ಮಂಡ್ಯ: ‘ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ರೈತರಿಗೆ ಸಿಗಬೇಕಿದ್ದ ಹಲವು ಸೌಲಭ್ಯಗಳನ್ನು ತೆಗೆದುಹಾಕಿ, ಕಬ್ಬು ಬೆಳೆಗಾರರಿಗೂ ವಂಚನೆ ಮಾಡಿದೆ. ಈ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟಕ್ಕೆ ಕರೆ ನೀಡಲಾಗುವುದು’ ಎಂದು ಭಾರತೀಯ ಕಿಸಾನ್ ಸಂಘದ (ಬಿಕೆಎಸ್) ಕರ್ನಾಟಕ ದಕ್ಷಿಣ ಪ್ರಾಂತೀಯ ಅಧ್ಯಕ್ಷ ಹಾಡ್ಯ ರಮೇಶ್ರಾಜು ಎಚ್ಚರಿಕೆ ನೀಡಿದರು.

ಬೆಳೆದ ಕಬ್ಬಿಗೆ ಬೆಲೆ ನಿಗದಿ ವಿಚಾರದಲ್ಲಿ ಸೂಕ್ತ ನಿರ್ಧಾರ ಮಾಡದೆ ಸರ್ಕಾರ ಅನ್ಯಾಯ ಮಾಡಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ 15 ಸಕ್ಕರೆ ಕಾರ್ಖಾನೆಗಳಿದ್ದು, ಮೈಷುಗರ್ ಮಾತ್ರ ಸರ್ಕಾರಿ ಸಾಮ್ಯದಲ್ಲಿ ನಡೆಯುತ್ತಿದೆ. ಅದನ್ನೂ ಸರಿಯಾದ ಸಮಯಕ್ಕೆ ಪ್ರಾರಂಭ ಮಾಡುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ದೂರಿದರು.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ₹400 ಸಾಗಾಣಿಕೆ ಮತ್ತು ಕಟಾವಿನ ವೆಚ್ಚ ಕಾರ್ಖಾನೆಗಳಿಂದ ನೀಡಲಾಗುತ್ತಿದೆ. ನೆರೆಯ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಖಾನೆಗಳೇ ವೆಚ್ಚ ಭರಿಸುತ್ತಿವೆ. ಅದರಂತೆ ಕರ್ನಾಟಕದಲ್ಲಿಯೂ ಕಬ್ಬು ಬೆಳೆಗಾರರಿಗೂ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ತೂಕ ಮತ್ತು ಇಳವರಿಯಲ್ಲಿ ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತಿವೆ. ಆದ್ದರಿಂದ ರಾಜ್ಯದಲ್ಲ ಎಲ್ಲ ಕಾರ್ಖಾನೆಗಳಲ್ಲಿ ಸರ್ಕಾರದಿಂದಲೇ ತೂಕದ ಮಾಪನ ಹಾಗೂ ಇಳುವರಿ ಪತ್ತೆ ಹಚ್ಚುವ ಇಂಜಕ್ಟ್ ಮಷಿನ್ ಅಳವಡಿಸಬೇಕು. ಜೂನ್ ತಿಂಗಳಲ್ಲಿ ಕಾರ್ಖಾನೆಗಳು ಆರಂಭವಾಗಬೇಕು ಎಂದು ಒತ್ತಾಯಿಸಿದರು.

ಕಬ್ಬಿನ ಇಳುವರಿ 9.5 ರಿಂದ 10 ರಷ್ಟು ಇದ್ದರೆ, ಕೇಂದ್ರ ಸರ್ಕಾರದಿಂದ ₹3,650 ಬೆಲೆ ನಿಗದಿ ಮಾಡಬೇಕು. ಅದಕ್ಕಿಂತ ಹೆಚ್ಚು ಇಳುವರಿ ಬಂದರೆ ಹೆಚ್ಚು ಹಣ ಪಾವತಿಗೆ ರಾಜ್ಯದ ಕಾರ್ಖಾನೆಗಳು ನೀಡುವಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ. ಅಪ್ಪಾಜಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ ಹೊಳಲು, ಮುಖಂಡರಾದ ಬಸವಯ್ಯ, ಡಿ.ಎಂ. ಬೋಸ್ಕೋ, ಸತೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-40-2070753787

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.