ ವಿನೋದ, ಬೀರಶೆಟ್ಟಹಳ್ಳಿಯ ಮಂಜುನಾಥ ಶ್ರೀನಿವಾಸ, ಶಾಂತಿನಗರದ ಪುರುಷೋತ್ತಮ ಅವರ ಪುತ್ರ ಅರುಣ್ ಕುಮಾರ್ ಅಲಿಯಾಸ್ ಗಾಂಜಾ ಅರುಣ, ಶಾಂತಿನಗರದ ಪುರುಷೋತ್ತಮ ಅವರ ಪುತ್ರ ವಿಜಯಕುಮಾರ್ ಆರೋಪಿಗಳು.

ಆರೋಪಿಗಳಾದ ಶ್ರೇಯಸ್ ಗೌಡ, ಶಶಿಕುಮಾರ, ವಿನೋದ ಅವರನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಂಜನಾಥ ಶ್ರೀನಿವಾಸ, ಅರುಣ್ ಕುಮಾರ್, ವಿಜಯಕುಮಾರ್ ತಲೆಮರೆಸಿಕೊಂಡಿದ್ದಾರೆ. ತನಿಖೆ ವೇಳೆ ಆರೋಪಿಗಳು, ಗಾಂಜಾವನ್ನು ಒಡಿಶಾ ರಾಜ್ಯದ ಕೆಸಿಂಗಾ ಎಂಬಲ್ಲಿ ಖರೀದಿಸಿ ತಂದು, ಹೆಚ್ಚಿನ ಬೆಲೆಗೆ ಇಲ್ಲಿ ಮಾರಾಟ ಮಾಡಲು ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-40-1929310685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.