ಹಲಗೂರು: ಸಮೀಪದ ತೊರೆಕಾಡನಹಳ್ಳಿ ಬಳಿಯ ಶಿಂಷಾ ನದಿಯಲ್ಲಿ ಭಾನುವಾರ ಸಂಜೆ ಮೊಸಳೆ ಮರಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಅತಂಕ ಮೂಡಿಸಿದೆ.

ರಾಷ್ಟ್ರೀಯ ಹೆದ್ದಾರಿ- 948ರಲ್ಲಿನ ಸೇತುವೆ ಕೆಳಗಡೆ ಭಾನುವಾರ ಸಂಜೆ ಪುರದದೊಡ್ಡಿ ಗ್ರಾಮದ ರೈತರಿಗೆ ಮೊಸಳೆ ಕಾಣಿಸಿದ್ದು, ಮೊಬೈಲ್ನಲ್ಲಿ ಫೋಟೊ ಸೆರೆ ಹಿಡಿದಿದ್ದಾರೆ.

ವಿಷಯ ತಿಳಿದ ಅರಣ್ಯ ಇಲಾಖೆ ವನಪಾಲಕ ಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ರೈತರು ಮತ್ತು ಸಾರ್ವಜನಿಕರು ನದಿಗೆ ಇಳಿಯುವಾಗ ಎಚ್ಚರಿಕೆ ವಹಿಸಬೇಕು. ಬಿಸಿಲಿನ ಸಮಯದಲ್ಲಿ ಮೊಸಳೆಗಳು ನದಿಯ ದಂಡೆ, ಮರಳು ಮತ್ತು ಕಲ್ಲು ಬಂಡೆಗಳ ಮೇಲೆ ವಿರಮಿಸುತ್ತವೆ. ಜಾನುವಾರುಗಳ ಸಾಕಣೆ ಮಾಡುವ ರೈತರು ನದಿಗೆ ಇಳಿಯುವಾಗ ಜಾಗೃತರಾಗಿರಬೇಕೆಂದು ಸೂಚನೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-40-1918721944

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.