ಶ್ರೀರಂಗಪಟ್ಟಣ: ತಾಲ್ಲೂಕಿನ ಮರಳಾಗಾಲದಲ್ಲಿ, ಮಳೆಗಾಗಿ ಪ್ರಾರ್ಥಿಸಿ ಬುಧವಾರ ಮಳೆರಾಯನ ಹಬ್ಬವನ್ನು ಆಚರಿಸಲಾಯಿತು.

ಗ್ರಾಮದ ಮಾರಿಗುಡಿ ಬಳಿ ಜೋಡಿ ಕಪ್ಪೆಗಳಿಗೆಮದುವೆ ಮಾಡಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಪ್ಪೆಗಳ ಜತೆಗೆ ಮಣ್ಣಿನಿಂದ ಮಾಡಿದ ಮಳೆ ದೇವತೆಗಳ ಮೆರವಣಿಗೆಯೂ ನಡೆಯಿತು.

ಮದನ್ ಎಂಬವರು ಜೋಡಿ ಕಪ್ಪೆಗಳನ್ನು ಹಾಗೂ ಶಿವಲಿಂಗು ಅವರು ಮಳೆ ದೇವತೆಯ ಮೂರ್ತಿಗಳನ್ನು ಹೊತ್ತು ಹೆಜ್ಜೆ ಹಾಕಿದರು. ಪ್ರತಿ ಮನೆಗಳ ಮುಂದೆ ಜೋಡಿ ಕಪ್ಪೆಗಳು ಮತ್ತು ಮಳೆ ದೇವತೆಯ ಮೂರ್ತಿಗೆ ಬಿಂದಿಗೆಗಳಲ್ಲಿ ನೀರು ಸುರಿಯಲಾಯಿತು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾಂತರಾಜು, ಯೋಗೇಶ್, ಮಂಜು ನಾಥ್, ರಮೇಶ್, ರಾಮಚಂದ್ರು, ಭಾರ್ಗವ, ವಿಜಯಕುಮಾರ್, ಲೋಕೇಶ್, ರವಿ, ಪಾಂಡು, ಬಾಲರಾಜು ಇತರರು ‘ಉಯ್ಯೋ ಉಯ್ಯೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ...’ ಎಂದು ಕೂಗುತ್ತಾ ಸಾಗಿದರು.

ಸುಮಾರು ಮೂರು ತಾಸು ನಡೆದ ಮೆರವಣಿಗೆ ಆಂಜನೇಯಸ್ವಾಮಿ ದೇವಾಲಯದ ಬಳಿ ಸಮಾಪ್ತಿಯಾಯಿತು. ದೇವಾಲಯದ ಆವರಣದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-40-1738633457

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.