ಶ್ರೀರಂಗಪಟ್ಟಣ: ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ, ಸೋಮವಾರ ಸಂಜೆ ನದಿಗೆ ಹಾರಿದ್ದ 65 ವರ್ಷದ ವೃದ್ಧೆಯನ್ನು ಸ್ಥಳೀಯರು ರಕ್ಷಿಸಿದರು.

ನದಿಯಲ್ಲಿ ಮುಳುಗುತ್ತಿದ್ದ ವೃದ್ಧೆಯನ್ನು ವೆಲ್ಲೆಸ್ಲಿ ಸೇತುವೆ ಬಡಾವಣೆ ನಿವಾಸಿಗಳಾದ ಖಿಜರ್ ಪಾಷ, ಫಯಾಜ್, ಮಹಮದ್ ರುಮರ್, ಅಬ್ರಾರ್ ಅವರ ತಂಡ ರಕ್ಷಿಸಿತು.

ತೆಪ್ಪದಲ್ಲಿ ತೆರಳಿ, ನೀರಿನಲ್ಲಿ ಮುಳುಗೇಳುತ್ತಿದ್ದ ಅಜ್ಜಿಯನ್ನು ದಡಕ್ಕೆ ಕರೆತಂದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ವೃದ್ಧೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.

ನದಿಗೆ ಹಾರಿದ್ದ ವೃದ್ಧೆ ಮೈಸೂರು ತಾಲ್ಲೂಕಿನ ಇಲವಾಲ ಸಮೀಪದ ಬೋರೆ ಆನಂದೂರು ಗ್ರಾಮದವರು ಎಂದು ತಿಳಿದು ಬಂದಿದೆ.

‘ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ವೃದ್ಧೆ ನದಿಗೆ ಹಾರಿದ್ದರು. ಸ್ಥಳೀಯರು ಅವರನ್ನು ರಕ್ಷಣೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಂಡಿದ್ದಾರೆ. ವಾರಸುದಾರನ್ನು ಕರೆಸಿ, ವಿಚಾರಣೆ ನಡೆಸಿ ಮನೆಗೆ ಕಳುಹಿಸಿಕೊಡಲಾಗುವುದು’ ಎಂದು ಪಟ್ಟಣ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಜನಾಬಾಯಿ ಕಡಪಟ್ಟಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-40-648664951

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.