ಮೇಲುಕೋಟೆ: ಭಗವದ್ ರಾಮಾನುಜಾಚಾರ್ಯರ 1009ನೇ ತಿರುನಕ್ಷತ್ರದ ಅಂಗವಾಗಿ ಮೇಲುಕೋಟೆಯ ರಾಜಬೀದಿಯಲ್ಲಿ ಯತಿರಾಜ ರಾಮಾನುಜ ಜಯಘೋಷದೊಂದಿಗೆ ಮಹಾ ರಥೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ರಾಜ್ಯದ ವಿವಿಧ ಜಿಲ್ಲೆ ಹಾಗೂ ಆಂಧ್ರಪ್ರದೇಶದ ನೂರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ‘ಯತಿರಾಜ... ರಾಮಾನುಜ’ ಜಯಘೋಷ ಮೊಳಗಿಸುತ್ತಾ ರಾಮಾನುಜರ ತೇರು ಎಳೆದು ಭಕ್ತಿ ಸಮರ್ಪಿಸಿದರು.

1009ನೇ ಜಯಂತ್ಯುತ್ಸವದ ಅಂಗವಾಗಿ ನಡೆಯುತ್ತಿರುವ 9ನೇ ದಿನದ ಧಾರ್ಮಿಕ ಕೈಂಕರ್ಯದಲ್ಲಿ ಆಚಾರ್ಯರ ಮಹಾರಥೋತ್ಸವ ಪ್ರಮುಖವಾದುದು. ರಾಮಾನುಜಾಚಾರ್ಯರಿಗೆ ಯಾತ್ರಾದಾನ, ರಥ ಬಲಿ ನಂತರ ಚೆಲುವನಾರಾಯಣಸ್ವಾಮಿ ಮಾಲೆ ಮರ್ಯಾದೆಯೊಂದಿಗೆ ರಥೋತ್ಸವದ ಪೂರ್ವಭಾವಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಆಚಾರ್ಯರ ಉತ್ಸವ ರಥಮಂಟಪಕ್ಕೆ ಪ್ರದಕ್ಷಿಣೆ ಬಂದ ನಂತರ ಮುಹೂರ್ತ ಪಠಣೆಯೊಂದಿಗೆ ರಥಾರೋಹಣ ನೆರವೇರಿಸಲಾಯಿತು. ನಂತರ ಆರಂಭವಾದ ಮಹಾರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ರಥಮಂಟಪಕ್ಕೆ ಮರಳಿತು. ಮಧ್ಯಾಹ್ನ ಯತಿರಾಜ ಮಠದಲ್ಲಿ ರಾಮಾನುಜರಿಗೆ ಅಭಿಷೇಕ ನೆರವೇರಿಸಲಾಯಿತು. ಯತಿರಾಜ ಜೀಯರ್ ಸೇರಿದಂತೆ ದೇವಾಲಯ ಕೈಂಕರ್ಯಪರರು ಭಾಗವಹಿಸಿದ್ದರು.

ಭಿಕ್ಷಾ ಕೈಂಕರ್ಯ: ರಾಮಾನುಜರು ಸ್ಥಾನಿಕರ ಮನೆಯಲ್ಲಿ ಭಿಕ್ಷೆ ಸ್ವೀಕರಿಸಿದ ಪ್ರತೀಕವಾಗಿ ನಡೆಯುವ ಭಿಕ್ಷಾ ಕೈಂಕರ್ಯದ 3ನೇ ದಿನ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.

‘ಚೆಲುವನಾರಾಯಣ ಸ್ವಾಮಿ ರಾಮಾನುಜರಿಗೆ ದಶಾವತಾರದ ದರ್ಶನ ಕರುಣಿಸಿದ ಪ್ರತೀಕವಾಗಿ ಬುಧವಾರ ರಾತ್ರಿ ದಶಾವತಾರ ಉತ್ಸವ ನಡೆಯಲಿದೆ’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಾರುಪತ್ತೇಗಾರ್ ಪಾರ್ಥಸಾರಥಿ ತಿಳಿಸಿದ್ದಾರೆ.

ಬೆಳಿಗ್ಗೆ 10.30ರಲ್ಲಿ ಆರಂಭವಾದ ರಥೋತ್ಸವ ದೇವಾಲಯ ತಲುಪಲು ಮಧ್ಯಾಹ್ನ 3 ಗಂಟೆಯಾಯಿತು. ಪ್ರತಿ ವರ್ಷ ರಾಮಾನುಜಾಚಾರ್ಯರ ರಥೋತ್ಸವಕ್ಕೆ ತಮಿಳುನಾಡಿನ ಭಕ್ತರು ಅತಿಹೆಚ್ಚು ಆಗಮಿಸುವುದು ವಾಡಿಕೆ. ಆದರೆ ಈ ಬಾರಿ ತಮಿಳುನಾಡಿನಲ್ಲಿ ಚುನಾವಣೆ ಇರುವ ಕಾರಣ ಭಕ್ತರ ಸಂಖ್ಯೆ ಇಳಿಕೆಯಾಗಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.