ಪಾಂಡವಪುರ: ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಇರುವ ನೀರಿನ ಅಗತ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ₹1.30ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಈಗಾಗಲೇ ನಡೆದ ಐಸಿಸಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಕೆಆರ್ಎಸ್ ಹಾಗೂ ಹೇಮಾವತಿ ಅಣೆಕಟ್ಟೆಯಲ್ಲಿರುವ ನೀರಿನ ಮಾಹಿತಿ ಪಡೆಯಲಾಗಿದೆ. ಸದ್ಯದಲ್ಲಿಯೇ ಮಳೆಯಾಗುವ ಮುನ್ಸೂಚನೆ ಇದೆ. ಮಳೆಯಾದರೆ, ತಮಿಳುನಾಡಿನ ನೀರಿನ ಸಮಸ್ಯೆ ಸೇರಿದಂತೆ ಯಾವ ಸಮಸ್ಯೆಯೂ ಉದ್ಬವಿಸುವುದಿಲ್ಲ. ಇಲ್ಲವಾದರೆ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು’ ಎಂದರು.

ಮೇಲುಕೋಟೆ ವಿಧಾನ ಕ್ಷೇತ್ರದಲ್ಲಿ ಕೆಲವೆಡೆ ಮಾತ್ರ ನೀರಿನ ಸಮಸ್ಯೆ ಇದ್ದು, ಈ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ಕೆಟ್ಟಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಬೋರ್ವೆಲ್ಗಳನ್ನು ಕೊರೆಸಿ ಕ್ರಮವಹಿಸಲಾಗುವುದು’ ಎಂದರು.

ಅನುದಾನ ಬಳಕೆ: ಮೇಲುಕೋಟೆ ವೈರಮುಡಿ ಉತ್ಸವದ ಹೆಚ್ಚುವರಿ ಅನುದಾನ ಹಾಗೂ ಪ್ರವಾಹ ಪೀಡಿತ ಹೆಚ್ಚುವರಿ ಅನುದಾನಗಳನ್ನು ಬಳಸಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಕೋಡಹಳ್ಳಿ ಹೊಸೂರು ಗ್ರಾಮದಲ್ಲಿ ₹25 ಲಕ್ಚ, ಇಂಗಲಗುಪ್ಪೆ ಛತ್ರ ಗ್ರಾಮದಲ್ಲಿ ₹25 ಲಕ್ಷ, ಸಂಗಾಪುರ ಗ್ರಾಮದಲ್ಲಿ ₹40ಲಕ್ಷ, ನರಹಳ್ಳಿ ಗ್ರಾಮದಲ್ಲಿ ₹20ಲಕ್ಷ ಹಾಗೂ ಮೇನಾಗರ ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಸಲ್ಲಿಸಿದರು. ಕೆ.ಹೊಸೂರು ಗ್ರಾಮದ ಮುಖಂಡರಾದ ಮಂಜು, ಸ್ವಾಮಿಗೌಡ, ಮಧು, ಚಲುವೇಗೌಡ, ಪಾಪಣ್ಣ, ನಾಗಣ್ಣ, ಲೋಕೇಶ್, ಶಂಕರನಾರಾಯಣ, ಸಂಗಾಪುರ ಗ್ರಾಮದ ಜಗದೀಶ್, ಪ್ರಕಾಶ್, ಸಣ್ಣೇಗೌಡ, ರಮೇಶ್, ವಿಶ್ವ, ಶಂಕರ್, ನರಹಳ್ಳಿ ಗ್ರಾಮದ ಬೋರೇಗೌಡ, ಶಿವಣ್ಣ, ನಂದೀಶ್, ಸ್ವಾಮಿಗೌಡ, ಜಯರಾಮ್, ಕುಮಾರ್, ಮರೀಗೌಡ, ಮೇನಾಗರ ಗ್ರಾಮದ ಕುಮಾರ್, ಜವರೇಗೌಡ, ಚಲುವರಾಜು ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.