ಕಿಕ್ಕೇರಿ: ಹೋಬಳಿಯ ಪ್ರಸಿದ್ಧ ಸಾಸಲು ಕ್ಷೇತ್ರದಲ್ಲಿ ಭಕ್ತರಿಗೆ ಅನುಕೂಲವಾಗಲು ನಿರ್ಮಿಸುತ್ತಿರುವ ಯಾತ್ರಿ ನಿವಾಸ ಕಾಮಗಾರಿ 5–6 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದು, ಭಕ್ತರ ಸಂಕಷ್ಟ ಹೇಳತೀರದಾಗಿದೆ.

2020ರಲ್ಲಿ ಅಂದಿನ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಕಾಳಜಿಯಿಂದ ₹1 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ದೊರೆಯಿತು. ನಿರ್ಮಿತಿ ಕೇಂದ್ರದವರು ಗುತ್ತಿಗೆ ಪಡೆದಿದ್ದು, ಆರಂಭದಲ್ಲಿ ವೇಗ ಕಂಡರೂ ಸ್ಥಳೀಯರನ್ನು ತುಂಡು ಗುತ್ತಿಗೆದಾರರನ್ನಾಗಿ ನೇಮಿಸಿಕೊಂಡಿದ್ದರಿಂದ ಗುಣಮಟ್ಟದ ಕಾಮಗಾರಿ ನಡೆದಿಲ್ಲ.

‘ಕ್ಷೇತ್ರದಲ್ಲಿ ಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ದೇಗುಲಗಳು ಮುಜರಾಯಿ ಇಲಾಖೆಗೆ ಸೇರಿದ್ದು, ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳ ವರಮಾನ ಬರುವ ಇವುಗಳನ್ನು ‘ಬಿ’ದರ್ಜೆಗೆ ಸೇರಿಸಲಾಗಿದೆ. ಸೋಮವಾರ ಬಿಡುವಿನ ದಿನಗಳಲ್ಲಿ ನೂರಾರು ಭಕ್ತರು, ಕಾರ್ತಿಕ ಮಾಸದಲ್ಲಿ ಲಕ್ಷಾಂತರ ಭಕ್ತರು ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಆಗಮಿಸುತ್ತಾರೆ. ಒಂದೆರಡು ದಿನ ಕ್ಷೇತ್ರದಲ್ಲಿ ತಂಗುತ್ತಾರೆ. ಪುಷ್ಕರಿಣಿಯಲ್ಲಿ ಸ್ನಾನ ಮಾಡಿ, ನಾಗಪೂಜೆ, ಮಡಿಪೂಜೆಯಂತಹ ಕಾರ್ಯಗಳನ್ನು ನಡೆಸಿ ಪೂಜೆ, ಹರಕೆ ಅರ್ಪಿಸಲಾಗುತ್ತದೆ.

ಭಕ್ತರ ಅನುಕೂಲಕ್ಕಾಗಿ ಗ್ರಾಮದ ಹೊರವಲಯದ ಶಂಭುಲಿಂಗೇಶ್ವರ ದೇಗುಲ ತೋಪಿನಲ್ಲಿ 2 ಗುಂಟೆಯಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸ ಪರಿಪೂರ್ಣವಾಗದೆ ತಂಗಲು ಸೂಕ್ತ ಕೊಠಡಿ ಇಲ್ಲದೆ ಭಕ್ತರು ಬಯಲಿನಲ್ಲೇ ಮಲಗುವುದು, ಸ್ನಾನ ಮಾಡಿ ಬಟ್ಟೆ ಬದಲಾಯಿಸಬೇಕಿದೆ. ಇದರಿಂದಾಗಿ ಮಹಿಳೆಯರು ಪರದಾಡುವಂತಾಗಿದೆ.

ಐದಾರು ವರ್ಷದಿಂದ ಕಾಮಗಾರಿ ಮುಗಿಯದೆ ಬಿಸಿಲು, ಮಳೆಗೆ ಕಟ್ಟಡ ಸತ್ವ ಕಳೆದುಕೊಳ್ಳುತ್ತಿದೆ. ಕಟ್ಟಡ ಸಡಿಲವಾಗುವಂತೆ ಗಿಡಗಂಟಿಗಳು ಬೇರುಬಿಟ್ಟಿದೆ. ಇಡೀ ಪರಿಸರ ಸುತ್ತ ಗಿಡಗಂಟಿ ಬೆಳೆದು ಭಯ ಮೂಡಿಸುವಂತಾಗಿದೆ. ಬೀಡಾಡಿ ನಾಯಿಗಳು, ಹಾವು ಹಲ್ಲಿಗಳು, ಅನೈತಿಕ ಚಟುವಟಕೆ, ಮದ್ಯಪ್ರಿಯರ ತಾಣವಾಗಿ ಪರಿಣಮಿಸಿದೆ. ತುಸು ದೂರದಲ್ಲಿ ಪ್ರೌಢಶಾಲೆ ಇದ್ದು ಮಕ್ಕಳಲ್ಲಿ ವಿಷಜಂತುಗಳ ಭಯ ಕಾಡುತ್ತಿದೆ.

‘₹53 ಲಕ್ಷ ಬಿಡುಗಡೆಯಾಗಿದೆ. ಉಳಿಕೆ ಅನುದಾನ ಬಿಡುಗಡೆಯಾಗಿಲ್ಲ. ಈಗ ಕೂಲಿಕಾರ್ಮಿಕರ ಕೂಲಿ, ಕಟ್ಟಡ ಸಾಮಗ್ರಿಗಳು ಗಗನಕ್ಕೆ ಏರಿದ್ದು, ಹಳೆ ದರದಲ್ಲಿ ಹೇಗೆ ಕಾಮಗಾರಿ ಮುಗಿಸಲು ಅಸಾಧ್ಯ’ ಎನ್ನುತ್ತಾರೆ ನಿರ್ಮಿತಿ ಕೇಂದ್ರದವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-40-51356884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.