ಮಂಡ್ಯ: ರೇಡಿಯಾಲಜಿಸ್ಟ್ಗಳ ಕೊರತೆಯಿಂದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಸಿಗದೆ ಗರ್ಭಿಣಿಯರು ಪರದಾಡುವಂತಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ‘ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ’ಗಳನ್ನು ಉಪಯೋಗಿಸದ ಕಾರಣ ದೂಳು ಹಿಡಿದು ಹಾಳಾಗುವ ಸ್ಥಿತಿ ತಲುಪಿವೆ.

ಗರ್ಭಧಾರಣೆಯ ದೃಢೀಕರಣ, ಮಗುವಿನ ಆರೋಗ್ಯ ಮತ್ತು ಬೆಳವಣಿಗೆ ಪರೀಕ್ಷಿಸಲು ಗರ್ಭಿಣಿಯರಿಗೆ 9 ತಿಂಗಳ ಅವಧಿಯಲ್ಲಿ ಕನಿಷ್ಠ ಐದು ಬಾರಿ ಸ್ಕ್ಯಾನಿಂಗ್ ಮಾಡುವ ಅವಶ್ಯವಿರುತ್ತದೆ. ಆದರೆ, ತಾಲ್ಲೂಕು ಕೇಂದ್ರಗಳಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಖಾಸಗಿ ಕೇಂದ್ರಗಳಿಗೆ ದುಬಾರಿ ಶುಲ್ಕ ಕೊಟ್ಟು ಸ್ಕ್ಯಾನಿಂಗ್ ಮಾಡಿಸುವ ಅನಿವಾರ್ಯತೆ ಎದುರಾಗಿದೆ.

ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ 2014ರಲ್ಲೇ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ನೀಡಲಾಗಿದೆ. ಆದರೆ, 12 ವರ್ಷಗಳಿಂದ ಯಂತ್ರವನ್ನು ಚಾಲನೆಗೊಳಿಸದ ಪರಿಣಾಮ ಹಾಳಾಗಿದ್ದು, ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.

ಮದ್ದೂರು, ನಾಗಮಂಗಲ, ಪಾಂಡವಪುರದ ಸಾರ್ವಜನಿಕ ಆಸ್ಪತ್ರೆಗಳಿಗೆ 2017ರಲ್ಲಿ ತಲಾ ₹7.93 ಲಕ್ಷದ ಸ್ಕ್ಯಾನಿಂಗ್ ಯಂತ್ರವನ್ನು ಒದಗಿಸಲಾಯಿತು. ಆದರೆ, ರೇಡಿಯಾಲಜಿಸ್ಟ್ಗಳು ನೇಮಕವಾಗದ ಕಾರಣ ಯಂತ್ರಗಳು ಕಾರ್ಯಾರಂಭವನ್ನೇ ಮಾಡಲಿಲ್ಲ.

ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ 2022ರಲ್ಲಿ ಮತ್ತು ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗೆ ಈ ವರ್ಷ ಏಪ್ರಿಲ್ 10ರಂದು ಸ್ಕ್ಯಾನಿಂಗ್ ಯಂತ್ರ ನೀಡಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 64 ಸ್ಕ್ಯಾನಿಂಗ್ ಸೆಂಟರ್ಗಳಿವೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆಸ್ಪತ್ರೆ ಸೇರಿದಂತೆ 41 ಸೆಂಟರ್ಗಳು ನಿರ್ವಹಣಾ ಸ್ಥಿತಿಯಲ್ಲಿದ್ದು, 27 ಕೇಂದ್ರಗಳು ಕಾರ್ಯವನ್ನು ಸ್ಥಗಿತಗೊಳಿಸಿವೆ.

ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ, ತಾಲ್ಲೂಕು ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸ್ಕ್ಯಾನಿಂಗ್ ಯಂತ್ರಗಳನ್ನು ಪೂರೈಸಿದೆ. ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ನಿಧಿಯಿಂದ ಸ್ಕ್ಯಾನಿಂಗ್ ಯಂತ್ರವನ್ನು ಚಾಲನೆ ಮಾಡಬಲ್ಲ ನುರಿತ ವೈದ್ಯರನ್ನು ನೇಮಕ ಮಾಡಲು ಅವಕಾಶವಿದ್ದರೂ ಉದ್ದೇಶಪೂರ್ವಕವಾಗಿ ನೇಮಕ ಮಾಡಿಲ್ಲ’ ಎಂಬುದನ್ನು ಲೋಕಾಯುಕ್ತ ಪೊಲೀಸರು ವರದಿಯಲ್ಲಿ ನಮೂದಿಸಿದ್ದಾರೆ.

ಮಿಮ್ಸ್ ಆಸ್ಪತ್ರೆಯಲ್ಲಿ 2025ರ ನವೆಂಬರ್ನಲ್ಲಿ 7112, ಡಿಸೆಂಬರ್ನಲ್ಲಿ 1449 ಮತ್ತು ಪ್ರಸಕ್ತ ವರ್ಷ ಜನವರಿಯಲ್ಲಿ 814 ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಸೌಲಭ್ಯ ಲಭ್ಯವಿರದ ಕಾರಣ, ಮಿಮ್ಸ್ ಆಸ್ಪತ್ರೆಗೆ ವಿವಿಧ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯ ಜನರು ಬರುತ್ತಿದ್ದಾರೆ. ರೋಗಿಗಳ ದಟ್ಟಣೆಯಿಂದ ಕೆಲವೊಮ್ಮೆ ಸ್ಕ್ಯಾನಿಂಗ್ಗೆ 5ರಿಂದ 7 ದಿನ ಕಾಯಬೇಕಾದ ಅನಿವಾರ್ಯತೆ ಇದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.

‘ಮಂಡ್ಯ ಜಿಲ್ಲಾ ಕೇಂದ್ರದಲ್ಲಿರುವ ‘ಮಿಮ್ಸ್’ ಆಸ್ಪತ್ರೆಯಲ್ಲಿ ಹೊಸ ಯಂತ್ರ, ಉತ್ತಮ ಸ್ಥಿತಿಯಲ್ಲಿರುವ ಯಂತ್ರ ಮತ್ತು ಸಾಧಾರಣ ಸ್ಥಿತಿಯಲ್ಲಿರುವ ಯಂತ್ರ ಸೇರಿದಂತೆ ಒಟ್ಟು 3 ಸ್ಕ್ಯಾನಿಂಗ್ ಯಂತ್ರಗಳಿವೆ. ಒಟ್ಟು 11 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 8 ಹುದ್ದೆಗಳು ಖಾಲಿ ಇವೆ. ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ಎರಡು ಯಂತ್ರಗಳು ಮತ್ತು ಅಗತ್ಯ ಸಿಬ್ಬಂದಿ ಬೇಕಾಗಿದೆ’ ಎಂದು ಮಿಮ್ಸ್ ವೈದ್ಯರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-14-1626745059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.