ಮಂಡ್ಯ: ಶ್ರೀರಾಮಾನುಜಾಚಾರ್ಯರ 40 ಅಡಿ ಪ್ರತಿಮೆಯನ್ನು ತಾಲ್ಲೂಕಿನ ತೂಬಿನಕೆರೆ ಬಳಿ ನಿರ್ಮಿಸಿ, ಆಕರ್ಷಣೀಯ ಧಾರ್ಮಿಕ ಕೇಂದ್ರ ಸ್ಥಾಪಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಮುಖಂಡ ಬೆಂಗಳೂರು ಉದ್ಯಮಿ ಜನಾರ್ದನ್ ಹೇಳಿದರು.

ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರು ಕೆಲವು ವರ್ಷ ವಾಸವಿದ್ದರು, ಆದ ಕಾರಣ ಅಲ್ಲಿಗೆ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಈ ಸ್ಥಳದ ಸಂಪರ್ಕ ಮಾರ್ಗದಲ್ಲಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಆ ಸ್ಥಳದಲ್ಲಿ ವಿಷ್ಣುವಿನ ದೇವಸ್ಥಾನ ನಿರ್ಮಿಸಿ ಆಧ್ಯಾತ್ಮಿಕ ಸ್ಥಳವಾಗಿ ಮಾರ್ಪಾಡು ಮಾಡಲಾಗುವುದು. ಇದಕ್ಕಾಗಿ ವಿಶಾಲವಾದ ಪಾರ್ಕಿಂಗ್, ಎಸಿ ಬಸ್, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ ಚಟುವಟಿಕೆಗಳ ಕಾರ್ಯಾರಂಭವಾಗಿದೆ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-40-1560252858

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.