ಮೇಲುಕೋಟೆ: ಇಲ್ಲಿನ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಕೋಡೈತಿರುನಾಳ್ ಉತ್ಸವದ ವೈಭವ ಮನೆಮಾಡಿದ್ದು, ಪ್ರತಿ ರಾತ್ರಿ ಅಲಂಕಾರಪ್ರಿಯ ಮಹಾವಿಷ್ಣು ಚೆಲುವನಾರಾಯಣಸ್ವಾಮಿಗೆ ವಿಶೇಷ ಅಲಂಕಾರದ ಪೂಜೆಗಳು ನಡೆದಿವೆ.

ವೈರಮುಡಿ ಬ್ರಹ್ಮೋತ್ಸವ ಮುಗಿಯುತ್ತಿದ್ದಂತೆ ಆರಂಭವಾಗುವ ಕೋಡೈ ತಿರುನಾಳ್ ಮಹೋತ್ಸವ ಹದಿನೈದು ದಿನ ನಡೆಯುತ್ತದೆ. ಪ್ರತಿ ರಾತ್ರಿ ದೇವಾಲಯದ ಒಳಭಾಗದ ಪ್ರಾಕಾರದಲ್ಲಿ ನಡೆಯುತ್ತಿದೆ.

ಅಮ್ಮನವರ ಸನ್ನಿಧಿಯ ಬಳಿ ಮಂತ್ರಪಾರಾಯಣ, ರಾಮಾಯಣ, ವಿಶೇಷ ಪಾರಂಪರಿಕ ಸಂಸ್ಕೃತ ಕವನಗಳ ಬಹುಪರಾಕು ನಡೆಯುತ್ತದೆ. ಸಣ್ಣ ಹಿಮ್ಮೇಳದ ಸುತ್ತಿನಲ್ಲಿ ಚೆಲುವನಾರಾಯಣಸ್ವಾಮಿಯನ್ನು ಆರಾಧಿಸಲಾಗುತ್ತದೆ. ಪ್ರತಿದಿನವೂ ದಾನಿ ಭಕ್ತರು ಸೇವೆಯ ಹೊಣೆ ಹೊರುತ್ತಾರೆ. ಕೊಸಂಬರಿ, ಪಾನಕ, ಪ್ರಸಾದ ನೀಡಲಾಗುತ್ತಿದೆ.

17ರಂದು ವೈಮಾಳಿಗೆ ಕೋಡೈತಿರುನಾಳ್ ವೈಭವ:

17ರ ಅಮಾವಾಸ್ಯೆಯಂದು ಕೊಡೈತಿರುನಾಳ್ ನಡೆಯಲಿದ್ದು, ಚಿನ್ನದ ಆದಿಶೇಷನೊಂದಿಗೆ ಕಾಲು ಚಾಚಿಕೊಂಡು ಕುಳಿತ ಶೈಲಿಯಲ್ಲಿ ಅಲಂಕೃತಗೊಳ್ಳುವ ಚೆಲುವನಾರಾಯಣ ಮೂರ್ತಿ ವಿಶೇಷ ಗಮನ ಸೆಳೆಯುತ್ತದೆ.

ಇಡೀ ಉತ್ಸವ ಮಹಡಿಯ ಮೇಲೆ ನಡೆದು, ಕೊನೆಯಲ್ಲಿ ಉತ್ಸವ ಸರ್ಪನಡಿಗೆಯಲ್ಲೇ ಸಾಗುವುದು ವಿಶೇಷ. ದೇವಾಲಯದ ಮಹಡಿ ಪ್ರವೇಶಿಸಲು ಮತ್ತು ಚೆಲ್ವತಿರುನಾರಾಯಣಸ್ವಾಮಿಯ ವಿಮಾನಗೋಪುರ , ಗಂಡಭೇರುಂಡ ಸ್ವರೂಪಿ ರಾಜಗೋಪುರ ಪ್ರದಕ್ಷಿಣೆ ಮಾಡಲು ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಅವಕಾಶವಿರುತ್ತದೆ.

ರಾತ್ರಿ ದೇವಾಲಯವು ಎರಡು ಸಾಂಪ್ರದಾಯಿಕ ವಿಶೇಷಗಳಿಗೆ ಸಾಕ್ಷಿಯಾಗಲಿದ್ದು, ರಾಮಾನುಜಾಚಾರ್ಯರಿಗೆ ನಡೆಯುತ್ತಿರುವ 1009ನೇ ತಿರುನಕ್ಷತ್ರ ಮಹೋತ್ಸವದ 5ನೇ ದಿನದ ನಿಮಿತ್ತ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವವೂ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-40-512532452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.