ಪಾಂಡವಪುರ: ತಾಲ್ಲೂಕಿನ ತೊಣ್ಣೂರು ಕೆರೆಯ ಹಿನ್ನೀರಿನ ಪ್ರದೇಶದಲ್ಲಿ ಬೇಸಾ ಯಕ್ಕಾಗಿ ಕೆರೆಗೆ ರೈತರು ಅಳವಡಿಸಿಕೊಂಡಿರುವ ನೀರೆತ್ತುವ ಮೋಟರ್ಗಳನ್ನು ತೆರವುಗೊಳಿಸಬಾರದು ಎಂದು ಈಗಾಗಲೇ ತಹಶೀಲ್ದಾರ್ ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ದೇವೇಗೌಡನಕೊಪ್ಪಲಿನಿಂದ ಸಣಬದ ಕೊಪ್ಪಲು ಮಾರ್ಗವಾಗಿ ಕಡಬ ಗ್ರಾಮಕ್ಕೆ ಸೇರುವ ಸಂಪರ್ಕ ರಸ್ತೆಯ ಅಭಿವೃದ್ದಿಗೆ ₹6.18 ಕೋಟಿ ವೆಚ್ಚದ ಕಾಮಗಾರಿಗೆ ತಾಲ್ಲೂಕಿನ ಸಣಬದ ಕೊಪ್ಪಲು ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.‘ಹಿನ್ನೀರಿನ ಭಾಗದಲ್ಲಿ ರೈತರು ಹಲವು ವರ್ಷಗಳಿಂದಲೂ ಕೆರೆಯ ನೀರನ್ನು ಬಳಸಿಕೊಂಡು ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ರೈತರ ಹಿತದೃಷ್ಟಿಯಿಂದ ಯಾವ ಕಾರಣಕ್ಕೂ ನೀರೆತ್ತುವ ಮೋಟರ್ಗಳನ್ನು ತೆರವುಗೊಳಿಸಬಾರದು’ ಎಂದು ಅಧಿಕಾರಿಗಳಿಗೆ ಮತ್ತೊಮ್ಮೆ ಖಡಕ್ ಸೂಚನೆ ನೀಡಿದರು.

ಕೆರೆ ಒತ್ತುವರಿ ಬೇಡ:‘ಗ್ರಾಮೀಣ ಜನರ ನೀರಿನ ಮೂಲಗಳಾಗಿರುವ ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡುವ ಹಾಗೂ ಮುಚ್ಚುವ ಕೆಲಸ ಮಾಡಬಾರದು. ಹೂಳು ತೆಗೆದು ಕೆರೆಕಟ್ಟೆಗಳನ್ನು ಉಳಿಸಿಕೊಳ್ಳುವುದನ್ನು ಮಾಡಬೇಕಿದೆ. ಗ್ರಾಮೀಣ ಜನರು ರಾಜಕೀಯವನ್ನು ಬದಿಗಿಟ್ಟು ಒಟ್ಟಾಗಿ ಹಳ್ಳಿಯ ಅಭಿವೃದ್ದಿಗೆ ಕೆಲಸ ಮಾಡಬೇಕು’ ಎಂದರು.

ಸಂಘದ ಹಿರಿಯ ಮುಖಂಡ ಕೆ.ಟಿ.ಗೋವಿಂದೇಗೌಡ, ತಾಲ್ಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಮಹಿಳಾ ಘಟಕದ ರೂಪ ಅರಳಕುಪ್ಪೆ, ವಕೀಲ ಶ್ರೀಧರ, ಸಣಬ ಕೊಪ್ಪಲು ಗ್ರಾಮದ ಮುಖಂಡ ರಾದ ಚಲುವೇಗೌಡ, ಜಯರಾಮು, ಬೋರೇ ಗೌಡ, ಶಿವರಾಮು, ಡೇರಿ ಕುಮಾರ, ಬೆಟ್ಟೇಗೌಡ, ಅಭಿಷೇಕ್, ಪ್ರಕಾಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-40-250447700

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.