ಮದ್ದೂರು (ಮಂಡ್ಯ ಜಿಲ್ಲೆ): ರೈಲಿನಲ್ಲಿ ಸೀಟಿನ ವಿಷಯಕ್ಕೆ ಸಂಬಂಧಿಸಿ ಪ್ರಯಾಣಿಕರ ನಡುವೆ ಬುಧವಾರ ಗಲಾಟೆಯಾಗಿ, ಚಾಕು ಇರಿತದಿಂದ ಇಬ್ಬರು ಗಾಯಗೊಂಡರು. ಗಾಯಗೊಂಡ ತುಮಕೂರು ಮೂಲದ ಶಿವಕುಮಾರ್ ಮತ್ತು ರೈಲ್ವೆ ಗೇಟ್ ಕೀಪರ್ ಕುಮಾರ್ ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ‘ರಾಜ-ರಾಣಿ’ ರೈಲಿನಲ್ಲಿ ಘಟನೆ ನಡೆದಿದೆ. ಸುಬಾನ್ ಖುರೇಷಿ, ಶೋಯಬ್, ವಾಸಿಮ್ ಹಲ್ಲೆ ನಡೆಸಿದ ಆರೋಪಿಗಳು. ಅವರು ಕುಟುಂಬಸ್ಥ ರೊಂದಿಗೆ ಪ್ರಯಾಣಿಸುತ್ತಿದ್ದರು.

ಸೀಟಿಗಾಗಿ ಜಗಳ ನಡೆಯುತ್ತಿದ್ದು ದನ್ನು ಪ್ರಶ್ನಿಸಲು ಹೋದ ಶಿವಕುಮಾರ್ ಅವರಿಗೆ ಆರೋಪಿಗಳು ಚಾಕುವಿನಿಂದ ಇರಿದರು. ಪ್ರಾಣ ರಕ್ಷಿಸಿಕೊಳ್ಳಲು ಅವರು ಮದ್ದೂರು ಬಳಿಯ ಚನ್ನೇಗೌಡನದೊಡ್ಡಿಬಳಿ ರೈಲಿನ ಚೈನ್ ಅನ್ನು ಎಳೆದರು. ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಅವರಿಗೂ ಚಾಕು ಇರಿತವಾಗಿದೆ. ಸುತ್ತಮುತ್ತಲಿನ ಜನ ಆರೋಪಿಗಳನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-17-1597391080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.