ಮೇಲುಕೋಟೆ: ಕೆಲವೆಡೆ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವ ಹೊತ್ತಿನಲ್ಲೂ ಮೇಲುಕೋಟೆಯ ಧಾರ್ಮಿಕ ತಾಣದಲ್ಲಿ ಸೌಹಾರ್ದದ ಸಂಕೇತವಾದ ಚೆಲುವನಾರಾಯಣಸ್ವಾಮಿಯ ಮಹಾರಥೋತ್ಸವ ಇಂದಿಗೂ ‘ಹರಿಜನೋತ್ಸವ’ ಎಂದೇ ಪ್ರಖ್ಯಾತಿ ಪಡೆದಿರುವುದು ಇಲ್ಲಿಯ ವಿಶೇಷ.

ಈ ಬಾರಿ ಮಾರ್ಚ್ 31ರಂದು ‘ದಕ್ಷಿಣ ಬದರಿಕಾಶ್ರಮ’ ಎಂದೇ ಖ್ಯಾತಿ ಪಡೆದ ಮೇಲುಕೋಟೆಯಲ್ಲಿ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೆದಿವೆ.

ಇಲ್ಲಿಯ ಚೆಲುವನಾರಾಯಣಸ್ವಾಮಿಗೂ ದಲಿತರಿಗೂ ಅವಿನಾಭಾವ ಸಂಬಂಧವಿದೆ. ಒಕ್ಕಲಿನವರೂ ಇದ್ದಾರೆ, ಈ ಸ್ವಾಮಿಯೇ ಅವರ ‘ಮನೆ ದೇವರು’ ಕೂಡ ಆಗಿದ್ದಾರೆ. ವೈಷ್ಣವ ಪಂಥದ ಪ್ರಮುಖ ಕೇಂದ್ರಕ್ಕೂ ದಲಿತ ಕೇರಿಗೂ ಭಕ್ತಿಯ ಬಂಧ, ಸೌಹಾರ್ದ ಸಂಬಂಧ ಬೆಸೆದುಕೊಂಡಿದೆ.

‘ದಲಿತರ ದೇಗುಲ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೊಡೆದು ಹಾಕುವ ಸಲುವಾಗಿ ವೈಷ್ಣವ ಸಂತ ರಾಮಾನುಜಾಚಾರ್ಯರು ದಿಟ್ಟ ನಿರ್ಧಾರ ಕೈಗೊಂಡರು. ಒಂದು ಸಾವಿರ ವರ್ಷಗಳ ಹಿಂದೆಯೇ ಚೆಲುವನಾರಾಯಣ ಸ್ವಾಮಿಗೆ ನಡೆಯುವ ವೈರಮುಡಿ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ, ತೆಪ್ಪೋತ್ಸವ, ತೀರ್ಥೋತ್ಸವದಲ್ಲಿ ವಿಶೇಷವಾಗಿ ಸ್ವಾಮಿಯನ್ನು ದಲಿತರು ಪೂಜಿಸುವ ಆಚರಣೆಯನ್ನು ಚಾಲ್ತಿಗೆ ತಂದರು’ ಎಂದು ದೇವಾಲಯದ ಸ್ಥಾನೀಕ ಕರಗಂ ರಾಮಪ್ರಿಯ ತಿಳಿಸಿದರು.

ಅಂದಿನಿಂದ ಇಂದಿನವರೆಗೂ ಮೇಲುಕೋಟೆ ದೇವಾಲಯದಲ್ಲಿ ಈ ಸಂಪ್ರದಾಯ ಜೀವಂತವಾಗಿದ್ದು ರಥೋತ್ಸವವನ್ನು ‘ಹರಿಜನೋತ್ಸವ’ ಎಂದೇ ಕರೆಯಲಾಗುತ್ತಿದೆ. ಈ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆಯಲಿದ್ದಾರೆ.

ಅಸಮಾನತೆ ತೋರುವ, ಮೂರ್ತಿ ಪೂಜೆ ವಿರೋಧಿಸುವವರ ನಡುವೆ ಸಾವಿರಾರು ದಲಿತ ಕುಟುಂಬಗಳು (ಹರಿ ಸೇವಕರು) ವೈರಮುಡಿ ಜಾತ್ರೆಯಲ್ಲಿ ಏಳೆಂಟು ದಿನ ಮೀಸಲು ಬುತ್ತಿಯೊಂದಿಗೆ ವಾಸ್ತವ್ಯ ಮಾಡಿ ಅವರಿಗಾಗಿಯೇ ನಡೆಯವ ಮೂರು ದಿನದ ಉತ್ಸವದಲ್ಲಿ ಪಾಲ್ಗೊಂಡು ದೇವರ ಸೇವೆ ಮಾಡುತ್ತಾರೆ.

