ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದ ಸಂಪ್ರದಾಯದಂತೆ ಮೃತ್ತಿಕಾ ಸಂಗ್ರಹಣೆಯ ಅಂಕುರಾರ್ಪಣೆಯೊಂದಿಗೆ ವಿಶ್ವ ವಿಖ್ಯಾತ ವೈರಮುಡಿ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ಸಿಕ್ಕಿತು.

ಮೇಲುಕೋಟೆ ಹೆಬ್ಬಾಗಿಲಿನ ಬಳಿ ಇರುವ ಪೇಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಉತ್ಸವ ತೆರಳಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬಳಿಕ ಅಲ್ಲಿಯೇ ಇರುವ ತುಳಸಿಕಟ್ಟೆಯಲ್ಲಿ ಮೃತ್ತಿಕಾ (ಮಣ್ಣು) ಸಂಗ್ರಹಣೆ ಮಾಡುವ ಮೂಲಕ ಅಂಕುರಾರ್ಪಣೆ ನೆರವೇರಿಸಲಾಯಿತು. ಮೃತ್ತಿಕಾವನ್ನು ತಂದು ಜಾತ್ರಾ ಮಹೋತ್ಸವ ಕೊನೆಯ ದಿನದವರೆಗೂ ಪೂಜೆ ನಡೆಸುವುದು ಇಲ್ಲಿನ ಸಂಪ್ರದಾಯವಾಗಿದೆ.

ವೈಷ್ಣವ ಸಂತ ರಾಮಾನುಜಾಚಾರ್ಯರ ಸಿದ್ಧಾಂತದಂತೆ ವೈರಮುಡಿ ಬ್ರಹ್ಮೋತ್ಸವ ಜರುಗುತ್ತಿದೆ. ವೈರಮುಡಿ ಉತ್ಸವ, ರಥೋತ್ಸವ, ಮಹಾಭಿಷೇಕಗಳಂದು ಈ ಬಾರಿ ಸರ್ಕಾರಿ ರಜೆ ಇರುವ ಕಾರಣ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಮಾ.28ಕ್ಕೆ ವೈರಮುಡಿ ಕಿರೀಟಧಾರಣೆ:

ಮಾರ್ಚ್ 28ರಂದು ಚೆಲುವನಾರಾಯಣಸ್ವಾಮಿ ಅವರ ವಿಶ್ವವಿಖ್ಯಾತ ವೈರಮುಡಿ ಕಿರೀಟಧಾರಣಾ ಮಹೋತ್ಸವ ರಾತ್ರಿ 8 ಗಂಟೆಗೆ ಆರಂಭವಾಗಿ ಬೆಳಗಿನ ಜಾವ 4 ಗಂಟೆಯವರೆಗೆ ಪುಷ್ಯ ನಕ್ಷತ್ರ ಕೂಡಿದ ಶುಭದಿನದಂದು ನಡೆಯಲಿದೆ.

ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.31ರಂದು ಚೆಲುವನಾರಾಯಣ ಸ್ವಾಮಿಯವರ ಮಹಾರಥೋತ್ಸವ ಬೆಳಗ್ಗೆ 7.30ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ.

140 ಬಸ್ ಕಾರ್ಯಾಚರಣೆ:

ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂಡ್ಯ, ನಾಗಮಂಗಲ, ಕೆ.ಆರ್.ಪೇಟೆ. ಶ್ರೀರಂಗಪಟ್ಟಣ, ಪಾಂಡವಪುರ ಬಸ್ ನಿಲ್ದಾಣಗಳಿಂದ ಹಾಗೂ ಮೈಸೂರು, ಹಾಸನ, ತುಮಕೂರು ಮತ್ತು ಬೆಂಗಳೂರು ಬಸ್ ನಿಲ್ದಾಣಗಳಿಂದ ಹೆಚ್ಚುವರಿಯಾಗಿ 140 ಬಸ್ಸುಗಳ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

‘ಕಳೆದ 13 ವರ್ಷಗಳಿಂದ ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಸ್ವಚ್ಛತೆಗಾಗಿ ಇಲ್ಲಿನ ತಾಣಗಳ ಸುತ್ತ ಪಾಂಡವಪುರ ವಿಜಯ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ’ ಎಂದು ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಶೀಲಾ ತಿಳಿಸಿದರು.

ಜಾತ್ರೆಯ ಅಂಗವಾಗಿ ಮಂಡ್ಯ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಕ್ಷೇತ್ರಕ್ಕೆ ಆಗಮಿಸಿ ಚೆಲುವನಾರಾಣಯಣ ಸ್ವಾಮಿ ದೇವಾಲಯ ಹಾಗೂ ಲಕ್ಷಾಂತರ ಭಕ್ತರು ಸೇರುವ ರಾಜಬೀದಿ, ಪಂಚ ಕಲ್ಯಾಣಿ, ಯೋಗಾನರಸಿಂಹಸ್ವಾಮಿ ಬೆಟ್ಟ ತಪ್ಪಲಿನಲ್ಲಿ ಸ್ವಚ್ಛತೆ ಹಾಗೂ ಭಕ್ತರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಮತ್ತು ದೇವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಲ್ಯಾಣೋತ್ಸವ ಇಂದು

ವೈರಮುಡಿ ಜಾತ್ರಾ ಮಹೋತ್ಸವದ ನಿಮಿತ್ತ ಚೆಲುವನಾರಾಯಣ ಸ್ವಾಮಿ ಹಾಗೂ ಕಲ್ಯಾಣಿ ನಾಯಕಿ ಅಮ್ಮನವರ ಕಲ್ಯಾಣ ಮಹೋತ್ಸವ (ಧಾರಾ ಮಹೋತ್ಸವ) ಇಲ್ಲಿನ ಪಂಚಕಲ್ಯಾಣಿಯ ಧಾರಾ ಮಂಟಪದಲ್ಲಿ ಮಾರ್ಚ್ 24ರಂದು ಸಂಜೆ 5ರಿಂದ ಆರಂಭವಾಗಲಿದೆ.

ಪ್ರತಿ ವರ್ಷದಂತೆ ಈ ಬಾರಿ ಧಾರಾ ಮಂಟಪವನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ, ಸ್ವಾಮಿಗೂ ದೇವಿಗೂ ಕಲ್ಯಾಣೋತ್ಸವ ನೇರವೇರಲಿದೆ ಎಂದು ದೇವಾಲಯದ ಪ್ರಥಮ ಸ್ಥಾನೀಕರಾದ ರಾಮಪ್ರಿಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.