ಪಾಂಡವಪುರ: ಪಟ್ಟಣದಲ್ಲಿ ಮಂಗಳವಾರ ಸಂಜೆ 30 ನಿಮಿಷ ಸಾಧಾರಣ ಮಳೆ ಬಿದ್ದಿತು.

ಸೋಮವಾರ ಸುರಿದ ಬಿರುಗಾಳಿ ಮಳೆಗೆ ಹತ್ತಾರು ಮರಗಳು ಹಾಗೂ 16ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

ಸಂಜೆ ದಿಢೀರ್ ಬಂದ ಬಿರುಗಾಳಿ ಸಹಿತ ಮಳೆ ಸುಮಾರು 30 ನಿಮಿಷಗಳವರೆಗೆ ಸುರಿಯತೊಡಗಿತು. ಇದರಿಂದಾಗಿ ಪಟ್ಟಣದ ತೋಟಗಾರಿಕೆ ಇಲಾಖೆ ಸಮೀಪ ಮರ ಬಿದ್ದು ಕಾರಿಗೆ ಹಾನಿಯುಂಟಾಗಿದೆ. ಜತೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಪಟ್ಟಣದ ಕೃಷ್ಣನಗರದ ಪಾರ್ಕ್ ಬಳಿ–1, ತೋಟಗಾರಿಕೆ ಇಲಾಖೆ ಸಮೀಪ–1, ಶಾಂತಿನಗರದ ಕೃಷ್ಣನಗರದ ಸರ್ಕಾರಿ ಪ್ರೌಢಶಾಲೆ ಬಳಿ–1, ಪ್ರವಾಸಿ ಮಂದಿರ ಮುಂಭಾಗ–1, ಸಿದ್ದಿ ಮಂಟಪ ಬಳಿ–1, ಮಹಾಕಾಳೇಶ್ವರಿ ದೇವಸ್ಥಾನದ ಹಿಂಭಾಗ–1 ಸೇರಿದಂತೆ ಹತ್ತಾರು ಮರಗಳು ಧರೆಗುಳಿದಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪಟ್ಟಣದ ವ್ಯಾಪ್ತಿಯಲ್ಲಿ 10 ವಿದ್ಯುತ್ ಕಂಬಗಳು, 2 ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಹಾಗೂ ಟಿ.ಎಸ್.ಛತ್ರ ವಿದ್ಯುತ್ ಶಾಖಾ ವ್ಯಾಪ್ತಿಯಲ್ಲಿ 5, ಮೇಲುಕೋಟೆ ವಿದ್ಯುತ್ ಶಾಖಾ ವ್ಯಾಪ್ತಿಯಲ್ಲಿ 1 ವಿದ್ಯುತ್ ಕಂಬಗಳು ಧರೆಗುಳಿದಿವೆ ಎಂದು ಸೆಸ್ಕ್ ರವಿಕುಮಾರ್ ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-40-359670446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.