‘ಇತರೆ ದೇವಾಲಯಗಳಲ್ಲಿ ವಿವಿಧ ಸಮುದಾಯಗಳಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಆದರೆ ದಲಿತರಿಗೆ ಉತ್ಸವ ನಡೆಸುವ ಅವಕಾಶ ವಿರಳ. ಮೇಲುಕೋಟೆ ದೇವಾಲಯದಲ್ಲಿ ಸಾವಿರಾರೂ ವರ್ಷಗಳಿಂದ ಆಚರಣೆ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದೇವಾಲಯವನ್ನು ಸೌಹಾರ್ದ ಬೆಸೆಯುವ ಸಂಕೇತವಾಗಿರುವುದು ವಿಶೇಷ’ ಎಂದು ಮೇಲುಕೋಟೆಯ ದೇವಾಲಯದ ಸ್ಥಾನೀಕ ಶ್ರೀನಿವಾಸನ್ ತಿಳಿಸಿದರು.

ವೈರಮುಡಿಯಂತಹ ಐತಿಹಾಸಿಕ ಉತ್ಸವದಲ್ಲಿ ಹರಿಜನರಿಗೆ ಅವಕಾಶ ಕಲ್ಪಿಸಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ ರಾಮಾನುಜಾಚಾರ್ಯರ ಸಿದ್ಧಾಂತ ಆದರ್ಶಯುತ ಮತ್ತು ಅನುಕರಣೀಯ
ಎಸ್.ಎನ್.ಟಿ ಸೋಮಶೇಖರ್,ಬಿಜೆಪಿ ಹೋಬಳಿ ಅಧ್ಯಕ್ಷ, ಮೇಲುಕೋಟೆ

ಹಿಂದೂ– ಮುಸ್ಲಿಂ ಭಾವೈಕ್ಯ ಸಂಕೇತ

ದೆಹಲಿ ಸುಲ್ತಾನನ ಮಗಳು ಬೀಬಿ ನಾಚಿಯಾರ್ (ವರನಂದಿ) ಚೆಲುವರಾಯಸ್ವಾಮಿಯನ್ನು ಆರಾಧಿಸುತ್ತಾ, ಬಿಟ್ಟಿರಲು ಒಪ್ಪದಿದ್ದಾಗ ಅವಳನ್ನು ಸ್ವಾಮಿಯ ಪಾದದಲ್ಲಿ ರಾಮಾನುಜಾಚಾರ್ಯರು ಐಕ್ಯಗೊಳಿಸಿದ್ದಾರೆ ಎಂಬ ಐತಿಹ್ಯವಿದೆ. ಅಂದಿನಿಂದ ಇಂದಿನವರೆಗೂ ಸ್ವಾಮಿಯ ಪಾದದಲ್ಲಿ ವರನಂದಿ ದೇವಿಯ ವಿಗ್ರಹವಿಟ್ಟು ನಿತ್ಯ ಪೂಜೆ ಮಾಡಲಾಗುತ್ತಿದೆ. ಆದ್ದರಿಂದಲೇ ಚೆಲುವನಾರಾಯಣ ಸ್ವಾಮಿ ದೇವಾಲಯ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ಮುಸ್ಲಿಂ ಕುಟುಂಬಗಳು ದೇವರಿಗೆ ಇಂದಿಗೂ ನಡೆದುಕೊಳ್ಳುತ್ತವೆ.

‘ಪಲ್ಲಕ್ಕಿ ಉತ್ಸವಕ್ಕೆ ಪಂಚನಾದ ಸ್ವರ’

ಮೈಸೂರಿನ ಅಶೋಕಪುರಂ ನಿವಾಸಿಗಳು ಇಂದಿಗೂ ವೈರಮುಡಿ ಜಾತ್ರೆಯಲ್ಲಿ ಪಾಲ್ಗೊಂಡು ಹೂವಿನ ಅಲಂಕಾರ, ದೇವರಿಗೆ ಅಭಿಷೇಕ ಸೇರಿದಂತೆ ವಿವಿಧ ಸೇವೆ ಸಲ್ಲಿಸುತ್ತಾರೆ. ರಥೋತ್ಸವ ರಾತ್ರಿ ಮೈಸೂರು ಮಲ್ಲಿಗೆ, ವೀಳ್ಯದೆಲೆ, ಹಣ್ಣು, ಹೂವು, ಕಾಯಿಗಳನ್ನು ತಂದು ಬಂಗಾರ ಪಲ್ಲಕ್ಕಿ ಉತ್ಸವದ ನೇತೃತ್ವ ವಹಿಸಿಕೊಳ್ಳುತ್ತಾರೆ. ತಮ್ಮದೇ ಪಂಚನಾದ ಸ್ವರದೊಂದಿಗೆ ಪಲ್ಲಕ್ಕಿ ಉತ್ಸವ ಹೊತ್ತು ರಾಜಬೀದಿಯಲ್ಲಿ ಮೆರವಣಿಗೆ ಮಾಡುತ್ತಾರೆ.

ದಾರಿ ಮಧ್ಯೆ ಪಟಾಕಿ ಸಿಡಿ ಸಂಭ್ರಮಿಸುತ್ತಾರೆ. ಇಂದಿಗೂ ಅವರ ‘ಆದಿ ಕರ್ನಾಟಕ ಛತ್ರ’ಕ್ಕೆ ಪ್ರತಿ ವರ್ಷ ಚೆಲುವರಾಯಸ್ವಾಮಿ ಉತ್ಸವ ತೆರಳಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.