ಮಂಡ್ಯ: ‘ಪ್ರಸ್ತುತ ಸಂದರ್ಭದಲ್ಲಿ ಪ್ರಕಾಶನ ವ್ಯವಸ್ಥೆ ಮಾಫಿಯಾದಂತೆ ಕೆಲಸ ಮಾಡುತ್ತಿದೆ. ಇಂಥ ದುರಿತ ಕಾಲದಲ್ಲಿ ಪುಟ್ಟ ಹಣತೆಯಾಗಿ ವೃತ್ತಿಪರವಾಗಿ ಮತ್ತು ಜನಪರವಾಗಿ ಕೆಲಸ ಮಾಡಲು ಸಾಧ್ಯ ಎಂಬುದನ್ನು ನಿರೂಪಿಸಲು ‘ಬಹುರೂಪಿ’ ಪ್ರಕಾಶನ ಮುನ್ನಡೆಸುತ್ತಿದ್ದೇವೆ’ ಎಂದು ಲೇಖಕ ಜಿ.ಎನ್. ಮೋಹನ್ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಕನ್ನಡ–ಕರ್ನಾಟಕ ಫೌಂಡೇಷನ್, ‘ಎಂಪ್ಟಿ ಪಾಕೆಟ್ ಡ್ರೀಮ್ಸ್’ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಆಪ್ತ ಸಂವಾದ’ ಒಂದು ಪುಸ್ತಕ ಕ್ರಾಂತಿ ಸಂಚಿಕೆ–4ರ ಅಂಗವಾಗಿ ‘ನನ್ನೊಳಗಿನ ಹಾಡು ಕ್ಯೂಬಾ’ ಕೃತಿ ಕುರಿತು ಮಾತನಾಡಿದರು.

ಕೆಲವು ದೊಡ್ಡ ಪ್ರಕಾಶನ ಸಂಸ್ಥೆಗಳು ಮಾರುಕಟ್ಟೆ ನಿಯಂತ್ರಿಸುತ್ತಿದ್ದು, ಸಣ್ಣ ಪ್ರಕಾಶಕರಿಗೆ ಅಥವಾ ಸ್ವತಂತ್ರವಾಗಿ ಪುಸ್ತಕ ಪ್ರಕಟಿಸುವವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂಬ ಕೊರಗು ಅವರ ಮಾತುಗಳಲ್ಲಿತ್ತು. ಜ್ಞಾನ ಪ್ರಸರಣದ ಮೇಲೆ ಹಿಡಿತ ಸಾಧಿಸುವ ಹುನ್ನಾರ ನಡೆಯುತ್ತಿವೆ ಎಂಬ ಕಳವಳವನ್ನೂ ವ್ಯಕ್ತಪಡಿಸಿದರು.

‘ತಂತ್ರಜ್ಞಾನದ ಪ್ರಭಾವದಿಂದ ಮಕ್ಕಳು ಡಿಜಿಟಲ್ ಮಾಧ್ಯಮದತ್ತ ಮುಖ ಮಾಡುತ್ತಿರುವ ಹೊತ್ತಿನಲ್ಲಿ ಅವರಿಗೆ ರುಚಿಸುವಂತಹ ‘ಮಕ್ಕಳ ಸಾಹಿತ್ಯ’ ರಚಿಸುವುದು ದೊಡ್ಡ ಸವಾಲು. ಮಕ್ಕಳಿಗಾಗಿ ಅನೇಕ ಪುಸ್ತಕಗಳು ಬಂದಿದ್ದರೂ, ಸೃಜನಾತ್ಮಕ ಬರವಣಿಗೆ ಮತ್ತು ಪ್ರಸಕ್ತ ವಿದ್ಯಮಾನಗಳ ಕುರಿತು ಮನಮುಟ್ಟುವಂತೆ ತಿಳಿಸುವ ಪರಿಣಾಮಕಾರಿ ಶೈಲಿಯ ಸಾಹಿತ್ಯದ ಕೊರತೆಯಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಸ್ತುತ ‘ವ್ಯಾಟ್ಸ್ ಆ್ಯಪ್ ಯೂನಿವರ್ಸಿಟಿ’ ಮೂಲಕ ‘ಸುಳ್ಳು ಸುದ್ದಿ’ ಎಂಬ ಇಂಜೆಕ್ಷನ್ ಅನ್ನು ಬಹುಬೇಗ ಚುಚ್ಚಬಹುದು. ಅಮೆರಿಕ ನಡುವೆ ಒಂದು ಪೇಪರ್ ಗೋಡೆ ಇದೆ. ಅಲ್ಲಿನ ಸುದ್ದಿಗಳು ಭಾರತದಲ್ಲಿ ಬರುತ್ತವೆ. ಅಂದರೆ ಅವರ ಕನ್ನಡಕದಿಂದ ನಾವು ಸುದ್ದಿಯನ್ನು ನೋಡುತ್ತಿದ್ದೇವೆ. ಪತ್ರಿಕಾ ಧರ್ಮವು ಕಣ್ಮರೆಯಾಗಿ ಪತ್ರಿಕಾ ಉದ್ಯಮವಾಗಿ ಬದಲಾಗಿದೆ. ಮಾಧ್ಯಮಗಳು ಪ್ರಜಾಪ್ರಭುತ್ವ ರಕ್ಷಿಸಬೇಕೆನ್ನುವುದು ನಿಜ. ಆದರೆ ಮಾಧ್ಯಮಗಳಲ್ಲಿ ಪ್ರಜಾಪ್ರಭುತ್ವ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದರು.

‘ಭಾರತ ಎಂದರೆ ಜಗತ್ತಿನಾದ್ಯಂತ ದೊಡ್ಡ ಗೌರವವಿತ್ತು. ಪ್ರತಿ ದೇಶಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿದೇಶಾಂಗ ನೀತಿ ಇತ್ತು. ಈಗ ವಿದೇಶಾಂಗ ನೀತಿಯೇ ಇಲ್ಲ. ಇಂದಿನ ಈ ಯುವ ಸಮುದಾಯವನ್ನು ಕಾಲೇಜುಗಳಲ್ಲಿ ‘ಎಲೆಕ್ಷನ್’ಗಳಿಂದ ಹೊರಗಿಡುವ ಮೂಲಕ ವ್ಯವಸ್ಥಿತವಾಗಿ ರಾಜಕೀಯ ಅನಕ್ಷರಸ್ಥರನ್ನಾಗಿ ರೂಪಿಸಲಾಗುತ್ತಿದೆ’ ಎಂದು ಹೇಳಿದರು.

ಕಿರುಚಿತ್ರ ನಿರ್ದೇಶಕ ಎಂ.ಜಿ. ವಿನಯ್ಕುಮಾರ್ ಸಂವಾದ ನಡೆಸಿಕೊಟ್ಟರು. ಪರಿಚಯ ಪ್ರಕಾಶನ ಸಂಸ್ಥಾಪಕ ಎಂ.ಎನ್. ಶಿವಕುಮಾರಾಧ್ಯ ನಿರೂಪಿಸಿದರು. ‘ನನ್ನೊಳಗಿನ ಹಾಡು ಕ್ಯೂಬಾ’ ಕೃತಿ ಕುರಿತು ಜಿ.ಎನ್.ಮೋಹನ್ ಅವರೊಂದಿಗೆ ಓದುಗರು ಸಂವಾದ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-40-873878997

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.