ಮಂಡ್ಯ: ‘ವಿಶ್ವಕರ್ಮ ಸಮುದಾಯಕ್ಕೆ ನ್ಯಾಯಬದ್ಧ ರಾಜಕೀಯ ಸ್ಥಾನಮಾನ ಹಾಗೂ ಸಾಮಾಜಿಕ ನ್ಯಾಯ ಇನ್ನೂ ಸಿಕ್ಕಿಲ್ಲ’ ಎಂದು ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ವಿಷಾದಿಸಿದರು.

ನಗರದ ಗಾಂಧಿ ಭವನದಲ್ಲಿ ಭುವನ ವಿಶ್ವಕರ್ಮ ಸಮಾಜದ ವತಿಯಿಂದ ಈಚೆಗೆ ನಡೆದ ಭುವನ ವಿಶ್ವಕರ್ಮ ಸಮಾಜ ಜಿಲ್ಲಾ ಘಟಕದ ಕಚೇರಿ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿನ ವಿಶ್ವಕರ್ಮರು ತಮ್ಮ ಕಸುಬುಗಳಲ್ಲಿ ತಂತ್ರಜ್ಞಾನ ಬಳಸಿ ಉದ್ಯಮಗಳನ್ನಾಗಿ ಪರಿವರ್ತಿಸಿ ಆರ್ಥಿಕ ಪ್ರಗತಿ ಸಾಧಿಸುವ ಕಡೆ ಗಮನ ಹರಿಸಬೇಕು. ನೀವು ಇನ್ನೂ ಎಚ್ಚರಿಕೆ ವಹಿಸಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ’ ಎಂದು ಸಲಹೆ ನೀಡಿದರು.

‘ಜನಗಣತಿಯನ್ನು ಕೇಂದ್ರ ಸರ್ಕಾರವು ನಡೆಸುತ್ತಿದ್ದು, ನಿಮ್ಮ ಮೊಬೈಲ್ನಲ್ಲಿಯೇ ಕೇಳಿರುವ ಮಾಹಿತಿಯನ್ನು ಅಪ್ಲೋಡ್ ಮಾಡಿ, ನಮ್ಮ ಧರ್ಮ, ಜಾತಿ ಮತ್ತು ಉಪ ಕಸುಬನ್ನು ನಮೂದು ಮಾಡಿ, ಜೊತೆಗೆ ವಿಶ್ವಕರ್ಮ ಜಾತಿಯನ್ನೇ ನಮೂದು ಮಾಡಬೇಕು’ ಎಂದರು.

‘ಶೈಕ್ಷಣಿಕ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮೊದಲು ಸ್ವಾವಲಂಬಿಗಳಾಗಬೇಕು. ಯಾವುದೇ ಸರ್ಕಾರದ ಹೊಸ ಯೋಜನೆಗಳನ್ನು ಬಳಸಿಕೊಳ್ಳುವ ಕಡೆ ಗಮನ ಹರಿಸಬೇಕು. ಯಾಂತ್ರಿಕ ಯುಗದಲ್ಲಿ ನಮ್ಮ ಕುಲಕಸುಬನ್ನು ಪರಿವರ್ತನೆ ಮಾಡಿಕೊಳ್ಳುವ ಅವಶ್ಯ ಇದೆ. ಏಕೆಂದರೆ ಈಗಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ನಮ್ಮ ಕಸುಬು ಪರಿವರ್ತನೆ ಮಾಡಿಕೊಳ್ಳಿ’ ಎಂದು ತಿಳಿಸಿದರು.

ಭುವನ ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಬಸವರಾಜು ಮಾತನಾಡಿ, ‘ನಮ್ಮ ಸಮುದಾಯವು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಇದು ರಾಜಕೀಯ ಶಕ್ತಿಯಾಗಿ ಬೆಳೆಯಲು ಸಹಕಾರ ನೀಡುತ್ತದೆ. ಜೊತೆಗೆ ಸಮಾಜದ ಪ್ರಜ್ಞೆ ಬಗ್ಗೆ ಗಮನ ಹರಿಸಬೇಕು. ಒಟ್ಟಿನಲ್ಲಿ ವಿಶ್ವಕರ್ಮ ಸಮುದಾಯಕ್ಕೆ ನಿಮ್ಮ ಸಹಕಾರ ಹಾಗೂ ಯೋಜನೆಗಳಿರಲಿ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಗೌರವಾಧ್ಯಕ್ಷ ಬೇವಿನಹಳ್ಳಿ ಬಿ.ವಿ. ಸೋಮು, ಉಪಾಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಕಟ್ಟೆ ಕೃಷ್ಣಸ್ವಾಮಿ, ಖಜಾಂಚಿ ಸಂತೆಕಸಲಗೆರೆ ಶ್ರೀನಿವಾಸ್, ಮುಖಂಡರಾದ ಅರಕೇಶ್ವರ, ಗೋವಿಂದರಾಜು, ಈರಣ್ಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-40-31753976

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.