ಪಾಂಡವಪುರ: ತಾಲ್ಲೂಕಿನ ರಾಗಿಮುದ್ದನಹಳ್ಳಿ ಮತ್ತು ಹೆಳವರಕೊಪ್ಪಲು ಗ್ರಾಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಂಗಳವಾರ ₹1.75ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದರು.

₹1.5ಕೋಟಿ ವೆಚ್ಚದಲ್ಲಿ ರಾಗಿಮುದ್ದನಹಳ್ಳಿ–ಡಿಂಕಾ ಮುಖ್ಯ ರಸ್ತೆ ಕಾಮಗಾರಿ ಪೂಜೆ ಸಲ್ಲಿಸಲಾಗಿದೆ. ಚುನಾವಣೆ ವೇಳೆ ನಾವು ಕೊಟ್ಟ ಮಾತಿನಂತೆ ಗುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದುವರೆಗೂ ₹7.5ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇವೆ. ಉಳಿದಂತೆ ಇನ್ನು ಹೆಚ್ಚಿನ ಅನುದಾನ ತಂದು ಅಗತ್ಯ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರ ಎಲ್ಲ ನಾಗರೀಕ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು.

ಹೆಳವರಕೊಪ್ಪಲು ಅಭಿವೃದ್ಧಿ: ಹೆಳವರಕೊಪ್ಪಲು ಒಂದು ಕುಗ್ರಾಮ. ಸುಮಾರು 25 ಮನೆಗಳು ಇದ್ದು, ಇದುವರೆಗೂ ಇಲ್ಲಿ ರಸ್ತೆ ಅಭಿವೃದ್ದಿ ಆಗಿರಲಿಲ್ಲ. ಇದೀಗ ಗ್ರಾಮದ ಮುಖ್ಯ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಈ ಕಾಮಗಾರಿ ₹ 70 ಲಕ್ಷ ಅಂದಾಜು ವೆಚ್ಚವಾಗಿದೆ ಎಂದು ಹೇಳಿದರು.

ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲು ಬಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಹೆಳವರಕೊಪ್ಪಲು ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ಕಳಸ ಹೊತ್ತ ಮಹಿಳೆಯರು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು. ವೃದ್ಧೆಗೆ ದರ್ಶನ್ ಪುಟ್ಟಣ್ಣಯ್ಯ ಕಾಲಿಗೆ ಬಿದ್ದು ನಮಸ್ಕರಿಸಿದರು.

ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೈ.ಪಿ.ಮಂಜನಾಥ್, ಮುಖಂಡರಾದ ವೈ.ಜಿ.ರಘು, ರಾಗಿಮುದ್ದನಹಳ್ಳಿ ಗ್ರಾಮ ಮುಖಂಡರಾದ ರಾ.ಸ.ಹನುಮೇಗೌಡ, ಪ್ರಕಾಶ್, ಮಹೇಶ್, ಶ್ಯಾಮ್, ಮಂಜು, ಆರ್.ಬಿ.ಜಗದೀಶ್, ನಾಗರಾಜ, ಜಯರಾಮ, ರಘುಕುಮಾರ್, ಸೋಮ, ಕುಮಾರ, ಹೆಳವರಕೊಪ್ಪಲು ಗ್ರಾಮದ ಸೋಮ, ವಿಜಯ್, ಬಸವಣ್ಣ, ಮಧು, ನಾಗರಾಜು, ಎಚ್.ಎಮ್.ರವಿ, ಮಂಜು ನಾಥ, ಪ್ರಕಾಶ, ಮಹೇಶ, ರವಿಚಂದ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-40-950769195

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.