ಮಂಡ್ಯ: ‘1960ರಲ್ಲಿ ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿ ಎಂ.ಎಸ್. ಸ್ವಾಮಿನಾಥನ್ ಅವರು ಭಾರತದಲ್ಲಿ 'ಹಸಿರು ಕ್ರಾಂತಿಯ ಪಿತಾಮಹ' ಎಂದೆನಿಸಿದ್ದಾರೆ. ಅದೇ ಕಾಲಘಟ್ಟದಲ್ಲಿ ಹೆಚ್ಚು ಇಳುವರಿ ನೀಡುವ ರಾಗಿ ತಳಿಗಳನ್ನು ಅನ್ವೇಷಿಸಿದ ಸಿ.ಎಚ್. ಲಕ್ಷ್ಮಣಯ್ಯ ಅವರು ‘ರಾಗಿ ಬ್ರಹ್ಮ’ ಖ್ಯಾತಿಗೆ ಪಾತ್ರರಾದರು’ ಎಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ.ನಾರಾಯಣಸ್ವಾಮಿ ಹೇಳಿದರು.

ವಿ.ಸಿ.ಫಾರಂನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ಮತ್ತು ಕೃಷಿ ವಿವಿ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ 29 ಮತ್ತು 30ನೇ ವರ್ಷದ ಸ್ಮಾರಕ ಉಪನ್ಯಾಸ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿ.ಸಿ.ಫಾರಂನಲ್ಲಿ 1931ರಲ್ಲಿ ಕಬ್ಬು ಸಂಶೋಧನಾ ಕೇಂದ್ರ ಆರಂಭಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ದೇಶಿ ಕೃಷಿಗೆ ಅಪೂರ್ವ ಕಾಣಿಕೆ ನೀಡಿದ ಲೆಸ್ಲಿ ಚಾರ್ಲ್ಸ್ ಕೋಲ್ಮನ್ ಮತ್ತು ರಾಗಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ರಾಗಿ ಲಕ್ಷ್ಮಣಯ್ಯ ಅವರ ಸಾಧನೆಗಳನ್ನು ನಾವೆಲ್ಲರೂ ಇಂದು ಸ್ಮರಿಸಬೇಕಿದೆ ಎಂದರು.

ರಾಗಿ ಲಕ್ಷ್ಮಣಯ್ಯ ಅವರು 1964ರಲ್ಲಿ ಆಫ್ರಿಕಾದಿಂದ ತರಿಸಿದ ತಳಿಯನ್ನು ಇಲ್ಲಿಯ ಸ್ಥಳೀಯ ತಳಿಯೊಂದಿಗೆ ಸೇರಿಸಿ ಉತ್ಪತ್ತಿ ಮಾಡಿದ ‘ಇಂಡಾಫ್’ ತಳಿಗಳಿಂದ ರಾಗಿ ಉತ್ಪತ್ತಿ ಹೆಚ್ಚಾಯಿತು. ರಾಗಿ ಬೇಸಾಯದಲ್ಲಿ ಹೊಸ ಪ್ರಯೋಗಗಳನ್ನು ಕೈಗೊಂಡರು. ರಾಗಿ ತೆನೆ ತಲೆ ಎತ್ತಿದ್ದೆ ತಡ ಬಡ ರೈತರ ಬದುಕು ಹಸನಾಯಿತು. ಬಡವರ ಧಾನ್ಯಕ್ಕೆ ಘನತೆಯನ್ನು ತಂದುಕೊಟ್ಟರು ಎಂದು ಅವರ ಸಾಧನೆಗಳ ಚಿತ್ರಣವನ್ನು ಕಟ್ಟಿಕೊಟ್ಟರು.

ಮಾರುಕಟ್ಟೆ ಆಧಾರಿತ ಸಸ್ಯ ಸಂವರ್ಧನೆ:

ಸಸ್ಯ ತಳಿ ವಿಜ್ಞಾನಿ ಶರಣ ಬಸವೇಶ್ವರ ಅಂಗಡಿ ಅವರು ‘ಬೆಳೆ ಸುಧಾರಣೆ ಮತ್ತು ರೈತ ಸಮೃದ್ಧಿ’ ವಿಷಯ ಕುರಿತು ಉಪನ್ಯಾಸ ನೀಡಿ, ಬೆಳೆ ಸುಧಾರಣೆ ವಿಕಾಸ ಆರಂಭವಾಗಿದ್ದು ರೈತರಿಂದ. ಉತ್ತಮ ಬಿತ್ತನೆ ಬೀಜ ಸಂಗ್ರಹಿಸಿ, ಬೆಳೆಯುವ ಪದ್ಧತಿ ರೂಢಿಸಿಕೊಂಡರು. ಸಸ್ಯಗಳ ಅನುವಂಶಿಕ ಸುಧಾರಣೆ ಮೊದಲು ಕಲೆಯಾಗಿತ್ತು, ನಂತರ ವಿಜ್ಞಾನವಾಯಿತು. ಈಗ ವ್ಯವಹಾರವಾಗಿದೆ. ಮಾರುಕಟ್ಟೆ ಆಧಾರಿತ ಸಸ್ಯ ಸಂವರ್ಧನೆ ಈಗ ಪ್ರಚಲಿತದಲ್ಲಿದೆ ಎಂದು ತಿಳಿಸಿದರು.

