ಮಂಡ್ಯ: ‘ಐಪಿಎಲ್ ಟಿಕೆಟ್ ಎಂಬುದು ಗ್ಯಾಂಬ್ಲಿಂಗ್ ಆಗಿದೆ. ಸ್ಟೇಡಿಯಂನಲ್ಲಿ ಮೂಲಸೌಕರ್ಯ ಇಲ್ಲ. ಆದರೂ ಮೂಲದರಕ್ಕಿಂತ ಹತ್ತು ಪಟ್ಟು ಹೆಚ್ಚಿನ ದರಕ್ಕೆ ಟಿಕೆಟ್ ಮಾರುತ್ತಿರುವುದು ಸರಿಯಲ್ಲ. ಬಡವರ ಮಕ್ಕಳಿಗೂ ಟಿಕೆಟ್ ಸಿಗಬೇಕು’ ಎಂದು ಶಾಸಕ ಪಿ.ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಐಪಿಎಲ್ ಬೆಂಗಳೂರಿನಲ್ಲಿ ನಡೆಯುತ್ತಿರುವುದಕ್ಕೆ ಖುಷಿ ಇದೆ. ಆದರೆ ಟಿಕೆಟ್ಗಳನ್ನ ಬ್ಲಾಕ್ನಲ್ಲಿ ಮಾರುತ್ತಿರುವುದು ಸರಿಯಲ್ಲ. ಕ್ರಿಕೆಟ್ ನೋಡಲು ಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ದುಡ್ಡು ಮಾಡುವ ಯಂತ್ರ ಮಾಡಿಕೊಂಡಿದ್ದಾರೆ. ಮೂಲಸೌಕರ್ಯ ಒದಗಿಸಿ, ಇನ್ನಾದರೂ ಎಚ್ಚೆತ್ತುಕೊಳ್ಳಿ’ ಎಂದು ಅಸಮಾಧಾನ ಹೊರಹಾಕಿದರು.

ಕಾಶಪ್ಪನವರ್ ಹೇಳಿದ ದಾಟಿ ಸರಿಯಿಲ್ಲದೇ ಇರಬಹುದು. ಆದರೆ ಅವರು ಕೇಳಿದ್ದು ಸರಿಯಿದೆ. ನನಗೆ ಸಿಕ್ಕ 2 ಟಿಕೆಟ್ಗಳನ್ನು ಬಡ ಹುಡುಗರಿಗೆ ಕೊಟ್ಟೆ. ಭಿಕ್ಷುಕರಿಗೆ ಕೊಟ್ಟ ಹಾಗೇ ಶಾಸಕರಿಗೆ ಟಿಕೆಟ್ ಕೊಟ್ಟಿದ್ದಾರೆ. ನಾನು ದುಡ್ಡು ಕೊಟ್ಟು, ಲೈನ್ನಲ್ಲಿ ನಿಂತು ಟಿಕೆಟ್ ತೆಗೆದುಕೊಳ್ತೀನಿ, ಟಿಕೆಟ್ ಎಲ್ಲಿ ಸಿಗುತ್ತೆ? ಸ್ಟೇಡಿಯಂನ ಯಾವ ಕೌಂಟರ್ನಲ್ಲಿ ಟಿಕೆಟ್ ಕೊಡ್ತಿದ್ದಾರೆ ತೋರ್ಸಿ ನೋಡೋಣ? ಎಂದು ಹರಿಹಾಯ್ದರು.

‘ನನಗೆ ₹50 ಸಾವಿರ ಕೊಟ್ಟು ಟಿಕೆಟ್ ತೆಗೆದುಕೊಳ್ಳುವ ಶಕ್ತಿ ಇರಬಹದು. ಹಾಗಾದರೆ ಬಡ ಹುಡುಗ ಮ್ಯಾಚ್ ನೋಡಬಾರದಾ? ಕ್ರಿಕೆಟ್ ಅಭಿಮಾನ, ವ್ಯಾಮೋಹವನ್ನ ದುಡ್ಡಾಗಿ ಪರಿವರ್ತಿಸಿಕೊಳ್ತಿದ್ದಾರೆ. 40 ಸಾವಿರ ಆಸನಗಳಲ್ಲಿ 20 ಸಾವಿರ ಟಿಕೆಟ್ ಕೌಂಟರ್ನಲ್ಲಿ ಮಾರಬೇಕು. ನಾನು ಗಲ್ಲಿ ಕ್ರಿಕೆಟ್ ಆಡುವ ಹುಡುಗರ ಪರ, ಬಡವರ ಪರ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.