ಮೇಲುಕೋಟೆ: ಇಲ್ಲಿನ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಮಾ. 28ರಂದು ನಡೆಯಲಿದೆ.

ವೈರಮುಡಿ ಉತ್ಸವ ಮುಗಿಯುತ್ತಿದ್ದಂತೆ ಮೈಸೂರು ರಾಜರು ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟ ಧಾರಣೆ ಮಾಡಿ ರಾಜಮುಡಿ ಉತ್ಸವ ನೆರವೇರಿಸಲಾಗುತ್ತದೆ. ಒಂದೇ ರಾತ್ರಿ ಎರಡು ವಜ್ರದ ಕಿರೀಟ ಧಾರಣೆಯೊಂದಿಗೆ ಉತ್ಸವ ಈ ನಡೆಯುವುದು ವಿಶೇಷ.

ಪ್ರತಿ ವರ್ಷದಂತೆ ಹತ್ತು ದಿನಗಳ ವೈರಮುಡಿ ಬ್ರಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಮಾ. 23ರಿಂದಲೇ ಆರಂಭವಾಗಿ ಏ. 4ರವರೆಗೆ ವೈಭವದಿಂದ ನಡೆಯಲಿವೆ. ವೈರಮುಡಿ, ರಥೋತ್ಸವ, ಮಹಾಭಿಷೇಕ ನಡೆಯುವ ದಿನಗಳಂದು ಸರ್ಕಾರಿ ರಜೆ ಇರುವ ಕಾರಣ ಈ ವರ್ಷ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಜಿಲ್ಲಾ ಕೇಂದ್ರ ಮಂಡ್ಯ, ಮೈಸೂರು ಸೇರಿದಂತೆ ವಿವಿಧ ನಗರಗಳಿಂದ ಭಕ್ತರಿಗೆ ವಿಶೇಷ ಸಾರಿಗೆ ಬಸ್ ಸೌಕರ್ಯ ಕಲ್ಪಿಸಲಾಗಿದೆ.

ವೈರಮುಡಿ ಉತ್ಸವವಲ್ಲದೆ ಜಾತ್ರೆಯಲ್ಲಿ ಪ್ರಮುಖ ಮಹೋತ್ಸವಗಳು ನೆರವೇರಲಿವೆ. ಮಾ.24 ರಂದು ಸಂಜೆ 5ರಿಂದ 10 ರವರೆಗೆ ಕಲ್ಯಾಣೋತ್ಸವ, 25 ರಂದು ಬೆಳಿಗ್ಗೆ 8 ರಿಂದ 10 ರವರೆಗೆ ಗರುಡಧ್ವಜಾರೋಹಣ, 26ರಂದು ಬೆಳಿಗ್ಗೆ 10 ಗಂಟೆಯಿಂದ 2ಗಂಟೆವರೆಗೆ ಆರಿದ್ರಾ ಮಾಸ ತಿರುನಕ್ಷತ್ರ ವಿಶೇಷವಾಗಿ ರಾಮಾನುಜಾಚಾರ್ಯರಿಗೆ ಅಭಿಷೇಕ, 27ರಂದು ಶ್ರೀರಾಮನವಮಿ, ಮಧ್ಯಾಹ್ನ 2 ರಿಂದ 9 ರವರೆಗೆ ನಾಗವಲ್ಲಿ ಮಹೋತ್ಸವ ನಡೆಯಲಿದೆ.

ವೈರಮುಡಿ ಜಾತ್ರಾ ಮಹೋತ್ಸವದಲ್ಲಿ ಚೆಲುವನಾರಾಯಣಸ್ವಾಮಿ ಮಹಾರಥೋತ್ಸವ ಮಾ.31ರಂದು ಬೆಳಿಗ್ಗೆ 7.30ಕ್ಕೆ ಆರಂಭವಾಗಲಿದೆ. ಬಂಗಾರದ ಪಲ್ಲಕ್ಕಿ ಉತ್ಸವ ರಾತ್ರಿ ನೆರವೇರಲಿದೆ.

ಮಾ.30ರಂದು ಗಜೇಂದ್ರಮೋಕ್ಷ ಉತ್ಸವ, ಏ.1 ರಂದು ರಾತ್ರಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ಏ.2 ರಂದು ಬೆಳಿಗ್ಗೆ ತೀರ್ಥಸ್ನಾನ, ಸಂಜೆ ಪಟ್ಟಾಭಿಷೇಕ, ಏ.3 ರಂದು ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ, ಏ.4 ರಂದು ಬೆಟ್ಟದೊಡೆಯ ಯೋಗನರಸಿಂಹಸ್ವಾಮಿ ಮತ್ತು ಮಹಾಲಕ್ಷ್ಮೀ ಮಹಾಭಿಷೇಕ ನೆರವೇರಲಿದೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ವೈರಮುಡಿ ಬ್ರಹ್ಮೋತ್ಸವ ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಪರಮೇಶ್ ಗೌಡ ದೇವಾಲಯ ಅಭಿವೃದ್ಧಿ ಆಡಳಿತ ಮಂಡಳಿ ಅಧ್ಯಕ್ಷ

ವಿವಿಧ ವಾಹನೋತ್ಸವ

ಮಾ.25ರಂದು ಬೆಳಿಗ್ಗೆ ಮಂಟಪ ವಾಹನೋತ್ಸವ ರಾತ್ರಿ ಹಂಸವಾಹನೋತ್ಸವ 26ರ ರಾತ್ರಿ ಶೇಷವಾಹನೋತ್ಸವ 27 ರಂದು ರಾತ್ರಿ ಚಂದ್ರಮಂಡಲ ವಾಹನೋತ್ಸವ 29 ರಂದು ರಾತ್ರಿ ಗರುಡವಾಹನೋತ್ಸವ 30ರಂದು ರಾತ್ರಿ ಗಜ ಮತ್ತು ಅಶ್ವವಾಹನೋತ್ಸವ ಏ.1 ರಂದು ರಾತ್ರಿ ಕುದುರೆ ವಾಹನೋತ್ಸವ 2ರಂದು ಸಂಜೆ ಸಮರಭೂಪಾಲ ವಾಹನೋತ್ಸವ 3 ರಂದು ರಾತ್ರಿ ಹನುಮಂತ ವಾಹನೋತ್ಸವಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.