ನಾಗಮಂಗಲ: ಗ್ರಾಮ ದೇವತೆ ಬಡಗೂಡಮ್ಮ ದೇವಿಯ ಜಾತ್ರಾ ಮಹೋತ್ಸವ ಶುಕ್ರವಾರ ಹಾಗೂ ಶನಿವಾರ ಗ್ರಾಮಗಳಲ್ಲಿ ದೇವಿಯ ರಥೋತ್ಸವ ಹಾಗೂ ಕೊಂಡೋತ್ಸವ ನಡೆಯಲಿದೆ. ಪುರಾತನ ಪ್ರತೀತಿಯಂತೆ ಯುಗಾದಿಯ ಹಬ್ಬದ ನಂತರದ ಮೂರನೇ ಶನಿವಾರ ನಡೆಯುವ ಜಾತ್ರಾಮಹೋತ್ಸವಕ್ಕೆ ತನ್ನದೇ ಆದ ಹಿರಿಮೆ ಹೊಂದಿದೆ.

ಸಾರಣೆಯಾದ ನಂತರ ಅಮ್ಮ ಅಸೆ ಅಥವ ಪಟ್ಟಕ್ಕೆ ಕೂರುವಳೆಂಬ ನಂಬಿಕೆಯಲ್ಲಿ ಪ್ರತಿ ದಿನ ನಡೆಯುವ ಪೂಜಾ ಕೈಂಕರ್ಯಗಳ ಜೊತೆಗೆ ರಥೋತ್ಸವಕ್ಕೆ ನಾಲ್ಕು ದಿನಗಳ ಮುಂಚಿನ ಬುಧವಾರ ಅಂದರೆ ಏಪ್ರಿಲ್ 1 ರಾತ್ರಿ ನಡೆಯುವ ವಿಶೇಷ ಹೂವಿನ ಚಪ್ಪರ ಹಾಗೂ ತಾಯಿಯ ಉತ್ಸವ ಮೂರ್ತಿಯ ಪಟ್ಟಣದ ಒಳಸುತ್ತಿನ ಮೆರವಣಿಗೆ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿಯಾಗಿದೆ.

ಏ.2 ರಂದು ರಾತ್ರಿ ಉಪ್ಪಾರಹಳ್ಳಿ, ಜೋಡಿನೆರಲಕೆರೆ, ಹುಲ್ಲೇಕೆರೆ, ಬೀರೇಶ್ವರಪುರ, ಕಲ್ಲಿನಾಥಪುರ ಮತ್ತು ಕೆ.ಮಲ್ಲೇನಹಳ್ಳಿ ಗ್ರಾಮಸ್ಥರು ಮುಂಗೋಳಿ ತುಂಬಿದ ರಂಗದ ಕುಣಿತದಲ್ಲಿ ಪಾಲ್ಗೊಳ್ಳುವುದು ಸಾಂಪ್ರದಾಯಿಕ ಆಚರಣೆ. ಏ.3 ರ ಶುಕ್ರವಾರ ಹಬ್ಬದ ನಿಮಿತ್ತ ದೇವಾಲಯದ ಆವರಣದಲ್ಲಿ ಹೋಮ-ಹವನಾದಿಗಳು ಸೇರಿದಂತೆ ಹಲವಾರು ಧಾರ್ಮಿಕ ಕೈಂಕರ್ಯಗಳು ಜರುಗುತ್ತವೆ. ವಿಪ್ರ ಸಮಾಜದ ವತಿಯಿಂದ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕಾದಿ ಪ್ರಥಮ ಪೂಜೆ ವೇದಘೋಷಗಳೊಂದಿಗೆ ನಡೆಯುವುದು ಹಬ್ಬದ ಆಚರಣೆಯ ಧಾರ್ಮಿಕ ಕಾರ್ಯ ವಿಶೇಷ.

ಕೊಂಡೋತ್ಸವ, ರಥೋತ್ಸವ : ಅಮ್ಮನ ತವರುಮನೆ ಉಪ್ಪಾರಹಳ್ಳಿ ಗ್ರಾಮಸ್ಥರಿಂದ ಏ.3 ರಂದು ಸಂಜೆ ಪೂಜಾ ಕಾರ್ಯಕ್ರಮಗಳೊಂದಿಗೆ ಕೊಂಡೋತ್ಸವಕ್ಕೆ ಅಗ್ನಿಸ್ಪರ್ಷ ಮಾಡಡಲಾಗುವುದು.

ನಾಗಮಂಗಲ ಪಟ್ಟಣದಿಂದ ಶ್ರೀ ಬಡಗೂಡಮ್ಮ ದೇವಿಯ ಉತ್ಸವ ಹಾಗೂ ಉಪ್ಪಾರಹಳ್ಳಿ ಗ್ರಾಮದಿಂದ ಹನುಮಂತ ದೇವರ ಸರ್ವಾಲಂಕೃತ ಉತ್ಸವ ಮೂರ್ತಿಗಳ ಮೆರವಣಿಗೆಯ ಜೊತೆ ಮಹಿಳೆಯರು ಹೊತ್ತು ಸಾಗುವ ತಂಬಿಟ್ಟಿನಾರತಿ ವಿಶೇಷಗಳಲ್ಲೊಂದು. ದೇವಾಲಯದ ಆವರಣದಲ್ಲಿ ಸಮಾಗಮವಾಗುವ ಅಣ್ಣ-ತಂಗಿಯರ ಉತ್ಸವ ಮೂರ್ತಿಗಳ ವೈಭವದೊಂದಿಗೆ ಶನಿವಾರ ಬೆಳಗಿನ ಜಾವ ಕೊಂಡೋತ್ಸವ ಹಾಗೂ ಸಂಜೆ ಮಹಾ ರಥೋತ್ಸವ ಜರುಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-40-849914215

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.