ಮಂಡ್ಯ: ಮಣ್ಣಿನ ಗುಣ ಕಾಪಾಡಲು ಹಸಿರು ಎಲೆ ಗೊಬ್ಬರ ಹೆಚ್ಚು ಉತ್ಪಾದನೆಯಾಗುವಂತೆ ನೋಡಿಕೊಳ್ಳಬೇಕಿದ್ದು, ಕೃಷಿ ಅರಣ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಎಂ.ಎ. ಶಂಕರ್ ಸಲಹೆ ನೀಡಿದರು.

ನಗರದಲ್ಲಿ ಕರ್ನಾಟಕ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈ.ಕೆ.ರಾಮಯ್ಯ ಪ್ರಶಸ್ತಿ(ಕೃಷಿಕ ತಜ್ಞ–ಕೃಷಿ ಪ್ರಶಸ್ತಿ) ಪ್ರದಾನ ಮಾಡಿ ಅವರು ಮಾತನಾಡಿದರು.

‘ಭೂಮಿಗೆ ಸಾವಯವ ಅಂಶ ಬೇಕಿದ್ದು, ಮಣ್ಣಿನ ರಸ ಸಾರ, ಸೂಕ್ಷ್ಮಜೀವಾಣುಗಳು, ಸೂಕ್ಷ್ಮಪೋಷಕಾಂಶಗಳು, ನೀರು, ಗಾಳಿ ಎಂಬ ಪಂಚ ತತ್ವಗಳು ಮಣ್ಣಿನ ಸಂರಕ್ಷಣೆ ಮಾಡುತ್ತವೆ. ಮಣ್ಣಿನ ಫಲವತ್ತತೆ ಬಗ್ಗೆ ನಮ್ಮ ಪೂರ್ವಿಕರು ಹೇಳಿಕೊಟ್ಟಿರುವ ಹಸಿರೆಲೆ ಗೊಬ್ಬರಗಳು, ಯಾವುದೇ ಸಸಿಗಳನ್ನು ತೆಗೆದುಕೊಳ್ಳಿ ಅದರಲ್ಲಿ ಔಷಧೀಯ ಗುಣವಿರುತ್ತದೆ’ ಎಂದು ತಿಳಿಸಿದರು.

ಚಕ್ಕೊತಾ, ಬೆಣ್ಣೆ ಹಣ್ಣು, ಮೆಕಾಡಮಿಯಾ, ಸೇಬು, ಸೀತಾಫಲದಂತಹ ಸಸಿಗಳನ್ನು ಬೆಳೆಸುವುದರಿಂದ ಮಣ್ಣಿನ ಸಂರಕ್ಷಣೆ ಹಾಗೂ ಹಸಿರೆಲೆ ಗೊಬ್ಬರ ಯೆಥೇಚ್ಛವಾಗಿ ಸಿಗುತ್ತದೆ. ನಮ್ಮ ಜಾನುವರುಗಳಿಂದ ಮಿಥೇಲ್ ರಾಸಾಯನಿಕ ವಸ್ತು ಅಷ್ಟಾಗಿ ಬರುವುದಿಲ್ಲ, ಕಾರ್ಖಾನೆಗಳಿಂದ ಮಿಥೇಲ್ ರಾಸಾಯನಿಕ ಬರುತ್ತಿದೆ ಧರಣಿ ಮಳೆಗೆ ನೆಲಗಡಲೆ ಮತ್ತು ಎಳ್ಳು ಬಿತ್ತುತ್ತಿದ್ದರು ಈಗ ಯಾರೂ ಬಿತ್ತನೆ ಮಾಡುತ್ತಿಲ್ಲ ಎಂದು ವಿಷಾದಿಸಿದರು.

