ನಾಗಮಂಗಲ: ಯುಗಾದಿ ಹಬ್ಬದ ನಂತರ ಪ್ರಾರಂಭವಾಗುವ ಬೇಸಾಯಕ್ಕೆ ಮುನ್ನಡಿಯಾದ ರೈತ ಸಂಸ್ಕೃತಿ ಮತ್ತು ಮಣ್ಣಿನೊಡಗಿನ ಸಂಸ್ಕಾರದ ಸಂಕೇತ ‘ಹೊನ್ನಾರು’ ಸಂಸ್ಕೃತಿಗೆ ತಾಲ್ಲೂಕಿನ ಕಸಬಾ ಹೋಬಳಿ, ತುಪ್ಪದಮಡು ಗ್ರಾಮದ ರೈತರು ಮಳೆರಾಯನ ಪ್ರಾರ್ಥನೆಯೊಂದಿಗೆ ನಾಂದಿ ಹಾಡಿದರು.

ಯುಗಾದಿಯ ದಿನ ಗುರುವಾರ ಸೂರ್ಯೋದಯವಾಗುತ್ತಿದ್ದಂತೆ ನೂತನ ಸಂವತ್ಸರದ ಸೂರ್ಯನ ರಶ್ಮಿಗಳನ್ನು ಸ್ವಾಗತಿಸಲಾಯಿತು. ಪರಾಭವ ನಾಮ ಸಂವತ್ಸರದ ಹೊಸ ಪಂಚಾಗವನ್ನು ನೋಡಿಸಿದ ಗ್ರಾಮದ ಮುಖ್ಯಸ್ಥರು ಗ್ರಾಮದ ಹೆಸರಿಗೂ ಮತ್ತು ಪ್ರಸ್ತುತ ಸಂವತ್ಸವಕ್ಕೂ ತಾಳೆಯಾಗುವ ಹೆಸರಿನ ರೈತನನ್ನು ಆಯ್ಕೆ ಮಾಡಿ, ಅರ್ಚಕರು ಹಾಗೂ ಗ್ರಾಮದ ಮುಖಂಡರೊಂದಿಗೆ ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿರುವ ಗರುಡಗಂಭದ ಮುಂದೆ ನೊಗ-ನೇಗಿಲು ಮತ್ತು ಸರಪಳಿ ಸೇರಿದಂತೆ ರೈತ ಮಿತ್ರ ಎತ್ತುಗಳಿಗೆ ಪೂಜೆ ಸಲ್ಲಿಸಿದರು.

ಈ ವರ್ಷದ ಬೇಸಾಯದ ಹೆಸರು ಬಲವುಳ್ಳ ತಮ್ಮಣ್ಣಗೌಡರಿಗೆ ಹೂಮಾಲೆ ಹಾಕಿ, ಪೇಟ ತೊಡಿಸಿ ಆರಂಭವನ್ನು ಪ್ರಾರಂಭಿಸುವಂತೆ ಊರ ಯಜಮಾನರು ಪ್ರಾರ್ಥಿಸಿದರು. ಯಜಮಾನರ ಮಾತಿನ ಗೌರವದೊಂದಿಗೆ ತಮ್ಮ ಹೆಗಲ ಮೇಲೆ ನೇಗಿಲು ಹೊತ್ತು ಎತ್ತುಗಳೊಂದಿಗೆ ಗ್ರಾಮದ ಈಶಾನ್ಯ ದೇವದಿಕ್ಕಿನಲ್ಲಿರುವ ಜಮೀನಿನಲ್ಲಿ ಬೆನಕ ಮತ್ತು ಭೂತಾಯಿ ಪೂಜೆ ನೆರವೇರಿಸಿ ಮಣ್ಣಿನ ಜೊತೆಗಿನ ನೇಗಿಲ ಸಂಬಂಧಕ್ಕೆ ರೈತರು ಮಧ್ಯವರ್ತಿಯಾಗಿ ಉಳುಮೆ ಮಾಡಿದರು.

ರೈತ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಭೂತಾಯಿಗೆ ಹಾಗೂ ಮಳೆರಾಯನಿಗೆ ಜೈಕಾರ ಕೂಗುವ ಮೂಲಕ ವರುಣನ ಪ್ರಾರ್ಥನೆಯೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ವರ್ಷ ಮಳೆರಾಯ ಧರೆಯನ್ನು ತಂಪೆರೆದು ಬೆಳೆ ಬೆಳೆಯಲು ಸಹಕರಿಸಲಿ ಎಂದು ಪ್ರಾರ್ಥಿಸಿದರು.

ಮಾಯಣ್ಣ ಗೌಡನಕೊಪ್ಪಲು ಗ್ರಾಮ ಸೇರಿದಂತೆ ತಾಲ್ಲೂಲೂಕಿನ ಬಹುತೇಕ ಹಳ್ಳಿಗಳಲ್ಲಿ ಹೊನ್ನಾರು ಆಚರಣೆ ನಡೆಯಿತು.

ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಈ ವಿಶಿಷ್ಟ ಆಚರಣೆಯನ್ನು ನೆರವೇರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-40-1434506557

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.