ಭಾರತೀನಗರ: ‘ಅರ್ಹತೆ ಇರುವವರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಾದ ಮಠಗಳಿಂದು ಹಣ ಉಳ್ಳವರ, ಶ್ರೀಮಂತರ, ರಾಜಕೀಯ ಸ್ಥಾನಮಾನ ಹೊಂದಿರುವವರಿಗೆ ತಲೆಬಾಗುತ್ತಿವೆ’ ಎಂದು ಮಂಡ್ಯ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಕೆ.ಎನ್. ನಿಂಗೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಚಿಕ್ಕರಸಿನಕೆರೆ ಹೋಬಳಿ ಘಟಕ ಆಯೋಜಿಸಿದ್ದ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರಾಗಿ ನೂತನವಾಗಿ ಆಯ್ಕೆಗೊಂಡ ಅಶೋಕ್ ಜಯರಾಮ್ ಹಾಗೂ ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಸಿ.ಕೆ. ರವಿಕುಮಾರ ಚಾಮಲಾಪುರ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಆದಿಚುಂಚನಗಿರಿ ಮಠವೂ ಸೇರಿದಂತೆ ಹಲವು ಮಠಗಳು ಇಂದು ಶ್ರೀಮಂತರ ಸ್ವತ್ತಾಗಿವೆ. ಹಣವುಳ್ಳವರ, ಅಧಿಕಾರವುಳ್ಳವರ ಕುಟುಂಬ ವರ್ಗದವರ ಹಿಡಿತದಲ್ಲಿವೆ. ಇಂದು ಸ್ಥಾನಮಾನಗಳನ್ನು ಗಳಿಸಲು ವ್ಯಕ್ತಿಯ ಅರ್ಹತೆಯ ಬದಲು ಹಣವೇ ಮುಖ್ಯ ಮಾನದಂಡವಾಗಿದೆ. ಅರ್ಹತೆವುಳ್ಳ ಅನೇಕರು ಸಾಮಾಜಿಕವಾಗಿ, ರಾಜಕೀಯವಾಗಿ, ಸಾಹಿತ್ಯಿಕವಾಗಿ ವಂಚಿತರಾಗುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಆಂತರಿಕ ಭದ್ರತಾ ಘಟಕದ ಎಸ್ಪಿ ಡಾ.ಎ.ಎನ್. ಪ್ರಕಾಶಗೌಡ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕಾರ್ಯಪಾಲಕ ಅಭಿಯಂತರ ಕೆ. ಬಸವರಾಜೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್ ಹಾಗೂ ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಸಿ.ಕೆ. ರವಿಕುಮಾರ ಚಾಮಲಾಪುರ ಅವರನ್ನು ಅಭಿನಂದಿಸಲಾಯಿತು.

ಮಾನಸ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವಿ.ಕೆ. ಜಗದೀಶ್, ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ ಅಧ್ಯಕ್ಷ ಡಾ. ಜಯಪ್ರಕಾಶ್, ಕಾರ್ಯಕ್ರಮ ಆಯೋಜಕರಾದ ಪ್ರೊ. ಬಿ.ಎಸ್. ಬೋರೇಗೌಡ, ದೊಡ್ಡರಸಿನಕೆರೆ ಜ್ಯೋತಿ ಕುಮಾರ, ಬೇಲೂರು ಸೋಮಶೇಖರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.