ನಾಗಮಂಗಲ: ‘ಜಿಲ್ಲೆಯ ಇಬ್ಬರು ಪ್ರತಿಭಾವಂತ ಯುವಕರು ಯುಪಿಎಸ್ಸಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಮೂಲಕ ಪೋಷಕರು ಮತ್ತು ಜಿಲ್ಲೆಗೆ ಕೀರ್ತಿ ತಂದಿರುವುದು ಶ್ಲಾಘನೀಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸಂತಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಕರಡಹಳ್ಳಿಯ ರೈತ ರಾಮಚಂದ್ರ ಮತ್ತು ಮಂಗಳಮ್ಮ ದಂಪತಿಯ ಪುತ್ರ ಆರ್.ಧನಂಜಯ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 554ನೇ ರ್ಯಾಂಕ್ ಪಡೆದಿರುವ ಹಿನ್ನೆಲೆಯಲ್ಲಿ ಭಾನುವಾರ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿ ಅವರು ಮಾತನಾಡಿದರು.

‘ಈ ಹಿಂದೆ ತಾಲ್ಲೂಕಿನ ಹೆರಗನಹಳ್ಳಿ ಗ್ರಾಮದ ಎಚ್.ಎಲ್. ನಾಗೇಗೌಡ ಐಎಎಸ್ ಅಧಿಕಾರಿಯಾಗಿದ್ದರು. ನಂತರ ಎ.ನಾಗತಿಹಳ್ಳಿ ಗ್ರಾಮದ ನಿವೃತ್ತ ಡಿಡಿಪಿಐ ಗಂಗಾಧರಗೌಡರ ಪುತ್ರ ಎನ್.ಜಿ. ರವಿಕುಮಾರ್, ಪಿಟ್ಟೆಕೊಪ್ಪಲು ಗ್ರಾಮದ ವಿಶೇಷ ಚೇತನ ಗಿರೀಶ್, ಕರಡಹಳ್ಳಿ ಗ್ರಾಮದ ಕೆ.ಎಸ್. ಚಂದನ್ಕುಮಾರ್ ಸೇರಿದಂತೆ ಹಲವರು ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್.ಧನಂಜಯ ಮತ್ತು ಕೆ.ಆರ್.ಪೇಟೆ ತಾಲೂಕಿನ ಎ.ಎಸ್.ಮುತ್ತೇಶ್ಗೌಡ 622ನೇ ರ್ಯಾಂಕ್ ಪಡೆದು ಅರ್ಹತೆ ಹೊಂದಿದ್ದಾರೆ’ ಎಂದು ಹೇಳಿದರು.

‘ರೈತ ರಾಮಚಂದ್ರ ಮತ್ತು ಮಂಗಳಮ್ಮ ಅನಕ್ಷರಸ್ಥರಾಗಿದ್ದರೂ ಕೂಡ ತಮ್ಮ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆಯಾಗಬಾರದೆಂದು ಉತ್ತಮ ಸಂಸ್ಕಾರದೊಂದಿಗೆ ಎಲ್ಲವನ್ನೂ ತ್ಯಾಗ ಮಾಡಿದ್ದಕ್ಕೆ ಪ್ರತಿಫಲವೆಂಬಂತೆ ಆರ್.ಧನಂಜಯ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ದೇಶ ಸೇವೆ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಮತ್ತೊಬ್ಬ ಪುತ್ರನೂ ಅಣ್ಣನ ಹಾದಿಯಲ್ಲೇ ಸಾಧನೆ ಮಾಡುವ ಪ್ರಯತ್ನದಲ್ಲಿರುವುದು ಇಂದಿನ ಯುವ ಪೀಳಿಗೆಗೆ ಮಾದರಿ’ ಎಂದು ಮೆಚ್ಚುಗೆ ನುಡಿಗಳಾಡಿದರು.

‘ಯುಪಿಎಸ್ಸಿ ಪರೀಕ್ಷೆಯಲ್ಲಿ 622ನೇ ರ್ಯಾಂಕ್ ಪಡೆದು ತೇರ್ಗಡೆ ಹೊಂದಿರುವ ಕೆ.ಆರ್.ಪೇಟೆ ತಾಲ್ಲೂಕಿನ ಎ.ಎಸ್.ಮುತ್ತೇಶ್ಗೌಡ ಅವರ ನಿವಾಸಕ್ಕೆ ಮಾ.14ರಂದು ಭೇಟಿ ನೀಡಿ ಅಭಿನಂದಿಸಲಾಗುವುದು’ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನಾಗೇಶ್, ಪೋಷಕರಾದ ಮಂಗಳಮ್ಮ ಮತ್ತು ರಾಮಚಂದ್ರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿಂಗಾರಿಗೌಡ, ಮನ್ಮುಲ್ ಮಾಜಿ ನಿರ್ದೇಶಕ ತಟ್ಟಹಳ್ಳಿ ನರಸಿಂಹಮೂರ್ತಿ, ಗ್ರಾಮದ ಮುಖಂಡರಾದ ಕೆ.ಆರ್.ದಯಾನಂದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.