ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದಲ್ಲಿ ನಿಮಿಷಾಂಬ ವರ್ಧಂತಿ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆಯಿಂದ ಸಂಜೆ ವರೆಗೂ ಹೋಮ, ಹವನಗಳು ನಡೆದವು.

ದೇವಾಲಯದ ಪ್ರಾಂಗಣದಲ್ಲಿ ಬೆಳಿಗ್ಗೆ ಲೋಕ ಕಲ್ಯಾಣಾರ್ಥವಾಗಿ ನಿಮಿಷಾಂಬ ಹೋಮವನ್ನು ಏರ್ಪಡಿಸಲಾಗಿತ್ತು. ಕಳಶ ಪೂಜೆ, 121 ಕಳಶಗಳ ಮಹಾಭಿಷೇಕ, ಅಷ್ಟ ದಿಗ್ಬಲಿ, ಕಾವೇರಿ ಪೂಜೆ, ಪೂರ್ಣಾಹುತಿ ಇತರ ವಿಧಿ ವಿಧಾನಗಳು ನಡೆದವು. ಇದಕ್ಕೂ ಮುನ್ನ ವೈದಿಕರು ಗಣಪತಿ ಪೂಜೆ, ಪುಣ್ಯಾಹ, ಮಹಾ ಸಂಕಲ್ಪ, ಕಳಶ ಸ್ಥಾಪನೆ, ಸಪ್ತಸತೀ ಪಾರಾಯಣ ಮತ್ತು ಮಹಾ ಮಂಗಳಾರತಿ ನಡೆಯಿತು. ದೇವಾಲಯದ ಸುತ್ತಾಲಯದಲ್ಲಿ ಮಂಗಳ ವಾದ್ಯ ಸಹಿತ ಕಳಶಗಳ ಮೆರವಣಿಗೆ ನಡೆಯಿತು.

ವರ್ಧಂತಿ ಮಹೋತ್ಸವದ ಅಂಗವಾಗಿ ನಿಮಿಷಾಂಬ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ದೇವಾಲಯದ ಅರ್ಚಕರು ಅರ್ಚನೆ, ಅಭಿಷೇಕಾದಿಗಳನ್ನು ನೆರವೇರಿಸಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಎನ್. ದಯಾನಂದ, ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣಭಟ್, ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಮಹೇಶ್ ಹಾಗೂ ಸದಸ್ಯರು ಪೂಜಾ ಕೈಂರ್ಯಗಳಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯರು ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಮಂಡ್ಯ ಇತರ ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು. ಹರಕೆ ಹೊತ್ತವರು ಕಾವೇರಿ ನದಿಯಲ್ಲಿ ಮಿಂದು ನಾರು ಮಡಿಯಲ್ಲಿ ದೇವಿಯ ದರ್ಶನ ಪಡೆದರು. ಮಹಿಳಾ ಭಕ್ತರು ಉರುಳು ಸೇವೆಯನ್ನೂ ನಡೆಸಿದರು. ಪ್ರಸಾದ ವಿತರಣೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-40-352348022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.