ಮೇಲುಕೋಟೆ (ಮಂಡ್ಯ ಜಿಲ್ಲೆ): ಇಲ್ಲಿನ ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ಚೆಲುವನಾರಾಯಣ ಸ್ವಾಮಿ ಹಾಗೂ ಕಲ್ಯಾಣಿ ನಾಯಕಿ ಅಮ್ಮನವರ ಕಲ್ಯಾಣೋತ್ಸವ ಪಂಚ ಕಲ್ಯಾಣಿಯ ಧಾರಾ ಮಂಟಪದಲ್ಲಿ ಮಂಗಳವಾರ ರಾತ್ರಿ ವೈಭವದಿಂದ ನೆರವೇರಿತು.

ಮಂಟಪವನ್ನು ವಿವಿಧ ಬಗೆಯ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಧಾರ್ಮಿಕ ಸಮನ್ಮಾಲೆ, ಲಾಜಹೋಮದ ಉತ್ಸವದ ಬಳಿಕ ಮಾಂಗಲ್ಯ ಧಾರಣೆ ಜರುಗಿತು. ಕಲ್ಯಾಣೋತ್ಸವದ ವೈಭೋಗವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿತ್ತು.

ವಿಶೇಷ ಪುಷ್ಪಗಳಿಂದ ಅಲಂಕೃತಗೊಂಡ ಚೆಲುವನಾರಾಯಣ ಸ್ವಾಮಿ ಹಾಗೂ ದೇವಿಯ ಉತ್ಸವ ಗೋಷ್ಠಿಯು ದೇವಾಲಯದಿಂದ ಸಪ್ತ ನಾದಸ್ವರದೊಂದಿಗೆ ತೆರಳಿ ರಾಜಬೀದಿಯ ಮೂಲಕ ಪಂಚಕಲ್ಯಾಣಿಯನ್ನು ತಲುಪಿತು. ಕಲ್ಯಾಣೋತ್ಸವ ಬಳಿಕ ರಾತ್ರಿ 9ರ ಉತ್ಸವ ಮರಳಿ ದೇವಾಲಯ ತಲುಪಿತು.

ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಕನ್ನಗೊನಹಳ್ಳಿ ಪರಮೇಶ್ ಗೌಡ, ವೆಂಕಟರಾಮೇಗೌಡ, ಪುಟ್ಟಸ್ವಾಮಿ ಕೆ, ರಾಜು, ವೆಂಕಟೇಶ್, ಪ್ರೀತಿ ಮಹದೇವ್, ಸತೀಶ್, ಶೋಭಾ, ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಪಾಲ್ಗೊಂಡಿದರು.

ಕಲಾತಂಡಗಳ ಮೆರುಗು:

‘ಏ.1ರಂದು ನಡೆಯುವ ಚೆಲುವನಾರಾಯಣ ಸ್ವಾಮಿಯ ತೆಪ್ಪೋತ್ಸವದಂದು ಕಲ್ಯಾಣಿಯ ಮೂರು ದಿಕ್ಕಿನಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಿಸಿ ಕೇರಳದ ಚಂಡೆಮೇಳ, ಪಂಚನಾದಸ್ವರ, ಭುವನೇಶ್ವರಿ ಮಂಟಪದಲ್ಲಿ ಭರತನಾಟ್ಯ ಆಯೋಜನೆ ಮಾಡಲಾಗುವುದು’ ಎಂದು ಕನಗೋನಹಳ್ಳಿ ಪರಮೇಶಗೌಡ ಹೇಳಿದರು.

ಬ್ರಹ್ಮೋತ್ಸವದಲ್ಲಿ ಇಂದು:

ಜಾತ್ರಾ ಮಹೋತ್ಸವ ಅಂಗವಾಗಿ ಧ್ವಜಾರೋಹಣ ಬೆಳಗ್ಗೆ 9 ಗಂಟೆಗೆ ನೆರವೇರಲಿದೆ. ನಿತ್ಯ ಭೇರಿತಾಡನ, ಹಂಸವಾಹನ, ಯಾಗಶಾಲಾ ಪ್ರವೇಶ ಪೂಜಾ ಕೈಂಕರ್ಯಗಳು ನಡೆಯಲಿದೆ. 26ರಂದು ರಾಮಾನುಜಾಚಾರ್ಯರಿಗೆ ಅಭಿಷೇಕ, ಶೇಷವಾಹನೋತ್ಸವ ನೆರವೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.