ಬುಧವಾರ, ನವೆಂಬರ್ 13, 2019
23 °C

ಭಾರತೀನಗರ: ಹಾಡಹಗಲೇ ಯುವಕನ ಕೊಲೆ

Published:
Updated:
Prajavani

ಭಾರತೀನಗರ: ಪಟ್ಟಣದ ಹಲಗೂರು ವೃತ್ತದಲ್ಲಿ ಶನಿವಾರ ಹಾಡಹಗಲೇ ದುಷ್ಕರ್ಮಿಗಳು ಯುವಕನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

5ನೇ ನಂಬರ್‌ ಸೈಟ್‌ (ಬಡಾವಣೆ) ನಿವಾಸಿ ನವೀನ್ ಅಲಿಯಾಸ್ ಕುಟ್ಟಿ (32) ಹತ್ಯೆಯಾದ ಯುವಕ. ಐವರು ದುಷ್ಕರ್ಮಿಗಳ ತಂಡ ಬೆಳಿಗ್ಗೆ 11 ಗಂಟೆಯ ವೇಳೆ ನವೀನ್‌,ಮೇಲೆ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ನಂತರ ಎಲ್ಲರೂ ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ನವೀನ್‌ ಅವರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಮಿಮ್ಸ್‌ಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಆರೋಪಿಗಳು ನವೀನ್‌ ಸ್ನೇಹಿತರೇ ಆಗಿದ್ದು ಅದೇ ಬಡಾವಣೆಯ ನಿವಾಸಿಗಳಾಗಿದ್ದಾರೆ. ಹಣಕಾಸಿನ ಕಾರಣಕ್ಕೆ ಕೊಲೆ ಆಗಿರಬಹುದು ಎಂದು ಶಂಕಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)