ಪಾಂಡವಪುರ: ‘ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಯಾಶೀಲವಾಗಿದ್ದ ಯುವಕ ಸಂಘಗಳು, ಯುವತಿ–ಮಹಿಳಾ ಮಂಡಳಿಗಳು ಹಾಗೂ ಯುವ ಸಮುದಾಯವನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಯುವ ಶಕ್ತಿಯನ್ನು ನಾಶಗೊಳಿಸಿದ್ದಾರೆ’ ಎಂದು ಯುವ ಮುಖಂಡ ಕೋ.ಪು.ಗುಣಶೇಖರ್ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈಚೆಗೆ ಜಿಲ್ಲಾ ಯುವ ಪರಿಷತ್ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಯುವ ಪರಿಷತ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಹಿಂದೆ ನೆಹರು ಯುವ ಕೇಂದ್ರಗಳಲ್ಲಿ 18 ರಿಂದ 35 ವರ್ಷದ ಯುವಕ–ಯುವತಿಯರನ್ನು ಸ್ವಯಂ ಸೇವಕರಾಗಿ ನೇಮಕಗೊಳಿಸಿ ಯುವಕ–ಯುವತಿ ಮಂಡಳಿ ಸಬಲೀಕರಣಗೊಳಿಸುವ ಜತೆಗೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಬರುವ ಸೌಲಭ್ಯಗಳನ್ನು ಸದ್ಬಳಕೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ, ಇದೀಗ 15 ರಿಂದ 29 ವರ್ಷಕ್ಕೆ ಕಡಿತಗೊಳಿಸಿರುವುದು ಸರಿಯಲ್ಲ’ ಎಂದರು.

ಹಳ್ಳಿ ಕಟ್ಟುವ ಕೆಲಸವಾಗಬೇಕು: ನೆಹರು ಯುವಕ ಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳಲ್ಲಿ 29 ವರ್ಷಕ್ಕೆ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ 50 ವರ್ಷದೊಳಗಿನ ವಯೋಮಾನದವರನ್ನು ಯುವ ಪರಿಷತ್ಗೆ ಪರಿಗಣಿಸುವ ಮೂಲಕ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಘಟಕ ರಚಿಸಿ ನಾಡು ಹಾಗೂ ಹಳ್ಳಿಗಳನ್ನು ಕಟ್ಟುವ ಕೆಲಸ ಮಾಡಲಾಗುತ್ತಿದೆ. ಆ ಮೂಲಕ ಯುವಕ–ಯುವತಿ ಮಂಡಳಿ ಸಕ್ರಿಯಗೊಳಿಸುವ ಜತೆಗೆ ಗ್ರಾಮೀಣ ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಕೆಲಸವನ್ನು ಪರಿಷತ್ ಮಾಡಲಿದೆ ಎಂದರು.

ಅಧ್ಯಕ್ಷರಾಗಿ ಗಜೇಂದ್ರ ಆಯ್ಕೆ: ಪಾಂಡವಪುರ ತಾಲ್ಲೂಕು ಯುವ ಪರಿಷತ್ ಘಟಕಕ್ಕೆ ಗಜೇಂದ್ರ ಗೋವಿಂದರಾಜು ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷ ಎನ್.ಪರಮೇಶ್ ಅವರು ಆಯ್ಕೆ ಮಾಡಿ ನೇಮಕಾತಿ ಪತ್ರ ವಿತರಿಸಿದರು. ಮುಂದಿನ ದಿನಗಳಲ್ಲಿ ಉಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಯುವ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಪರಮೇಶ್, ಉಪಾಧ್ಯಕ್ಷ ಸಬ್ಬನಹಳ್ಳಿ ಕುಮಾರ್, ಪ್ರಧಾನ ಕಾರ್ಯದರ್ಶಿ ಟಿ.ಎಂ.ನಾಗರಾಜು, ಖಜಾಂಚಿ ನಾಗಮಂಗಲ ಸೌಂದರ್ಯ, ಸಹ ಕಾರ್ಯದರ್ಶಿ ಮುನಿಸ್ವಾಮಿ, ಪಿ.ಜೆ.ಮಮತಾ, ಕೋಡಾಲ ರವಿ, ವರದಾ, ಶಾರದಾ, ಪಾರ್ವತಮ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-40-2115368023

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.