ಮಂಡ್ಯ: ‘ಇಲ್ಲಿನ ಮಂಡ್ಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಶಿವಚಿತ್ತಪ್ಪ ಅವರ ನೇಮಕಾತಿ ಕಾನೂನುಬಾಹಿರವಾಗಿದೆ. ರಾಜಭವನದಲ್ಲಿರುವ ಕೆಲವು ಭ್ರಷ್ಟ ಅಧಿಕಾರಿಗಳಿಂದ ಈ ಕೃತ್ಯ ನಡೆದಿದೆ’ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಆರೋಪಿಸಿದರು.

‘ವಿವಿ ಜ್ಯೇಷ್ಠತಾ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಪ್ರೊ.ಶಿವಚಿತ್ತಪ್ಪ ಅವರನ್ನು ಪ್ರಭಾರ ಕುಲಪತಿಯಾಗಿ 2024ರ ನವೆಂಬರ್ 7ರಂದು ನೇಮಿಸಲಾಗಿದೆ. ಕರ್ನಾಟಕ ವಿವಿ ಕಾಯ್ದೆ–2000 ಪ್ರಕಾರ ವಿವಿಯ ಹಿರಿಯ ಡೀನ್ ಅವರನ್ನು ನೇಮಿಸಬೇಕಿತ್ತು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಅಕ್ರಮ ನೇಮಕದ ಬಗ್ಗೆ ಉನ್ನತ ಶಿಕ್ಷಣ ಸಚಿವರು ಮತ್ತು ಕಾರ್ಯದರ್ಶಿಗೆ 6 ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ರಾಜ್ಯಪಾಲರಿಗೂ ಪತ್ರ ಬರೆಯುವೆ. ಲೋಕಾಯುಕ್ತರಿಗೂ ದೂರು ಕೊಡುವೆ. ಸಮಗ್ರ ತನಿಖೆ ನಡೆಸಿ, ಪ್ರೊ.ಶಿವಚಿತ್ತಪ್ಪ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಟೆಂಡರ್ ಕರೆಯದೆ ಹೊರಗುತ್ತಿಗೆ ಆಧಾರದಲ್ಲಿ ಕಾವಲುಗಾರರು ಮತ್ತು ಇತರೆ ಸಿಬ್ಬಂದಿಯನ್ನು ನೇಮಿಸಲಾಗಿದೆ. 30 ಉದ್ಯೋಗಿಗಳಿದ್ದರೆ, 50 ಮಂದಿ ಹೆಸರಿನಲ್ಲಿ ವೇತನ ನೀಡಲಾಗುತ್ತಿದೆ‘ ಎಂದು ಆರೋಪಿಸಿದರು.

‘ಪಿಎಚ್ಡಿ ಪ್ರವೇಶ ಪರೀಕ್ಷೆ ನಡೆಸಿ ಶೇ 95ರಷ್ಟು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ್ದು, ಮಾರ್ಗದರ್ಶಕರ ನೇಮಕದಲ್ಲೂ ನಿಯಮ ಪಾಲಿಸಿಲ್ಲ. ಅನರ್ಹ ಕಾಲೇಜುಗಳಿಗೆ ಸಂಶೋಧನಾ ಕೇಂದ್ರವನ್ನು ನೀಡಲಾಗಿದೆ’ ಎಂದು ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-40-1720833299

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.