ಮಂಡ್ಯ: ‘ತುರ್ತು ಸಂದರ್ಭದಲ್ಲಿ ವ್ಯಕ್ತಿಯ ಪ್ರಾಣ ಉಳಿಸಲು ರಕ್ತ ನೀಡುವುದು ಸಮಾಜದಲ್ಲಿ ಒಂದು ಮಾನವೀಯತೆ ಗುಣವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.

ನಗರದ ರೆಡ್ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಗುರುವಾರ ನಡೆದ ಸಂಸ್ಥೆಯ ಸರ್ವ ಸದಸ್ಯರ ಸಭೆ ಮತ್ತು ರಕ್ತ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ಯಾವುದೇ ವ್ಯಕ್ತಿ ನೋಡಿದರೆ, ರಕ್ತವು ಒಂದೇ ಇರುತ್ತದೆ. ಪ್ರಾಣಿಗಳಲ್ಲಿಯೂ ರಕ್ತವಿದೆ ಅದನ್ನು ಮನುಷ್ಯರಿಗೆ ನೀಡುವುದಿಲ್ಲ. ಮನುಷ್ಯನ ಆರೋಗ್ಯ ಕೆಟ್ಟು ಹೋದಾಗ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಅನಾರೋಗ್ಯ ಪೀಡಿತರಿಗೆ, ಶಸ್ತ್ರ ಚಿಕಿತ್ಸೆ, ಅಪಘಾತ ಸೇರಿದಂತೆ ಇತರೆ ಅನಾರೋಗ್ಯ ಕಾರಣಕ್ಕೆ ರಕ್ತದ ಬೇಡಿಕೆ ಇರುತ್ತದೆ. ಅದನ್ನು ನೀಗಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ರೆಡ್ಕ್ರಾಸ್ಗೆ ಹೆಚ್ಚಾಗಿ ಯುವಕರನ್ನು ನೋಂದಣಿ ಮಾಡಬೇಕು. ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಇರುವ ವ್ಯಕ್ತಿಗಳನ್ನು ಸಂಸ್ಥೆಗೆ ಸೇರಿಸಿಕೊಳ್ಳುವುದರಿಂದ ಅಭಿವೃದ್ಧಿ ನಿರೀಕ್ಷಿಸಬಹುದು ಎಂದು ತಿಳಿಸಿದರು.

ರೆಡ್ಕ್ರಾಸ್ ಸಂಪನ್ಮೂಲ ಕ್ರೂಢೀಕರಿಸಿಕೊಂಡು ಒಂದು ರಕ್ತ ಕೇಂದ್ರ ನಿರ್ಮಾಣ ಮಾಡಿದರೆ ಸಮಾಜದಲ್ಲಿ ಒಳ್ಳೆಯದಾಗುತ್ತದೆ. ರಕ್ತದಾನಿಗಳಿನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವೂ ಆಗಬೇಕು. ರೆಡ್ಕ್ರಾಸ್ ಸಂಸ್ಥೆಯು ಹಲವು ಜನಪರ ಮೌಲ್ಯಯುತವಾದ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದೆ. ಮತ್ತಷ್ಟು ಸಮಾಜಮುಖಿ ಕೆಲಸ ಮಾಡಿಕೊಂಡ ಹೋಗಲಿ ಎಂದು ಆಶಿಸಿದರು.

ರೆಸ್ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಮಾನವನಿಗೆ ಉಪಯುಕ್ತವಾಗಿರುವುದು ರಕ್ತ ಎನ್ನುವುದನ್ನು ಮರೆಯಬಾರದು. ರಕ್ತಕ್ಕೆ ಪರ್ಯಾಯವಾಗಿ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಅಮೂಲ್ಯ ಜೀವ ಉಳಿಸಿದಂತಾಗುತ್ತದೆ ಎಂದರು.

ರಕ್ತದಾನ ಶಿಬಿರ ನಡೆಸಿದ ಕಾಲೇಜಿನ ಮುಖ್ಯಸ್ಥರಿಗೆ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ರೆಡ್ಕ್ರಾಸ್ ಸಂಸ್ಥೆ ರಾಜ್ಯ ನಿರ್ದೇಶಕ ನಾಗೇಶ್ ಎಚ್.ಟಿ, ಗೌರವ ಕಾರ್ಯದರ್ಶಿ ಕೆ.ಎಂ.ಶಿವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.