ಮಂಡ್ಯ: ಜಿಲ್ಲಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಮಂಡ್ಯ- ಹನಕೆರೆ ರೈಲು ನಿಲ್ದಾಣಗಳ ನಡುವೆ ಹಾಗೂ ಮದ್ದೂರು ರೈಲು ನಿಲ್ದಾಣದ ಪ್ಲಾಟ್ ಫಾರಂ ನಂ.1ರ ಬಳಿ ಅಪರಿಚಿತ ವ್ಯಕ್ತಿಗಳ ಶವಗಳು ಪತ್ತೆಯಾಗಿವೆ. ಇಬ್ಬರೂ ಯಾವುದೋ ಚಲಿಸುವ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ಸಂಬಂಧ ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಡ್ಯ- ಹನಕೆರೆ ಬಳಿ ಮೃತಪಟ್ಟಿರುವ ವ್ಯಕ್ತಿಯು 30-35 ವರ್ಷದವನಾಗಿದ್ದು, 5.6 ಅಡಿ ಎತ್ತರ, ಸಾಧಾರಣ ಶರೀರ, ಗೋಧಿಮೈಬಣ್ಣ, ಕೋಲು ಮುಖ ಹೊಂದಿದ್ದಾನೆ. ಮೃತನ ಎಡಭುಜದ ಮೇಲೆ ಶಿವಲಿಂಗದ ಮೇಲೆ ಹಾವು ಚಿತ್ರವಿರುವ ಹಸಿರು ಬಣ್ಣದ ಹಚ್ಚೆ ಇದೆ. ಶವದ ಮೈ ಮೇಲೆ ಕೆಂಪು ಬಣ್ಣದ ಅರ್ಧ ತೋಳಿನ ಟೀಶರ್ಟ್, ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್ ಇದೆ.

ಮದ್ದೂರು ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟಿರುವ ವ್ಯಕ್ತಿಯು 45 ವರ್ಷದವನಾಗಿದ್ದು, 5.5 ಅಡಿ ಎತ್ತರ, ಸಾಧಾರಣ ಶರೀರ, ಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದಾನೆ. ಮೃತನ ಬಲಗೈಯಲ್ಲಿ ಕವಿತಾ ಬಿ.ಪಿ. ಎಂದು ಇಂಗ್ಲಿಷ್ನಲ್ಲಿ ಹಸಿರು ಹಚ್ಚೆ ಇದೆ. ಶವದ ಮೈ ಮೇಲೆ ಅರ್ಧ ತೋಳಿನ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಇದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-40-1314579932

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.