ಶ್ರೀರಂಗಪಟ್ಟಣ: ‘ಸಮಾಜ ಸುಭಿಕ್ಷವಾಗಿದ್ದರೆ ನಮ್ಮ ಬದುಕು ಹಸನಾಗಲಿದ್ದು, ಜನರು ಹಾಗೂ ಸಂಘ ಸಂಸ್ಥೆಗಳು ತಮ್ಮ ಸಾಮರ್ಥ್ಯವಿದ್ದಷ್ಟು ಸಮಾಜದ ಹಿತಕ್ಕಾಗಿ ದುಡಿಯಬೇಕು’ ಎಂದು ಮಂಡ್ಯ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಂ. ನಂದೀಶ್ ತಿಳಿಸಿದರು.

ತಾಲ್ಲೂಕಿನ ಚಂದಗಿರಿಕೊಪ್ಪಲು ಗ್ರಾಮದಲ್ಲಿ ‘ರಿ ಬಿಲ್ಡ್ ಚಾರಿಟಬಲ್ ಟ್ರಸ್ಟ್’ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ ನೆಮ್ಮದಿಯ ಜೀವನ ನಡೆಸಬೇ ಕಾದರೆ ಸೇವಾಭಾವ ಬೆಳೆಸಿಕೊಳ್ಳಬೇಕು. ಪಾಸ್ಟರ್ ಹೊಯ್ಸಳಗೌಡ ಮತ್ತು ತಂಡ ಎರಡು ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿದೆ. ಇದೀಗ ಟ್ರಸ್ಟ್ ಕೂಡ ಆರಂಭಿಸಿದೆ’ ಎಂದು ಆಶಿಸಿದರು.

ಟ್ರಸ್ಟ್ ಅಧ್ಯಕ್ಷ ಹಾಗೂ ವಿಂಗ್ಸ್ ಆಫ್ ಹೋಪ್ ಎ ಜಿ ಚರ್ಚ್ ಮುಖ್ಯಸ್ಥ ಪಾಸ್ಟರ್ ಹೊಯ್ಸಳಗೌಡ ಪ್ರಾಸ್ತಾವಿಕ ಮಾತನಾಡಿದರು. ‘ಜನರಲ್ಲಿ ಸರ್ಕಾರದ ಸವತ್ತುಗಳು, ಆರೋಗ್ಯ, ಸ್ವಚ್ಛತೆ, ಶಿಕ್ಷಣ, ಕಾನೂನುನಿನ ಬಗ್ಗೆ ಜಾಗೃತಿ ಮೂಡಿಸುವುದು ಟ್ರಸ್ಟ್ನ ಮುಖ್ಯ ಉದ್ದೇಶಗಳಾಗಿವೆ’ ಎಂದು ತಿಳಿಸಿದರು.

ಡಾ. ನಿಸಾರ್ ಅಹಮದ್, ಡಾ.ಅಹಮದ್ ಪಾಷ ನೇತೃತ್ವದ ತಂಡ ಮಧುಮೇಹ, ರಕ್ತದೊತ್ತಡ, ಮೂಳೆ ಮತ್ತು ಕೀಲುಗಳ ತಪಾಸಣೆ ನಡೆಸಿತು. ಮೈಸೂರಿನ ನೇತ್ರ ದೀಪ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಕಣ್ಣಿನ ತಪಾಸಣೆ ನಡೆಸಿದರು. ಚಂದಗಿರಿಕೊಪ್ಪಲು ಹಾಗೂ ಆಸುಪಾಸಿನ ಗ್ರಾಮಗಳ 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಯಿತು. ಮುಖಂಡರಾದ ಎಂ. ನಾಗೇಂದ್ರ, ಪ್ರಭಾಕರ್, ಪಿಡಿಒ ಸುರೇಶಕುಮಾರ್, ಮುಖ್ಯ ಶಿಕ್ಷಕಿ ಯಶೋಧಮ್ಮ, ಬಲ್ಲೇನಹಳ್ಳಿ ಪಿಎಸಿಎಸ್ ನಿರ್ದೇಶಕ ನಾಗೇಗೌಡ, ನಿವೃತ್ತ ಶಿಕ್ಷಕ ಸುಬ್ಬೇಗೌಡ ಹಾಗೂ ಬಲ್ಲೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-40-1688572541

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.