ಮೈಸೂರು: ‘ತುರು’ಗಳನ್ನು ರಕ್ಷಿಸಲು ಹೋರಾಡಿದ ಹೊಯ್ಸಳರ ಕಾಲದ ವೀರನ ಶಾಸನ ಶಿಲ್ಪವನ್ನು ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಸಿ.ಎ.ಶಶಿಧರ ಮತ್ತು ತಂಡ ಪತ್ತೆ ಹಚ್ಚಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮಣಿಯೂರು ಗ್ರಾಮದಲ್ಲಿನ ಹೊಯ್ಸಳರ ಅಪ್ರತಿಮ ದೊರೆ ವಿಷ್ಣುವರ್ಧನನ ಕಾಲದ ಅಪ್ರಕಟಿತ ವೀರಗಲ್ಲಾಗಿದ್ದು, ರಾಮಕೃಷ್ಣೇಗೌಡ ಎಂಬುವರ ತೋಟದಲ್ಲಿ ಪೂರ್ವ ದಿಕ್ಕಿಗೆ ಮುಖಮಾಡಿ ನಿಲ್ಲಿಸಲಾಗಿದೆ.

12ನೇ ಶತಮಾನಕ್ಕೆ ಸೇರಿದ ಈ ಅಪ್ರಕಟಿತ ‘ತುರುಗೋಳ್ ವೀರಗಲ್ಲು’ ಕನ್ನಡ ಲಿಪಿಯ ಮೂರು ಪಟ್ಟಿಕೆಗಳಿದ್ದು, ತುರುಗಳ ಉಬ್ಬು ಶಿಲ್ಪ ಹೊಂದಿದೆ.

‘ಸ್ಥಳೀಯ ನಿವಾಸಿ ಎಚ್.ಎಲ್.ಉಮೇಶ್ ಅವರು ನೀಡಿದ ಮಾಹಿತಿ ಆಧರಿಸಿ ಈ ಹಿಂದೆ ಭಾಷಾ ಸಂಸ್ಥಾನದ ನಿರ್ದೇಶಕರಾಗಿದ್ದ ಪ್ರೊ.ಶೈಲೇಂದ್ರ ಮೋಹನ್ ಹಾಗೂ ಗುರುಗಳಾದ ಪ್ರೊ.ಎನ್.ಎಂ.ತಳವಾರ್ ಅವರ ಅನುಮತಿ ಪಡೆದು ಕ್ಷೇತ್ರ ಕಾರ್ಯ ನಡೆಸಿದ್ದೆ. ಸಂಶೋಧಕರಾದ ಸಂತೋಷಿ ಸುಬ್ರಹ್ಮಣ್ಯ, ಗ್ರಂಥಾಲಯ ಸಹಾಯಕ ವಿ.ನಾಗೇಂದ್ರ ಮತ್ತು ರಮೇಶ್ ಪಟೇಲ್ ಅವರ ನೆರವಾದರು’ ಎಂದು ಶಶಿಧರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹುದುಗಿದ್ದ ವೀರಗಲ್ಲನ್ನು ಹೊರ ತೆಗೆದಾಗ ಮೂರು ಪಟ್ಟಿಕೆ ಕಂಡವು. ಮೊದಲ ಪಟ್ಟಿಕೆಯಲ್ಲಿ ‘ಸಿವ, (ನಾ)ಯಮ (ಚಾಚ)’, ಎರಡನೇ ಪಟ್ಟಿಕೆಯಲ್ಲಿ ‘ಸ್ವಸ್ತಿ ಶಮಧಿಗತ ಪಂಚಾ ಮಹಾಶಬ್ದ (ಮ), ಣ್ಡಳೇಸ್ವರ ತ್ರಿಭುವನಮಲ್ಲ ತಳಕಾ(ಡು) ಗೊಣ್ಡ, ವೀರಗಂಗ ಪೊಯ್ಸಳದೇವರು’ ಎಂದಿದೆ. ಇದು ವಿಷ್ಣುವರ್ಧನನ ಬಿರುದುಗಳಾಗಿವೆ’ ಎಂದರು.

‘ಮೂರನೆಯ ಪಟ್ಟಿಕೆಯಲ್ಲಿ ‘ಸಾಧಾರಣ ಸಂವತ್ಸರದಂದು ಅತ್ತಿಸೆಟ್ಟಿಯ ಮಗ ಮವಿಗ ಮಣಿಮಾರ ತುರುಹರಿಯ ಸತ್ತ’ ಎಂದಿದೆ. ಶುಭ ಸೂಚಕವಾದ ಸ್ವಸ್ತಿ ಎಂಬ ಪದದಿಂದ ಆರಂಭಗೊಂಡಿದೆ. ತಮಟೆ, ಶಂಖ, ಭೇರಿ, ಕಹಳೆ ಮತ್ತು ವೀಣೆ ಎಂಬ ಐದು ಬಗೆತ ವಾದ್ಯಪರಿಕರಗಳ ಮಂಗಳಧ್ವನಿಯಿಂದ ಕೂಡಿದ ರಾಜ ಮರ್ಯಾದೆಯನ್ನು ಹೊಂದಿರುವ ವಿಷ್ಣುವರ್ಧನನ ಬಿರುದಾವಳಿಗಳನ್ನು ತಿಳಿಸುತ್ತದೆ’ ಎಂದು ವಿವರಿಸಿದರು.

ಮೂರು ಪಟ್ಟಿಕೆಗಳಲ್ಲಿ ವೀರನು ಕಠಾರಿಯಿಂದ ಬಿಲ್ಲು ಹಿಡಿದಿರುವ ಎದುರಾಳಿಯ ಎದೆಗೆ ಚುಚ್ಚಿರುವ ಉಬ್ಬು ಶಿಲ್ಪವಿದೆ. ವೀರನ ಹಿಂದೆ ತುರುಗಳಿಗಾಗಿ ನಡೆದ ಕದನ ಎಂಬುದನ್ನು ಸೂಚಿಸುವುದಕ್ಕಾಗಿ 4 ಗೋವುಗಳನ್ನು ಶಿಲ್ಪಿಸಲಾಗಿದೆ. ಮಧ್ಯಭಾಗದ ಪಟ್ಟಿಕೆಯಲ್ಲಿ ಹೋರಾಡಿ ಮಡಿದ ವೀರನನ್ನು ಅಪ್ಸರೆಯರು ಕೈಲಾಸಕ್ಕೆ ಕರೆದೊಯ್ಯುವ ಚಿತ್ರಣವಿದೆ. ಮೂರನೇ ಮತ್ತು ಮೇಲ್ಭಾಗದ ಪಟ್ಟಿಕೆಯಲ್ಲಿ ಮಡಿದ ವೀರನು ಕೈಲಾಸ ಸೇರಿ ಶಿವಲಿಂಗದ ಮುಂದೆ ಅಂಜಲೀಬದ್ದನಾಗಿ ಕುಳಿತಿದ್ದಾನೆ. ಶಿವಲಿಂಗದ ಮೇಲ್ಭಾಗದಲ್ಲಿ ಈ ವೀರನ ಹೋರಾಟ ಮತ್ತು ತ್ಯಾಗವು ಸೂರ್ಯ-ಚಂದ್ರ ಇರುವವರೆಗೂ ಶಾಶ್ವತವಾಗಿರುತ್ತದೆ ಎಂಬುದನ್ನು ಸೂಚಿಸಲು ಸೂರ್ಯ-ಚಂದ್ರರ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ ಎನ್ನುತ್ತಾರೆ ಶಶಿಧರ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-40-1622317884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.