ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುರು ಪರಂಪರೆಯೇ ಶಕ್ತಿ: ಶಾಸಕ ದರ್ಶನ್

Published : 5 ಸೆಪ್ಟೆಂಬರ್ 2024, 14:43 IST
Last Updated : 5 ಸೆಪ್ಟೆಂಬರ್ 2024, 14:43 IST
ಫಾಲೋ ಮಾಡಿ
Comments

ಪಾಂಡವಪುರ: ಭಾರತೀಯರ ಕಲ್ಪನೆಯಲ್ಲಿ ಗುರು ಪರಂಪರೆ ಬಹಳ ಶಕ್ತಿಯುವಾಗಿದೆ ಎಂದು  ಉಪನ್ಯಾಸಕ ಡಾ. ಎಚ್.ಎಸ್.ಸತ್ಯನಾರಾಯಣ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ  ಅವರು ಪ್ರಧಾನ ಭಾಷಣ ಮಾಡಿ ದರು.

‘ಮಕ್ಕಳ ಆಲೋಚನ ಕ್ರಮಗಳಿಗೆ ಅನುಗುಣವಾಗಿ ಶಿಕ್ಷಕರು ಭೋದನೆ ಮಾಡಬೇಕು. ಶಿಕ್ಷಕರಿಗೆ ಕಲಿಯುವ ಆಸಕ್ತಿ ಹೊಂದಿರುವ ಮಕ್ಕಳು ಸಿಕ್ಕರೆ  ಸಂತೋಷದಿಂದ ಬೋಧಿಸುತ್ತಾರೆ. ಶಾಲೆಗಳಲ್ಲಿ ಮಕ್ಕಳು ಶಿಕ್ಷಕರಲ್ಲಿ ಪಠ್ಯದ ಪೂರಕವಾಗಿ ಪ್ರಶ್ನಿಸುವ ಗುಣ  ಬೆಳೆಸಿ ಎಂದು ಸಲಹೆ ನೀಡಿದರು.
 
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ದೇಶದ ಭವಿಷ್ಯ ರೂಪಿಸುವ ಮಕ್ಕಳ ಜವಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ.  ಶಿಕ್ಷಕರು ತಮ್ಮ ಹೊಣೆ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಪಟ್ಟಣದ ಶಿಕ್ಷಕರ ಭವನ ಅಭಿವೃಧ್ಧಿಪಡಿಸುವಂತೆ ಶಿಕ್ಷಕರ ಸಂಘದವರು ಮನವಿ ನೀಡಿದ್ದಾರೆ.  ಭವನ ಅಭಿವೃದ್ಧಿಪಡಿಸಲಾಗುವುದು. ಅಲ್ಲಿ ಮಕ್ಕಳ ಅಧ್ಯಯನಕ್ಕೆ ಲುಕ್ ಸೆಂಟರ್ ಆರಂಭಿಸಲಾಗುವುದು.  ಶಿಕ್ಷಕರು  ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಇಒ ಲೋಕೇಶ್ ಮೂರ್ತಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜವಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ  ಮೌಲ್ಯಾಧಾರಿತ ಶಿಕ್ಷಣವನ್ನು ಕಲಿಸಬೇಕು ಎಂ ದರು.

ತಹಶೀಲ್ದಾರ್ ಸಂತೋಷ್ ಮಾತನಾಡಿದರು. ನಿವೃತ್ತಿ ಹೊಂದಿದ ಬೋಧಖರನ್ನು ಸನ್ಮಾನಿಸಲಾಯಿತು. ಶಿಕ್ಷಕ ಧನಂಜಯ್ ಬರೆದಿರು `ಸ್ಫೂರ್ತಿಸೌರಭ' ಬಿಡುಗಡೆ ಮಾಡಲಾಯಿತು.

ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಉಪಾಧ್ಯಕ್ಷ ಎಲ್.ಅಶೋಕ್ ಬಿಇಒ ರವಿಕುಮಾರ್, ಬಿಆರ್ ಸಿ ಪ್ರಕಾಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಪ್ರೌಢಶಾಲ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಪ್ರಾ.ಶಾ.ಶಿ.ಸ.ಅಧ್ಯಕ್ಷ ಮಂಜುನಾಥ್, ಯುವರಾಜ, ತ್ಯಾಗರಾಜು, ಕರುಣಾಕುಮಾರ್, ಸಿಆರ್‌ಪಿ ಅನಸೂಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT