ಸೋಮವಾರ, ನವೆಂಬರ್ 18, 2019
25 °C

ಮಂಡ್ಯದಲ್ಲಿ ಭಾರಿ ಮಳೆ; ಮನೆ ಕುಸಿದು ವ್ಯಕ್ತಿ ಸಾವು

Published:
Updated:

ಮಂಡ್ಯ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆ.ಆರ್.ಪೇಟೆ ತಾಲ್ಲೂಕು ಗಂಜಿಗೆರೆ ಗ್ರಾಮದಲ್ಲಿ ಮನೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಮೃತರನ್ನು ಕುಮಾರ್ (40) ಎಂದು ಗುರುತಿಸಲಾಗಿದೆ. ಅವಶೇಷಗಳಡಿ ಸಿಲುಕಿದ ಮೃತ ದೇಹವನ್ನು ಹೊರತೆಗೆಯಲಾಗಿದೆ.

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಕೆ.ಆರ್.ಪೇಟೆ- ಮೈಸೂರು ಮುಖ್ಯರಸ್ತೆ ಬಂದ್ ಮಾಡಲಾಗಿದೆ.

ಹಳ್ಳಗಳು ತುಂಬಿ ಹರಿಯುತ್ತಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳ ಪರದಾಟ ಹೇಳತೀರದಾಗಿದೆ. ಇನ್ನು . ಮೈಸೂರಿಗೆ ತೆರಳುವ ವಾಹನಗಳ ಮಾರ್ಗ ಬದಲಾಯಿಸಲಾಗಿದೆ. 
 

ಪ್ರತಿಕ್ರಿಯಿಸಿ (+)