ಮಂಡ್ಯ: ‘ಆಧುನೀಕರಣದ ಭರಾಟೆಯಲ್ಲಿ ಮನುಷ್ಯನ ದುರಾಸೆಯಿಂದ ಭೂ ಸಂಪತ್ತು ಅವನತಿಯ ಹಾದಿಯಲ್ಲಿದೆ. ಸುಸ್ಥಿರ ಭವಿಷ್ಯಕ್ಕಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಮತ್ತು ಮರಗಳನ್ನು ನೆಡಲು ಜನರನ್ನು ಉತ್ತೇಜಿಸಬೇಕಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಆತಂಕಪಟ್ಟರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪಿಇಎಸ್ ಕಾನೂನು ಕಾಲೇಜು ಮತ್ತು ಕಾನೂನು ಸೇವಾ ಘಟಕ, ವಕೀಲರ ಸಂಘ, ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ‘ವಿಶ್ವ ಭೂ ದಿನ’ದ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷವಾಗಿ 2014ರಿಂದ ಆಗುತ್ತಿರುವ ಹವಾಮಾನ ವೈಪರೀತ್ಯದಿಂದ ಭೂಮಿಗೆ ಹೆಚ್ಚಾಗಿ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. 193 ದೇಶಗಳು ಕೂಡ ಪರಿಸರ ಮತ್ತು ಭೂಮಿ ರಕ್ಷಣೆಗೆ ಯೋಜನೆ ರೂಪಿಸಿಕೊಂಡು ಹೋಗುತ್ತಿವೆ. ಇದರ ನಡುವೆ, ಪ್ಲಾಸ್ಟಿಕ್ ಬಳಕೆ, ಅರಣ್ಯ ನಾಶ ಸೇರಿದಂತೆ ಪರಿಸರ ನಾಶ ಮಾಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಮನುಷ್ಯ ಭೂಮಿಯ ಅವನತಿಗೆ ಏನೆಲ್ಲಾ ಮಾಡಬೇಕೋ ಅದನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ಧಾನೆ. ಸಂವಿಧಾನದ ಮೂಲಭೂತ ಕರ್ತವ್ಯವೂ ಪರಿಸರ ರಕ್ಷಣೆ ಆಗಿದೆ. ವಾಯು ಮಾಲಿನ್ಯ ತಡೆಗಟ್ಟುವುದು ಸೇರಿದಂತೆ ಪರಿಸರಕ್ಕೆ ಹಾನಿ ಉಂಟು ಮಾಡುವುದೆಲ್ಲವನ್ನೂ ನಿಲ್ಲಿಸಿದಾಗ ಭೂಮಿ ಎಂಬ ಸಂಪತ್ತು ಉಳಿಯುತ್ತದೆ. ಸಕಲ ಜೀವ ರಾಶಿ ತಾಣವಾಗಿರುವ ಈ ಭೂಮಿಯನ್ನು ಸಂರಕ್ಷಿಸಿಕೊಂಡು ಮನುಷ್ಯ ಸಂಪತ್ತು ಉಳಿಸಿಕೊಳ್ಳೋಣ ಎಂದರು.

ಕಾಲಜೀನ ಪ್ರಭಾರ ಪ್ರಾಂಶುಪಾಲ ವರದರಾಜೇಗೌಡ, ಸಹ ಪ್ರಾಧ್ಯಾಪಕಿ ಎಚ್.ಎಂ.ಹೇಮಲತಾ, ವಕೀಲರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ದೇವರಾಜು, ವಿದ್ಯಾರ್ಥಿ ಸಂಘದ ಸಂಚಾಲಕಿ ಎಸ್.ಬಿ.ಜ್ಯೋತಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-40-1315562453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.