ಮಂಡ್ಯ: ನಗರರದಲ್ಲಿ ಬುಧವಾರ ರಾತ್ರಿ ಸುರಿದ ಸಿಡಿಲು, ಗುಡುಗು ಸಹಿತ ಗಾಳಿ ಮಳೆಗೆ ಮರದ ರೆಂಬೆ, ಕೊಂಬೆಗಳು ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಬುಧವಾರ ಬೆಳಿಗ್ಗಿನಿಂದ ಸಂಜೆವರೆಗೂ ಸುಡು ಬಿಸಿಲು ನೆತ್ತಿ ಸುಡುತ್ತಿತ್ತು. ಸಂಜೆ ಮೋಡ ಕವಿದ ವಾತಾವರಣದೊಂದಿಗೆ ರಾತ್ರಿ ವೇಳೆಗೆ ಬಿರುಸಾಗಿ ಗಾಳಿ ಸಹಿತ ಮಳೆ ಸುರಿಯಿತು. ಸುಡುವ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಮಳೆ ಖುಷಿ ನೀಡಿತು. ಜೋರು ಗುಡುಗು ಹಾಗೂ ಸಿಡಿಲು ಸಹಿತ ಮಳೆ ಸ್ವಲ್ಪ ಆತಂಕ ಉಂಟುಮಾಡಿತು.

ಬಿರುಗಾಳಿ ಸಮೇತ ಸುರಿದ ಮಳೆಗೆ ನಗರದ ಕಲ್ಲಹಳ್ಳಿಯಲ್ಲಿ ತೆಂಗಿನ ಮರವು ಕಟ್ಟಡದ ಮೇಲೆ ಬಿದ್ದಿದೆ. ಪ್ರಾಣ ಹಾನಿ ಸಂಭವಿಸಲಿಲ್ಲ. ಕೆಲವು ಕಡೆ ವಿದ್ಯುತ್ ತಂತಿ ಮೇಲೆ ಸಣ್ಣಪುಟ್ಟ ಕೊಂಬೆಗಳು ಬಿದ್ದಿರುವುದು ಬಿಟ್ಟರೆ ಯಾವುದೇ ತೊಂದರೆಯಾಗಿಲ್ಲ.

ಅಶೋಕ ನಗರದ ವಿವೇಕಾನಂದ ರಸ್ತೆಯಲ್ಲಿ ಬೃಹದಾಕಾರ ಮರದ ಕೊಂಬೆಯೊಂದು ರಸ್ತೆ ಮೇಲೆ ಬಿದ್ದು, ಒಂದಷ್ಟು ಸಮಯ ಕಿರಿಕಿರಿ ಉಂಟಾಯಿತು. ಇನ್ನೂ ಬಿರುಗಾಳಿಗೆ ನಗರದ ಕೆಲವು ಕಡೆ ಅಳವಡಿಸಿದ್ದ ಕಟೌಟ್ಗಳು ಹಾಗೂ ಜಾಹೀರಾತು ಫಲಕಗಳು ಕಿತ್ತು ಬಂದಿದ್ದವು.

ಕೆ.ಆರ್.ಪೇಟೆ: ಬಿಸಲಿನ ಬೇಗೆಯಿಂದ ಬಳಲಿದ್ದ ಪಟ್ಟಣದ ಜನರು ಗುರುವಾರ ಸುರಿದ ಮಳೆಯಿಂದ ತಂಪಾದ ವಾತಾವರಣದಲ್ಲಿ ನೆಮ್ಮದಿ ಅನುಭವಿಸಿದರು.

ಸಂಜೆ ಇದ್ದಕ್ಕಿದ್ದಂತೆ ಆರಂಭವಾದ ಮಳೆ ಅರ್ಧಗಂಟೆ ಸುರಿಯಿತು. ಮಳೆಯೊಂದಿಗೆ ಬಿರುಗಾಳಿ, ಗುಡುಗು ಸಿಡಿಲು ಇದ್ದುದರಿಂದ ಪಟ್ಟಣಕ್ಕೆ ಬಂದಿದ್ದ ಜನರು ಪರದಾಡಿದರು.

ಮಳೆಯಿಂದಾಗಿ ರೈತರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ದಿಡೀರ್ ಮಳೆಯಿಂದಾಗಿ ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯಲ್ಲಿ ಹರಿಯಿತು. ಬಸ್ ನಿಲ್ದಾಣ ಎಂದಿನಂತೆ ಮಳೆಯ ನೀರಿನಿಂದ ತುಂಬಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-40-1604445333

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.