ಮಂಡ್ಯ: 2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು 97.45 ಫಲಿತಾಂಶ ದಾಖಲಿಸುವ ಮೂಲಕ, ಜಿಲ್ಲಾವಾರು 5ನೇ ಸ್ಥಾನ (ಟಾಪ್–5) ಗಳಿಸಿದೆ. ಕಳೆದ ಬಾರಿ 12ನೇ ಸ್ಥಾನ ಪಡೆದಿದ್ದ ಜಿಲ್ಲೆಯು, 7 ಸ್ಥಾನ ಮೇಲಕ್ಕೆ ಜಿಗಿದಿದೆ.

ರಾಜ್ಯ ಫಲಿತಾಂಶವು ಶೇ 94.1ರಷ್ಟಿದ್ದು, ಜಿಲ್ಲೆಯು ಶೇ 97.45 ಫಲಿತಾಂಶ ಪಡೆಯುವ ಮೂಲಕ ರಾಜ್ಯ ಫಲಿತಾಂಶಕ್ಕಿಂತ ಮುನ್ನಡೆ ಸಾಧಿಸಿದೆ. ಜಿಲ್ಲೆಯಲ್ಲಿ 18,815 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 18,275 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 540 ಮಕ್ಕಳು ಮಾತ್ರ ಅನುರ್ತೀರ್ಣರಾಗಿದ್ದಾರೆ.

9,467ರಲ್ಲಿ 9,087 ಬಾಲಕರು ಉತ್ತೀರ್ಣರಾಗಿ ಶೇ 96.0 ಫಲಿತಾಂಶ ಪಡೆದಿದ್ದಾರೆ. 9348ರಲ್ಲಿ 9188 ಬಾಲಕಿಯರು ಉತ್ತೀರ್ಣರಾಗಿ ಶೇ 98.3 ಫಲಿತಾಂಶ ಪಡೆದಿದ್ದಾರೆ. ಬಾಲಕರಿಗಿಂತ ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.

ನಗರ ವಿಭಾಗದಲ್ಲಿ 4,869ರಲ್ಲಿ 4,724 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 97.02 ಫಲಿತಾಂಶ ಬಂದಿದೆ. ಗ್ರಾಮೀಣ ವಿಭಾಗದಲ್ಲಿ 13,946ರಲ್ಲಿ 13,551 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 97.17 ಫಲಿತಾಂಶ ಪಡೆದಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳಿಗಿಂತ ಹೆಚ್ಚುವರಿ ಫಲಿತಾಂಶ ಪಡೆದಿರುವುದು ಈ ಬಾರಿಯ ವಿಶೇಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.