ಶ್ರೀರಂಗಪಟ್ಟಣ: ತಾಲ್ಲೂಕಿನ ಬಲಮುರಿ ಸಮೀಪ, ಎಡತಿಟ್ಟು ನಡುಗಡ್ಡೆ ಬಳಿ ಗುರುವಾರ ಸಂಜೆ ಈಜಲು ಕಾವೇರಿ ನದಿಗೆ ಇಳಿದ ವೇಳೆ ನೀರಿನಲ್ಲಿ ಮುಳುಗಿದ್ದ ಮೈಸೂರು ತಾಲ್ಲೂಕು ಜಯಪುರ ಹೋಬಳಿ ಕೆಲ್ಲಹಳ್ಳಿಯ ರವಿಚಂದ್ರ (21) ಅವರ ಮೃತದೇಹ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ.

‘ಬಲಮುರಿ ಪ್ರಕೃತಿ ತಾಣಕ್ಕೆ ಕೂಗಳತೆ ದೂರದಲ್ಲಿ ಶವ ಸಿಕ್ಕಿದೆ. ಅಗ್ನಿಶಾಮಕ ದಳ ಸಿಬ್ಬಂದಿಯ ನೆರವಿನಿಂದ ಶವವನ್ನು ನದಿಯಿಂದ ಮೇಲೆ ತೆಗೆದು ವಾರಸುದಾರರಿಗೆ ಒಪ್ಪಿಸಲಾಯಿತು’ ಎಂದು ಕೆಆರ್ಎಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೈಸೂರಿನ ಕೇನ್ಸ್ ಸಂಸ್ಥೆಯ ನೌಕರರಾದ ರವಿಚಂದ್ರ, ಮೋಹನಕುಮಾರ್ ಮತ್ತು ಚಾಮರಾಜನಗರ ಜಿಲ್ಲೆ ಸಿಂಗಾನಲ್ಲೂರಿನ ವಿಕಾಸ್ ವಿಹಾರಕ್ಕೆ ಬಂದಿದ್ದರು. ಈಜಲು ನದಿಗೆ ಇಳಿದಾಗ ರವಿಚಂದ್ರ ಮತ್ತು ಮೋಹನಕುಮಾರ್ ನೀರಿನಲ್ಲಿ ಮುಳುಗಿದ್ದರು. ಚಾಮರಾಜನಗರ ಜಿಲ್ಲೆ ಸಂತೆಮರಳ್ಳಿ ಹೋಬಳಿ ಕಮರವಾಡಿಯ ಮೋಹನಕುಮಾರ್ ಅವರ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-40-1648514614

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.