ಮಂಡ್ಯ: ಶಾಲೆಗೆ ನಿಗದಿತ ಸಮಯಕ್ಕಿಂತ ತಡವಾಗಿ ಬರುವ ಮತ್ತು ಮುಂಚಿತವಾಗಿಯೇ ಹೋಗುವ ಶಿಕ್ಷಕರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ತಂತ್ರಜ್ಞಾನದ ಮೊರೆ ಹೋಗಿದೆ. ‘ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (ಕಾಮ್ಸ್) ‘ಕರ್ತವ್ಯ’ ತಂತ್ರಾಂಶದಲ್ಲಿ ಹಾಜರಾತಿ ಹಾಕುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಕೃತಕ ಬುದ್ಧಿಮತ್ತೆ (ಎಐ) ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಪಿಎಸ್) ಒಳಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸುಧಾರಿತ ‘ಕರ್ತವ್ಯ’ ಎಂಬ ವಿನೂತನ ತಂತ್ರಾಂಶವನ್ನು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಭಿವೃದ್ಧಿಪಡಿಸಿದೆ.

ಮೇ 1ರಿಂದಲೇ ಎಲ್ಲ ಸರ್ಕಾರಿ ಕಚೇರಿಗಳ ಭೌಗೋಳಿಕ ನಿರ್ದೇಶಾಂಕಗಳನ್ನು (ಜಿಯೋ ಟ್ಯಾಗ್) ಸಿದ್ಧಪಡಿಸಲು ಸೂಚಿಸಲಾಗಿದೆ. ಅದರಂತೆ ಜೂನ್ 1ರಿಂದ ಅಧಿಕೃತವಾಗಿ ಆರಂಭವಾಗುವ ಸರ್ಕಾರಿ ಶಾಲೆಗಳಿಗೆ ಬರುವ ಶಿಕ್ಷಕರಿಗೂ ಈ ನಿಯಮ ಅನ್ವಯಿಸಲಿದೆ.

ಮಂಡ್ಯ ಜಿಲ್ಲೆಯ ಶಿಕ್ಷಣ ಇಲಾಖೆಯ 5145 ಶಿಕ್ಷಕರು ಮತ್ತು ಸಿಬ್ಬಂದಿಯಲ್ಲಿ 5032 (ಶೇ 97.80) ನೌಕರರು ಈಗಾಗಲೇ ಮೊಬೈಲ್ ಆಧಾರಿತ ‘ಕರ್ತವ್ಯ’ ತಂತ್ರಾಂಶಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು 113 ನೌಕರರು ಮಾತ್ರ ನೋಂದಣಿ ಮಾಡಿಕೊಳ್ಳಬೇಕಾಗಿದೆ.

3 ದಿನ ತಡವಾದರೆ ಸಿಎಲ್ ಕಡಿತ: ಮೊಬೈಲ್ನಲ್ಲಿರುವ ಕರ್ತವ್ಯ ಆ್ಯಪ್ನಲ್ಲಿ ‘ಫೇಸ್ ರಿಕಗ್ನಿಶನ್’ (ಮುಖ ಗುರುತಿಸುವಿಕೆ) ಮೂಲಕ ನಿರ್ದಿಷ್ಟ ಶಾಲಾ ಆವರಣದಲ್ಲಿ ಮಾತ್ರ ‘ಚೆಕ್ ಇನ್’ ಮತ್ತು ‘ಚೆಕ್ ಔಟ್’ ಆಗಲು ಸಾಧ್ಯ. ಒಂದು ತಿಂಗಳ ಅವಧಿಯಲ್ಲಿ 3 ದಿನಗಳು ಗ್ರೇಸ್ ಪೀರಿಯಡ್ಗಿಂತ ತಡವಾಗಿ ಚೆಕ್–ಇನ್ ಮಾಡಿದರೆ, ಒಂದು ‘ಸಿಎಲ್’ ಕಡಿತಗೊಳಿಸಲಾಗುತ್ತದೆ ಎನ್ನುತ್ತದೆ ನಿಯಮ.

ನಿತ್ಯ ಶಾಲೆ ಆರಂಭದ ಸಮಯಕ್ಕೆ ಶಿಕ್ಷಕರು ಹಾಜರಿರಬೇಕು. ಸಾರಿಗೆ ಅಥವಾ ಅನಿವಾರ್ಯ ಕಾರಣಗಳಿಗಾಗಿ 10ರಿಂದ 15 ನಿಮಿಷ ರಿಯಾಯಿತಿ ನೀಡಲಾಗುತ್ತದೆ. ಶಾಲೆಯ ಅಧಿಕೃತ ಮುಕ್ತಾಯದ ಸಮಯಕ್ಕಿಂತ ಪೂರ್ವಾನುಮತಿ ಇಲ್ಲದೆ ಚೆಕ್–ಔಟ್ ಮಾಡಿದರೆ ಅರ್ಧ ದಿನ ರಜೆ ಎಂದು ಪರಿಗಣಿಸಲಾಗುತ್ತದೆ.

ಆ್ಯಪ್ನಲ್ಲಿ ದಾಖಲಾಗುವ ಲೇಟ್ ಮಾರ್ಕ್ಗಳ ಡೇಟಾ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಡಿಡಿಪಿಐ ಅಧಿಕಾರಿಗಳಿಗೆ ತಲುಪುತ್ತದೆ. ತಿಂಗಳಿನಲ್ಲಿ ಸತತವಾಗಿ ತಡವಾಗಿ ಬರುವುದು ಕಂಡುಬಂದಲ್ಲಿ ಕಾರಣ ಕೇಳಿ ನೋಟಿಸ್ (ಷೋಕಾಸ್ ನೋಟಿಸ್) ಜಾರಿ ಮಾಡಲು ಅವಕಾಶವಿದೆ. ಸಮರ್ಥನೀಯ ಕಾರಣ ನೀಡದಿದ್ದರೆ ಸೇವಾ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

-ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಬಗ್ಗೆ ಪೋಷಕರಲ್ಲಿ ಅಪನಂಬಿಕೆ ಇತ್ತು. ಹೊಸ ವ್ಯವಸ್ಥೆಯಿಂದ ಗುಣಾತ್ಮಕ ಶಿಕ್ಷಣ ವೃದ್ಧಿಯಾಗಿ, ಶಿಕ್ಷಕರಲ್ಲಿ ಸಮಯಪ್ರಜ್ಞೆ ಬೆಳೆಯುತ್ತದೆ
– ಜಿ.ಎ. ಲೋಕೇಶ್, ಡಿಡಿಪಿಐ, ಮಂಡ್ಯ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-40-713753794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.