ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂನಲ್ಲಿ ಮೇ 3ರಂದು ನಡೆದಿದ್ದ ಮೈಸೂರಿನ ಮಹಮದ್ ಸುಹೇದ್ (27) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮೈಸೂರಿನ ಗೌಸಿಯಾ ನಗರದ ಸಾಧಿಕ್ ಅಹಮದ್, ಮಹಮದ್ ಸೈಫ್, ರಿಯಾದ್ ಅಹಮದ್ಖಾನ್ ಹಾಗೂ ಮೈಸೂರು ಶಾಂತಿನಗರದ ಮಸೂದ್ ಮತ್ತು ಸಯ್ಯದ್ ಸುಹೇದ್ ಎಂಬವರನ್ನು ಮೈಸೂರಿನ ಕೆಸರೆ ಬಳಿ ಸಿಪಿಐ ಬಿ.ಜಿ. ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳು ಸೇರಿದಂತೆ ಒಂಭತ್ತು ಮಂದಿಯ ತಂಡ ಮೇ 3ರಂದು ಸಂಜೆ ಮಹಮದ್ ಸುಹೇದನನ್ನು ಗಂಜಾಂ ಬಳಿಗೆ ಕರೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಹತ್ಯೆಗೀಡಾಗಿರುವ ಮಹಮದ್ ಸುಹೇದ್ ಮತ್ತು ಆತನ ಸಹೋದರರಾದ ತಬ್ರೇಜ್ ಮತ್ತು ಅತೀಕ್ ಎಂಬವರು ಮೈಸೂರಿನ ಶಾಂತಿನಗರದ ಸಯ್ಯದ್ ಸುಹೇದನ ಸಹೋದರ ಮಹಮದ್ ಸುಫಿಯಾನ್ ಎಂಬಾತನನ್ನು ಕಳೆದ ನವೆಂಬರ್ನಲ್ಲಿ ಹತ್ಯೆ ಮಾಡಿದ್ದರು.

ಆ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಹಮದ್ ಸುಹೇದ್ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದು ಇತರರಿಗೂ ಕೊಲೆ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಗಳು ತಮ್ಮ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-40-1611914720

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.