ಶ್ರೀರಂಗಪಟ್ಟಣ: ಮಳೆ ಕೊರತೆಯಿಂದಾಗಿ ತಾಲ್ಲೂಕಿನ ಚನ್ನನಕೆರೆ ಗ್ರಾಮದಲ್ಲಿ ಹಲವು ರೈತರಿಗೆ ಸೇರಿದ 50ಕ್ಕೂ ಹೆಚ್ಚು ತೆಂಗಿನ ಮರಗಳು ಒಣಗಿ ಹೋಗಿವೆ.

ಗ್ರಾಮದ ನರೇಂದ್ರ ಅವರಿಗೆ ಸೇರಿದ 20, ಪುಟ್ಟಲಿಂಗಮ್ಮ ಮಾದೇಗೌಡ ಅವರ 10, ಸಿ.ಜೆ. ಕೃಷ್ಣೇಗೌಡ ಅವರ 15, ದಿಲೀಪ್ಕುಮಾರ್ ಅವರ 18, ಮೆರವೇಗೌಡ ಅವರಿಗೆ ಸೇರಿದ 8 ಹಾಗೂ ಇತರ ರೈತರಿಗೆ ಸೇರಿದ ಮರಗಳು ನೀರಿನ ಕೊರತೆಯಿಂದ ಸಂಪೂರ್ಣ ಒಣಗಿವೆ. ಸಮೃದ್ಧವಾಗಿ ಫಲ ಕೊಡುತ್ತಿದ್ದ ತೆಂಗಿನ ಮರಗಳು ನೀರಿನ ಕೊರತೆಯಿಂದ ಕೆಲವೇ ತಿಂಗಳಲ್ಲಿ ಸುಳಿಗೂಡಿವೆ. ಹತ್ತಾರು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ್ದ ಕಲ್ಪವೃಕ್ಷಗಳು ಒಣಗಿ ನಿಂತಿರುವ ದೃಶ್ಯ ನೋಡುಗರ ಮನ ಕಲಕುತ್ತವೆ.

ಚನ್ನನಕೆರೆ ಗ್ರಾಮದ ಕೆರೆ ಭತ್ತಿ ಹೋಗಿದ್ದು ಹಕ್ಕಿಗಳು ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಆಸುಪಾಸಿನಲ್ಲಿರುವ ಬಹುತೇಕ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ್ದ ಕೊಳವೆ ಬಾವಿಗಳು ಬತ್ತಿರುವ ಪರಿಣಾಮ ತೆಂಗಿನ ಮರಗಳು ಒಣಗಿವೆ. ಮೈಲು ದೂರದಿಂದ ನೀರು ಹೊತ್ತು ತಂದು ಹಾಕಿ ಕಷ್ಟಪಟ್ಟು ಬೆಳೆಸಿದ ಮರಗಳು ಒಣಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

‘ಚನ್ನನಕೆರೆ ಗ್ರಾಮದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ನೀರಿನ ಸಮಸ್ಯೆ ತಲೆದೋರುತ್ತದೆ. ಈಗಾಗಲೇ 20 ದಿನಗಳಿಂದ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಎಲೆಚಾಕನಹಳ್ಳಿ ಏತ ನೀರಾವರಿ ಯೋಜನೆಯಿಂದ ಪಕ್ಕದ ಜಕ್ಕನಹಳ್ಳಿವರೆಗೆ ನೀರು ಹರಿಯುತ್ತಿದೆ. ಅದನ್ನು ಚನ್ನನಕೆರೆ ಗ್ರಾಮದ ವರೆಗೆ ವಿಸ್ತರಿಸುವ ಮೂಲಕ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು’ ಎಂದು ಗ್ರಾಮದ ಮುಖಂಡ ಸಿ.ಎಲ್. ನರೇಂದ್ರ ಒತ್ತಾಯಿಸಿದ್ದಾರೆ.

‘ಅತಿವೃಷ್ಠಿಯಿಂದ ಬೆಳೆ ಅಥವಾ ಮನೆಗಳಿಗೆ ಹಾನಿ ಉಂಟಾದರೆ ಸರ್ಕಾರದಿಂದ ಪರಿಹಾರ ಸಿಗಲಿದೆ. ಆದರೆ ಮಳೆ ಕೊರತೆಯಿಂದ ಯಾವುದೇ ಬೆಳೆ ಒಣಗಿದರೆ ಪರಿಹಾರ ಸಿಗುವುದಿಲ್ಲ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾದ ಪಕ್ಷದಲ್ಲಿ ಬೇರೆಡೆ ಖರೀದಿಸಿ ಹಂಚಲು ಅವಕಾಶವಿದೆ’ ಎಂದು ತಹಶೀಲ್ದಾರ್ ಚೇತನಾ ಯಾದವ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-40-171359435

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.