ರಾಗಿ ಲಕ್ಷ್ಮಣಯ್ಯ ಅವರ ಪುತ್ರ, ನಿವೃತ್ತ ಸಹ ಪ್ರಾಧ್ಯಾಪಕ ಎಚ್.ಎಲ್. ವಸಂತಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ‘1949ರಿಂದ 1984ರವರೆಗೆ ವಿ.ಸಿ.ಫಾರಂ ಅನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ರಾಗಿ ಲಕ್ಷ್ಮಣಯ್ಯ ಅವರು ‘ಬೆಳೆಗಳ ವಸ್ತುಸಂಗ್ರಹಾಲಯ’ ಸ್ಥಾಪಿಸುವ ಕನಸು ಕಂಡಿದ್ದರು. ‘ನನ್ನ ಹೆಣ ಹೂಳುವಾಗ ಒಂದು ಹಿಡಿ ರಾಗಿಯನ್ನು ಹಾಕಿ’ ಎಂದು ನಮ್ಮ ತಂದೆ ಆಸೆ ಪಟ್ಟಿದ್ದರು. ಅವರ ಕೊನೆಯ ಆಸೆಯನ್ನು ನೆರವೇರಿಸಿದೆವು’ ಎಂದು ತಂದೆಯ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದರು.

ಲೆಸ್ಲಿ ಚಾರ್ಲ್ಸ್ ಕೋಲ್ಮನ್ ಕುರಿತು ಪ್ರೊ.ಎಂ. ನಾರಾಯಣಸ್ವಾಮಿ ಅವರು ಬರೆದ ‘ಕೋಲ್ಮಿಂಚು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿಯ ಅಧ್ಯಕ್ಷ ಕೆ.ಬೋರಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಸ್ಮಾರಕ ಸಮಿತಿಯ ಸದಸ್ಯರು, ರೈತ ಮುಖಂಡರು ಮತ್ತು ವಿ.ಸಿ. ಫಾರಂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರೈತ ಪ್ರಶಸ್ತಿ ಪ್ರದಾನ

ರೈತ ಪ್ರಶಸ್ತಿಯನ್ನು ಕೆ.ಆರ್.ಪೇಟೆ ತಾಲ್ಲೂಕಿನ ಯರಗನಹಳ್ಳಿಯ ಚಲುವಯ್ಯ, ದೊಡ್ಡಸೋಮನಹಳ್ಳಿಯ ತನುಜಾ, ಕಾರಸವಾಡಿ ಗ್ರಾಮದ ಎಂ.ಪುಟ್ಟಮಲ್ಲೇಗೌಡ, ಕೋಮನಹಳ್ಳಿಯ ಕೆ.ಎ. ಮಂಜೇಗೌಡ ಅವರಿಗೆ ಪ್ರದಾನ ಮಾಡಲಾಯಿತು.

ರೈತ ಹಾಲು ಪ್ರಶಸ್ತಿಯನ್ನು ಸಬ್ಬನಹಳ್ಳಿಯ ಸಂತೋಷ್ ಕುಮಾರ್ ಆರ್. ಅವರಿಗೆ ಹಾಗೂ ಕೆ.ಕೆ. ಅವಧಾನಿ ವಿದ್ಯಾರ್ಥಿ ಪ್ರಶಸ್ತಿಯನ್ನು ವಿ.ಸಿ.ಫಾರಂ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಟಿ.ಎಂ. ಅಪರ್ಣಾ ಮತ್ತು ಆರ್. ಸ್ಫೂರ್ತಿ ಅವರಿಗೆ ನೀಡಿ, ಅಭಿನಂದಿಸಲಾಯಿತು.

ಮಂಡ್ಯ ಕೃಷಿ ವಿವಿ ಮೇಲೆ ಸರ್ಕಾರಕ್ಕೆ ಅಪಾರ ನಿರೀಕ್ಷೆಯಿದೆ. ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಮತ್ತು ರಾಗಿ ಲಕ್ಷ್ಮಣಯ್ಯ ಹಾಕಿಕೊಟ್ಟ ಹಾದಿಯಲ್ಲಿ ನಡೆಯಲು ಬದ್ಧ
ಕೆ.ಸಿ.ನಾರಾಯಣಸ್ವಾಮಿ, ಕುಲಪತಿ, ಮಂಡ್ಯ ಕೃಷಿ ವಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.