ತಿಪ್ಪೆಗೊಬ್ಬರ ಬಳಸಿ: ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದೆ, ತಿಪ್ಪೆ ಗೊಬ್ಬರಗಳು ಕಣ್ಮರೆಯಾಗುತ್ತಿವೆ. ಕೃಷಿ ಅರಣ್ಯ ಪದ್ಧತಿ ಇದ್ದರೆ ದಿನದ 24 ಗಂಟೆ ಆಮ್ಲಜನಕ ಪಡೆಯಬಹುದು. ಆಂಧ್ರ ಪ್ರದೇಶದಲ್ಲಿ ಅರಳಿಮರ ಸೊಪ್ಪಿನ ಮಾರಾಟಕ್ಕೆ ಮಾರುಕಟ್ಟೆಯನ್ನೇ ಸ್ಥಾಪಿಸಲಾಗಿದೆ. ಕುರಿ, ಮೇಕೆಗಳಿಗೆ ಇಲ್ಲಿ ಅರಳಿ ಸೊಪ್ಪನ್ನು ಮಾರಾಟ ಮಾಡುತ್ತಾರೆ. ನುಗ್ಗೇಗಿಡದಲ್ಲಿ ಔಷಧಿ ಗುಣವಿದೆ. ಹಸುಗಳಿಗೆ ಒಣ ಹುಲ್ಲನ್ನು 5 ಕೆ.ಜಿ.ಗಿಂತ ಹೆಚ್ಚಾಗಿ ಕೊಡಬಾರದು, ಹಸಿರು ಎಲೆ ಮೇವನ್ನು ಹೆಚ್ಚಾಗಿ ನೀಡಬೇಕು ಎಂದು ಶಂಕರ್ ಸಲಹೆ ನೀಡಿದರು. ಬೇವು, ಹೆಬ್ಬೇವು, ಬಸರಿ, ಹೊಂಗೆ, ಆಲದ ಸಸಿಗಳನ್ನು ನೆಟ್ಟು ಮರ ಮಾಡುವುದರಿಂದ ವಾತಾವರಣಕ್ಕೆ ಬೇಕಾದ ಅಂಶಗಳನ್ನು ತಂದುಕೊಡುತ್ತವೆ. ನೀರನ್ನು ಸಂರಕ್ಷಣೆ ಮಾಡಬೇಕು. ಸಬ್ಸಿಡಿ ಹಿಂದೆ ಹೋಗಬೇಡಿ, ಮೊದಲು ಕೃಷಿ ವಿಧಾನಗಳನ್ನು ಕಲಿತು ಅನುಸರಿಬೇಕು ಎಂದು ಸಲಹೆ ನೀಡಿದರು.

ಇಂದು ಅರ್ಗ್ಯಾನಿಕ್ ಕಾರ್ಬನ್ 0.5ಕ್ಕೆ ಕುಸಿದಿದೆ. ಸರಿಯಾದ ರೀತಿಯಲ್ಲಿ ಸಾವಯವ ಗೊಬ್ಬರ ಹಾಕುತ್ತಿಲ್ಲ. ಕೋಳಿ ಗೊಬ್ಬರ ಹಾಕಬಹುದು ಎನ್ನುತ್ತಾರೆ, ಇದರಲ್ಲಿ ಟ್ರಯಾಸಿಕ್ ಎಂಬುವ ಆಸಿಡ್ ಪದಾರ್ಥ ಹೆಚ್ಚಿರುತ್ತದೆ. ಒಂದು ಟನ್ ಕೋಳಿ ಗೊಬ್ಬರಕ್ಕೆ 8 ಕೆ.ಜಿ. ಸುಣ್ಣ ಮಿಶ್ರಣದ ತಿಳಿ ನೀರನ್ನು ಸಿಂಪಡಿಸಿ, ಒಂದು ತಿಂಗಳ ನಂತರ ಬಳಸಿದರೆ ದುಷ್ಪರಿಣಾಮ ಕಡಿಮೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ನಮ್ಮಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದರ ಅರಿವು ಕಡಿಮೆಯಾಗಿದ್ದು ಅದಕ್ಕಾಗಿ ಮಂಡ್ಯದಲ್ಲಿ 50ಕ್ಕೂ ಹೆಚ್ಚು ಯುವ ರೈತರಿಗೆ ಯಾವ ಬೆಳೆ ಬೆಳೆಯುವುದು ಸೂಕ್ತ ಎಂಬುವ ತರಬೇತಿ ನೀಡಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಮಂಡ್ಯ ಕೃಷಿ ವಿಜ್ಞಾನಗಳ ವಿವಿ ಸಂಶೋಧನಾ ನಿರ್ದೇಶಕ ಜಿ.ಎಂ.ದೇವಗಿರಿ ಅವರಿಗೆ ಕೃಷಿ ತಜ್ಞ ಪ್ರಶಸ್ತಿ ಹಾಗೂ ಮಳವಳ್ಳಿ ಪ್ರಗತಿಪರ ಕೃಷಿಕ ನಾಗರಾಜು ಅವರಿಗೆ ಕೃಷಿ ಪ್ರಶಸ್ತಿ ಸಮೇತ ತಲಾ ₹15 ಸಾವಿರ ಮತ್ತು ಫಲಕದೊಂದಿಗೆ ಪ್ರದಾನ ಮಾಡಲಾಯಿತು.

ಮಂಡ್ಯ ಕೃಷಿ ವಿಜ್ಞಾನಗಳ ವಿವಿಯ ನಿವೃತ್ತ ವಿಶೇಷ ಅಧಿಕಾರಿ ಹರಿಣಿಕುಮಾರ್, ಸಂಘದ ಕಾರ್ಯದರ್ಶಿ ಚಂದಗಾಲು ಲೋಕೇಶ್, ನಿರ್ದೇಶಕರಾದ ಕೋಣನಹಳ್ಳಿ ಜಯರಾಂ, ಸೋಮಶೇಖರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-40-1156796112

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.