ನಾಗಮಂಗಲ: ಸೇವಾ ನಿವೃತ್ತಿ ಹೊಂದುತ್ತಿರುವ ನಾಗಮಂಗಲ ಉಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸಿದ್ದೇಗೌಡ ಅವರು ಅಂಚೆ ಇಲಾಖೆಗೆ ಬಹುದೊಡ್ಡ ಆಸ್ತಿ ಮತ್ತು ಜನಸ್ನೇಹಿ ಆಡಳಿತ ನೀಡಿರುವ ಅದರ್ಶ ವ್ಯಕ್ತಿ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಎಂ.ಡಿ. ಆಕಾಶ್ ಶ್ಲಾಘಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಗಮಂಗಲ ಉಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸಿದ್ದೇಗೌಡ ಅವರ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂಚೆ ಅಧಿಕಾರಿ ರಾಜು ಕಾಳೇಶ್ವರ್ ಮಾತನಾಡಿ, ‘ನಾಗಮಂಗಲ ಅಂಚೆ ಉಪ ವಿಭಾಗ ಕಚೇರಿಯ ಪೋಸ್ಟ್ ಮಾಸ್ಟರ್ ಸಿದ್ದೇಗೌಡ ಅವರ ಕಾರ್ಯತಂತ್ರ ಮತ್ತು ಪರಿಶ್ರಮದಿಂದಾಗಿ ನವೆಂಬರ್ ತಿಂಗಳಲ್ಲಿ ಖಾತೆ ತೆರೆಯುವ ಅಭಿಯಾನದಲ್ಲಿ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆ ನಂಬರ್ ಒನ್ ಆಗಿ ನಾಗಮಂಗಲ ಅಂಚೆ ಉಪ ವಿಭಾಗ ಕಚೇರಿ ಪ್ರಥಮ ಸ್ಥಾನ ಪಡೆದುಕೊಂಡಿತು’ ಎಂದರು.

ಅಂಚೆ ಅಧಿಕಾರಿಗಳಾದ ನಾಗರಾಜು, ಶಿವಣ್ಣ, ವೈ.ಪಿ.ಬೋವಿ, ಸಿದ್ದೇಗೌಡರ ಪುತ್ರಿ ಮಧುಶ್ರೀ ಮಾತನಾಡಿದರು. ಸಿದ್ದೇಗೌಡ ಅವರಿಗೆ ಸಮಾರಂಭದ ವೇದಿಕೆಯಲ್ಲಿಯೇ ಮಾಸಾಶನ ಮಂಜೂರಾತಿ ಪತ್ರ ನೀಡಿ ಗೌರವಿಸಲಾಯಿತು.ಅಧಿಕಾರಿಗಳಾದ ನಾಗೇಂದ್ರ, ರಾಮಣ್ಣ, ಜಿ.ಬಿ.ಶಿವಣ್ಣ, ಶ್ರೀಕಾಂತ್, ತಿಮ್ಮರಾಯಿಗೌಡ, ಸಿದ್ದೇಗೌಡರ ಪತ್ನಿ ಸರಸ್ವತಿ, ಪುತ್ರ ಹಿತೇಶ್ಗೌಡ, ನಾಗಮಂಗಲ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.