ಬೆಳಕವಾಡಿ: ಸಮೀಪದ ಶಿವನಸಮುದ್ರಂ( ಬ್ಲಫ್ )ನಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸದ ವೇಳೆ ಗಾಯಗೊಂಡಿರುವ ಹೊರಗುತ್ತಿಗೆ ಕಾರ್ಮಿಕನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಶಿವನಸಮುದ್ರಂ(ಬ್ಲಫ್) ಗ್ರಾಮದ ಕರ್ನಾಟಕ ವಿದ್ಯುತ್ ನಿಗಮದ ಕಚೇರಿ ಮುಂಭಾಗ ಜಮಾಯಿಸಿದ ಸದಸ್ಯರು ಉಪಕರಣಗಳ ನವೀಕರಣ ಕೆಲಸ ನಿರ್ವಹಿಸುತ್ತಿರುವ ಆ್ಯಂಡ್ರಿಟ್ಜ್ ಹಾಗೂ ಇ.ಎಂ.ಫ್ಯಾಬ್ರಿಕೇಟರ್ಸ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಅಭಿಷೇಕ್ ಎಂಬುವನಿಗೆ ಕೆಲಸದ ಸ್ಥಳದಲ್ಲಿ ಅವಘಡವಾಗಿ ಕೈಮೂಳೆ ಮುರಿದಿದೆ. ಆತನಿಗೆ ಚಿಕಿತ್ಸಾ ವೆಚ್ಚ ಮತ್ತು ಪರಿಹಾರ ನೀಡುವಂತೆ ಆಗ್ರಹಿಸಿ, ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಮುಖಂಡ ವಿಷಕಂಠ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮವಾಗಿ ಜಲ ವಿದ್ಯುತ್ ಸ್ಥಾಪನೆಯಾದ ಶಿವನಸಮುದ್ರಂನಲ್ಲಿ ಹಲವು ಖಾಸಗಿ ಕಂಪನಿಗಳು ಜಲ ವಿದ್ಯುತ್ ಉತ್ಪಾದನೆ ಸೇರಿ ಇನ್ನಿತರ ಉತ್ಪಾದನಾ ಘಟಕಗಳಿವೆ. ಇಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ಅಗತ್ಯ ಮೂಲಸೌಕರ್ಯ, ಕನಿಷ್ಠ ವೇತನ ನೀಡದೆ ವಂಚಿಸಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಅಗತ್ಯ ರಕ್ಷಣಾ ಕ್ರಮ ಕೈಗೊಳ್ಳದೇ ಅವಘಡಗಳಾದ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಅವರಿಗೆ ಅಗತ್ಯ ಚಿಕಿತ್ಸೆ, ಕುಟುಂಬ ನಿರ್ವಹಣೆಗೆ ಅಗತ್ಯ ಕನಿಷ್ಠ ಸೌಲಭ್ಯ ಒದಗಿಸುತ್ತಿಲ್ಲ. ಕಾರ್ಮಿಕರ ಶ್ರಮವನ್ನು ಶೋಷಣೆ ಮಾಡಿ ಖಾಸಗಿ ಕಂಪನಿಗಳು ಆದಾಯ ಗಳಿಸುತ್ತಿವೆ ಎಂದು ಆರೋಪಿಸಿದರು.

ಗಾಯಗೊಂಡಿರುವ ಅಭಿಷೇಕ್ಗೆ ಅಗತ್ಯ ಚಿಕಿತ್ಸಾ ವೆಚ್ಚ, ಪರಿಹಾರ ಹಾಗೂ ಆತ ದೈಹಿಕವಾಗಿ ಸಮರ್ಥನಾಗುವವರೆಗೆ ಸಂಬಳ ಮತ್ತು ದೈಹಿಕ ಸಾಮರ್ಥ್ಯ ಸರಿಹೋದ ತಕ್ಷಣ ಆತನ ಸಂಬಳ ಹೆಚ್ಚು ಮಾಡಿ ಕೆಲಸ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆಪಿಸಿ ಕಾರ್ಯಪಾಲಕ ಎಂಜಿನಿಯರ್ ಅನಿತಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿದ್ದಲಿಂಗಸ್ವಾಮಿ, ಕಾರ್ಮಿಕ ಇಲಾಖೆ ಅಧಿಕಾರಿ ಮುನಿ ಲಿಂಗೇಗೌಡ ಮಾತನಾಡಿ, ಅಭಿಷೇಕ್ಗೆ ಚಿಕಿತ್ಸೆ ವೆಚ್ಚ, ವಿಶ್ರಾಂತಿ ವೇಳೆ ಮೂರು ತಿಂಗಳ ಸಂಬಳ ನೀಡುವುದರ ಜತೆಗೆ ಕೆಲಸಕ್ಕೆ ಪುನಃ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್. ಭರತ್ರಾಜ್, ತಾಲ್ಲೂಕು ಕಾರ್ಯದರ್ಶಿ ಗುರುಸ್ವಾಮಿ, ಸಿಐಟಿಯು ಮುಖಂಡರಾದ ಮಹದೇವಮ್ಮ, ಎನ್.ಲಿಂಗರಾಜಮೂರ್ತಿ, ವಿಷಕಂಠು, ನಂಜುಂಡಸ್ವಾಮಿ, ನಾಗಮ್ಮ ವಿಮಲಾ ಹಾಗೂ ನೊಂದ ಕಾರ್ಮಿಕ ಅಭಿಷೇಕ್ ಮತ್ತು ಆತನ ತಾಯಿ, ಮಹಾದೇವಯ್ಯ, ಸಿದ್ದರಾಜ್, ರಾಜಮ್ಮ, ಮಾದೇಶ್, ಜಯಮ್ಮ, ನಾಗಮ್ಮ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-40-1826612042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.