ಕಿಕ್ಕೇರಿ: ರಥಗಳು ಶಿಥಿಲಗೊಂಡ ಹಿನ್ನೆಲೆಯಲ್ಲಿ ಹೋಬಳಿಯ ಸಾಸಲು ಕ್ಷೇತ್ರದಲ್ಲಿ ಜೀರ್ಣೋದ್ಧಾರದ ನೆಪದಲ್ಲಿ 4 ವರ್ಷಗಳಿಂದ ಜೋಡಿ ರಥೋತ್ಸವ ಸ್ಥಗಿತಗೊಂಡಿದ್ದು, ಭಕ್ತರು ಬೇಸರದಲ್ಲಿಯೇ ಖಾಲಿ ರಥಗಳಿಗೆ ಪೂಜೆ ಸಲ್ಲಿಸಿದರು.

ಸೋಮೇಶ್ವರ, ಶಂಭುಲಿಂಗೇಶ್ವರ ಜಾತ್ರೆಯಲ್ಲಿ ಜೋಡಿ ರಥಗಳು ರಥಬೀದಿಯಲ್ಲಿ ಚಲಿಸದಿದ್ದರಿಂದ ಭಕ್ತರು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಹಾಕಿದರು.

ಯುಗಾದಿ ತರುವಾಯ ಊರಿನ ಗ್ರಾಮಸ್ತರು ನಿಶ್ಚಯಿಸಿದಂತೆ ಸೋಮವಾರ ಜಾತ್ರೋತ್ಸವ ನಿಗದಿಯಾಗಿತ್ತು. ಗ್ರಾಮದ ಜಾತ್ರೆ, ರಥೋತ್ಸವಕ್ಕೆ ಜಿಲ್ಲೆಯಾದ್ಯಂತ ಭಕ್ತರು ಆಗಮಿಸಿದ್ದರು. ಕಳೆದ ವರ್ಷ ಸೋಮೇಶ್ವರ, ಶಂಭುಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಎರಡು ರಥಗಳಲ್ಲಿ ಪ್ರತಿಷ್ಟಾಪಿಸಿ ಪೂಜಿಸಿ ಭಕ್ತರು ನಿಧಾನವಾಗಿ ಎಳೆಯುವಂತೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಉತ್ಸವ ಮೂರ್ತಿಯನ್ನು ಕನಿಷ್ಠ ರಥಬೀದಿಯಲ್ಲಿ ಮೆರವಣಿಗೆ ಮಾಡಿಸದೆ, ರಥದಲ್ಲಿಯೂ ದೇವರ ಮೂರ್ತಿಯನ್ನು ಪ್ರತಿಷ್ಟಾಪಿಸದೇ ಖಾಲಿ ರಥಗಳಿಗೆ ಮಾತ್ರ ಪೂಜಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದರು. ರಥಗಳಿಗೆ ಕನಿಷ್ಠ ಬಣ್ಣದ ಬಾವುಟ, ಹೂವಿನ ಅಲಂಕಾರಕ್ಕೂ ಅವಕಾಶ ಕಲ್ಪಿಸಿರಲಿಲ್ಲ. ಇದರಿಂದಾಗಿ ಅರ್ಚಕರು ರಥಗಳಿಗೆ ಸಾಂಕೇತಿಕವಾಗಿ ಪೂಜಿಸಿದರು.

ಭಕ್ತರು ರಥ ಸಂಭ್ರಮ ಸವಿದು ದೇವರನ್ನು ಪೂಜಿಸಲು ಖುಷಿಯಿಂದ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದರು. ಆದರೆ ರಂಗಬೀದಿಯಲ್ಲಿದ್ದ ದೇವರ ಮೂರ್ತಿಯಿಲ್ಲದ ಖಾಲಿ ರಥಗಳಿಗೆ ಕಂಡು ಬೇಸರಿಸಿದರು. ಅಂತಿಮವಾಗಿ ಬೇಸರದಿಂದಲೇ ರಥಗಳಿಗೆ ಹಣ್ಣು ಕಾಯಿಯೊಂದಿಗೆ ಪೂಜಿಸಿ ಮನೆಗೆ ಹಿಂತಿರುಗಿದರು.

‘ಮುಜರಾಯಿ ದೇಗುಲವಾಗಿದ್ದು, ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಆದಾಯ ಇಲಾಖೆಗೆ ಬರಲಿದೆ. ಜೀರ್ಣೋದ್ಧಾರ ನೆಪದಲ್ಲಿ ಶಂಭುಲಿಂಗೇಶ್ವರ, ಸೋಮೇಶ್ವರ ದೇಗುಲವನ್ನು ಕೆಡವಿದ್ದು, ಕಾಮಗಾರಿ ಮುಗಿದಿಲ್ಲ. ಭಕ್ತರಿಗೆ ದೇವರ ದರ್ಶನ, ಪೂಜೆಗೆ ತೊಂದರೆಯಾಗುತ್ತಿದೆ. ರಥೋತ್ಸವ ನಡೆಯದಂತೆ ಆಗಿದೆ. ಮುಜರಾಯಿ ಅಧಿಕಾರಿಗಳಿಗೆ ಭಕ್ತರ ನಿವೇದನೆಯೇ ತಿಳಿಯದಾಗಿದೆ’ ಎಂದು ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-40-1884848825

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.