ಶ್ರೀರಂಗಪಟ್ಟಣ: ‘ಮೈಸೂರಿನ ಒಡೆಯರ್ ದೊರೆಗಳು ಹಳೇ ಮೈಸೂರು ಭಾಗದ ಜನರ ಪಾಲಿಗೆ ನಿಜವಾದ ಅನ್ನದಾತರು’ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಬಣ್ಣಿಸಿದರು.

ತಾಲ್ಲೂಕಿನ ಆಲದಹಳ್ಳಿ ಗ್ರಾಮದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಅರುಣೋದಯ ಕಲಾತಂಡ ಸೋಮವಾರ ಸಂಜೆ ಏರ್ಪಡಿಸಿದ್ದ ‘ಹಳ್ಳಿಗಳ ಅಭಿವೃದ್ಧಿಗೆ ಮೈಸೂರು ಒಡೆಯರ್ ದೊರೆಗಳ ಕೊಡುಗೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮೈಸೂರು ಒಡೆಯರ್ ವಂಶದ ದೊರೆಗಳು ಜನ ಜೀವನ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದ ಕಾಲ ಸುವರ್ಣ ಯುಗವೇ ಆಗಿತ್ತು. ಶಿಕ್ಷಣ, ಕೃಷಿ, ಕೈಗಾರಿಕೆ, ವಿದ್ಯುತ್ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಇಡೀ ದೇಶದಲ್ಲೇ ಮೊದಲು ಎಂಬಂತೆ ಶೋಷಿತರಿಗೆ ಮೀಸಲಾತಿ ವ್ಯವಸ್ಥೆ ಜಾರಿಗೆ ತಂದ ಹೆಗ್ಗಳಿಕೆ ನಾಲ್ವಡಿ ಅವರದ್ದು’ ಎಂದು ಹೇಳಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಂಡ್ಯ ಜಿಲ್ಲಾ ಸಂಚಾಲಕಿ ಹಾಗೂ ಅರುಣೋದಯ ಕಲಾ ತಂಡದ ಅಧ್ಯಕ್ಷೆ ಮಂಜುಳಾ ಆಲದಹಳ್ಳಿ ಮಾತನಾಡಿ, ‘ವಿದ್ಯಾವರ್ಧಕ ಟ್ರಸ್ಟ್ ಹಲವು ದಶಕಗಳಿಂದ ಜನಮುಖಿಯಾದ ಕೆಲಸ ಮಾಡುತ್ತಿದೆ. ಮೈಸೂರು ಒಡೆಯರ್ ದೊರೆಗಳು ಮಹಿಳೆಯರಿಗಾಗಿ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕಲ್ಪಿಸಿದರು. ಅವರು ನಿತ್ಯ ಸ್ಮರಣೆಗೆ ಅರ್ಹರು’ ಎಂದರು.

ರತ್ನಮ್ಮ ಮತ್ತು ತಂಡ ಜಾಗೃತಿ ಗೀತೆಗಳನ್ನು ಹಾಡಿತು. ಯುವ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಧುಕುಮಾರ್, ಮುಖಂಡ ಯಾಲಕ್ಕಯ್ಯ, ಗ್ರಾ.ಪಂ. ಮಾಜಿ ಸದಸ್ಯ ಶ್ರೀನಿವಾಸ್, ಕಲಾವಿದರಾದ ಸಿದ್ದಾರ್ಥ, ವಿಶ್ವ, ಮಹಂತೇಶ, ನಾಗಯ್ಯ, ಹರಿಕತೆ ಮಂಜು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-40-1946289458

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.